ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸರ್ : ಎರಡನೇ ಸ್ಥಾನಕ್ಕೇರಿದ ಕ್ರಿಸ್ ಗೇಲ್!

By Mahesh
ODI most sixes in Career, Chris Gayle plunges to top 2

ಬೆಂಗಳೂರು, ಜುಲೈ 29: ಟಿ20 ಕ್ರಿಕೆಟ್ ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಏಕದಿನ ಕ್ರಿಕೆಟ್ ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಆದರೆ, ಬಾಂಗ್ಲಾದೇಶ ವಿರುದ್ಧ ಸರಣಿ ಉಳಿಸಿಕೊಳ್ಳಲು ವೆಸ್ಟ್ ಇಂಡೀಸ್ ಗೆ ಸಾಧ್ಯವಾಗಲಿಲ್ಲ.

ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗೇಲ್​ ಅವರು 5 ಸಿಕ್ಸರ್​ ಸಿಡಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಗಳಿಸಿರುವ ಆಟಗಾರರ ಪೈಕಿ ಗೇಲ್ ಈಗ ನಂ.2 ಸ್ಥಾನಕ್ಕೇರಿದ್ದಾರೆ.

ಗೇಲ್​ ಈ ಪಂದ್ಯಕ್ಕೂ ಮುನ್ನ 270 ಸಿಕ್ಸರ್​ ಗಳಿಸಿ ಈ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದರು. ಈಗ ಗೇಲ್ ಅವರು 275 ಸಿಕ್ಸ್ ಗಳಿಸಿದ್ದಾರೆ. ಶ್ರೀಲಂಕಾದ ಸನತ್​ ಜಯಸೂರ್ಯ (270) ಅವರು ಈ ಮೂಲಕ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.

ಅತಿ ಹೆಚ್ಚು ಸಿಕ್ಸರ್ ಗಳಿಕೆಯಲ್ಲಿ ಪಾಕಿಸ್ತಾನದ ಆಲ್​ರೌಂಡರ್​ ಶಾಹಿದ್​ ಆಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ಆಫ್ರಿದಿ 351 ಸಿಕ್ಸರ್​ ಬಾರಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಭಾರತ ತಂಡದ ಮಾಜಿ ನಾಯಕ ಧೋನಿ(217), 5 ನೇಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಎ ಬಿಡಿ ವಿಲಿಯರ್ಸ್​(204) ಇದ್ದಾರೆ.

ಟಾಪ್ 5 ಅತ್ಯಧಿಕ ಸಿಕ್ಸ್ ಗಳಿಸಿರುವ ಆಟಗಾರರು:
* 315: ಶಾಹೀದ್ ಅಫ್ರಿದಿ(ಪಾಕಿಸ್ತಾನ)
* 275 : ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
* 270: ಸನತ್ ಜಯಸೂರ್ಯ (ಶ್ರೀಲಂಕಾ)
* 217: ಎಂಎಸ್ ಧೋನಿ (ಭಾರತ)
*204 : ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)

Story first published: Sunday, July 29, 2018, 12:45 [IST]
Other articles published on Jul 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X