ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದು ಆಗಸ್ಟ್ 14ರ ಇದೇ ದಿನ

On This Dayr: When Sachin Tendulkar hit his first Test century

ನವದೆಹಲಿ, ಆಗಸ್ಟ್ 14: ಕ್ರಿಕೆಟ್ ದಂತಕತೆ ಭಾರತದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಚೊಚ್ಚಲ ಶತಕ ಬಾರಿಸಿದ್ದು, ವಿಶ್ವ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಗಮನ ಸೆಳೆದಿದ್ದು 1990ರ ಆಗಸ್ಟ್ 14ರ ಇದೇ ದಿನ. ಅಂದು ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಸಚಿನ್ ಮೊದಲ ಟೆಸ್ಟ್ ಶತಕ ದಾಖಲಿಸಿದ್ದರು.

ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್

ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಭಾರತ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿತ್ತು. ಇದರಲ್ಲಿ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆದ್ದರೆ, ಇನ್ನೆರಡು ಟೆಸ್ಟ್‌ಗಳು ಡ್ರಾ ಎನಿಸಿಕೊಂಡಿತ್ತು. ಸಚಿನ್ ಮೊದಲ ಟೆಸ್ಟ್ ಶತಕ ಬಾರಿಸಿದ್ದು ದ್ವಿತೀಯ ಟೆಸ್ಟ್‌ನಲ್ಲಿ. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಅಜೇಯ 119 ರನ್ ಬಾರಿಸಿದ್ದರು.

ಭಾರತ vs ವಿಂಡೀಸ್: ಕ್ರಿಸ್‌ ಗೇಲ್ ಹಿಂದಿಕ್ಕಲಿದ್ದಾರೆ ಭುವನೇಶ್ವರ್ ಕುಮಾರ್!ಭಾರತ vs ವಿಂಡೀಸ್: ಕ್ರಿಸ್‌ ಗೇಲ್ ಹಿಂದಿಕ್ಕಲಿದ್ದಾರೆ ಭುವನೇಶ್ವರ್ ಕುಮಾರ್!

ಮೊಹಮ್ಮದ್ ಅಝರುದ್ದೀನ್ ನಾಯಕತ್ವದಲ್ಲಿದ್ದ ಭಾರತ ತಂಡದ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಗ್ರಹಾಂ ಗೂಚ್ 116, ಮೈಕ್ ಅಥರ್ಟನ್ 131, ರಾಬಿನ್ ಸ್ಮಿತ್ 121 ರನ್‌ನೊಂದಿಗೆ 160.5 ಓವರ್‌ಗೆ 519 ರನ್ ಬಾರಿಸಿತ್ತು. ಅಝರ್ 179, ಸಂಜಯ್ ಮಂಜ್ರೇಕರ್ 93 ರನ್‌ನೊಂದಿಗೆ ಭಾರತ ತಂಡ 432 ರನ್ ಬಾರಿಸಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟ್ಸ್ಮನ್ ಅಲನ್ ಲ್ಯಾಂಬ್‌ 109 ರನ್ ಕೊಡುಗೆಯೊಂದಿಗೆ ಆತಿಥೇಯರು 320 ರನ್ ಗಳಿಸಿದ್ದರು. ಸಚಿನ್ ಅಜೇಯ 119, ಮಂಜ್ರೇಕರ್ 50, ಮನೋಜ್ ಪ್ರಭಾಕರ್ ಅಜೇಯ 67 ರನ್‌ನೊಂದಿಗೆ ಭಾರತ 90 ಓವರ್‌ಗೆ 6 ವಿಕೆಟ್ ಕಳೆದು 343 ರನ್ ಮಾಡಿ ಪಂದ್ಯವನ್ನು ಡ್ರಾ ಗೊಳಿಸಿಕೊಂಡಿತು.

ವಿಂಡೀಸ್‌ ಎದುರು ಮತ್ತೊಂದು ದಾಖಲೆಗೆ ಕೊಹ್ಲಿ-ರೋಹಿತ್‌ ಜೋಡಿ ಸಜ್ಜುವಿಂಡೀಸ್‌ ಎದುರು ಮತ್ತೊಂದು ದಾಖಲೆಗೆ ಕೊಹ್ಲಿ-ರೋಹಿತ್‌ ಜೋಡಿ ಸಜ್ಜು

ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಅತೀ ಕಿರಿಯ ಶತಕ ಸರದಾರನಾಗಿ ಮಿಂಚಿದ್ದರು. ಲಿಟ್ಲ್ ಮಾಸ್ಟರ್‌ಗೆ ಆಗ ಕೇವಲ 17ರ ಹರೆಯ. ಅಂದ್ಹಾಗೆ ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಅಂತಿಮ ಟೆಸ್ಟ್ ಆಡಿದ್ದೂ 1948ರಲ್ಲಿ ಆಗಸ್ಟ್ 14-18ರ ವರೆಗೆ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್ ನಲ್ಲಿ. ಇದರಲ್ಲಿ ಆಸೀಸ್ ಇನ್ನಿಂಗ್ಸ್‌ ಸಹಿತ 149 ರನ್ ಜಯ ಗಳಿಸಿತ್ತು.

Story first published: Wednesday, August 14, 2019, 17:32 [IST]
Other articles published on Aug 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X