ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ತಂಡದ ಆಲ್‌ರೌಂಡರ್‌ ಇಮಾದ್‌ ವಾಸಿಂಗೆ ಕಂಕಣ ಭಾಗ್ಯ

Imad Wasim 2019

ಲಾಹೋರ್‌, ಆಗಸ್ಟ್‌ 01: ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ವೇಗದ ಬೌಲರ್‌ ಹಸನ್‌ ಅಲಿ ಭಾರತೀಯ ಹುಡುಗಿಯನ್ನು ಮದುವೆಯಾಗಲಿದ್ದಾರೆಂದು ಭಾರಿ ಸುದ್ದಿಯಾಗಿತ್ತು. ಇದೀಗ ಪಾಕಿಸ್ತಾನ ತಂಡದ ಮತ್ತೊಬ್ಬ ಆಟಗಾರ ಆಲ್‌ರೌಂಡರ್‌ ಇಮಾದ್‌ ವಾಸಿಂ ಅವರಿಗೂ ಕಂಕಣ ಭಾಗ್ಯ ಕೂಡಿ ಬಂದಿದೆ.

30 ವರ್ಷದ ಬ್ಯಾಟಿಂಗ್‌ ಆಲ್‌ರೌಂಡರ್‌ ಇಮಾದ್‌, ಲಂಡನ್‌ನಲ್ಲಿ ನೆಲೆಸಿರುವ ಸಾನಿಯಾ ಅಷ್ಫಾಕ್‌ ಎಂಬಾಕೆಯನ್ನು ಇದೇ ತಿಂಗಳ (ಆಗಸ್ಟ್‌ 2019)26ರಂದು ಇಸ್ಲಾಮಬಾದ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು 'ದಿ ಡಾವ್ನ್‌' ವರದಿ ಮಾಡಿದೆ. ಇಬ್ಬರೂ ಲಂಡನ್‌ನಲ್ಲಿ ಭೇಟಿಯಾಗಿದ್ದು, ಎರಡೂ ಕಡೆಯ ಕುಟುಂಬ ಸದಸ್ಯರ ಸಮ್ಮತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.

ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌

"ವಿವಾಹ ಸಲುವಾಗಿ ನನ್ನ ವೃತ್ತಿ ಬದುಕಿನಿಂದ ಒಂದು ವಾರ ಕಾಲ ವಿರಾಮ ತೆಗೆದುಕೊಳ್ಳಲಿದ್ದೇನೆ. ಬಳಿಕ ನಾಟಿಂಗ್‌ಹ್ಯಾಮ್‌ಶೈರ್‌ ಪರ ಆಡಲು ಮರಳಲಿದ್ದೇನೆ," ಎಂದು ಸದ್ಯ ಕಂಟಿ ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ತಂಡದ ಪರ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಆಡುತ್ತಿರುವ ಇಮಾದ್‌ ವಾಸಿಂ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ತಂಡ ವೇಗದ ಬೌಲರ್‌ ಹಸನ್‌ ಅಲಿ, ಭಾರತದ ಹರಿಯಾಣ ಮೂಲದ ಶಾಮಿಯಾ ಅರ್ಝೂ ಅವರನ್ನು ವಿವಾಹವಾಗುತ್ತಿರುವುದಾಗಿ ಸುದ್ದಿಯಾಗಿತ್ತು. ಆದರೆ, ಮದುವೆಯ ವಿಚಾರ ಇನ್ನೂ ಮಾತುಕತೆಯಲ್ಲಿ ಇದೆ. ಈವರೆಗೆ ಖಾತ್ರಿಯಾಗಿಲ್ಲ ಎಂದು ಹಸನ್‌ ಅಲಿ ಹೇಳಿಕೆ ನೀಡಿದ್ದರು.

ಟೆನಿಸ್‌ನಲ್ಲಿ 2ನೇ ಇನಿಂಗ್ಸ್‌ಗಾಗಿ 26 ಕೆಜಿ ತೂಕ ಇಳಿಸಿದ ಸಾನಿಯಾ!ಟೆನಿಸ್‌ನಲ್ಲಿ 2ನೇ ಇನಿಂಗ್ಸ್‌ಗಾಗಿ 26 ಕೆಜಿ ತೂಕ ಇಳಿಸಿದ ಸಾನಿಯಾ!

ಪಾಕಿಸ್ತಾನ ತಂಡ ಕಳೆದ ತಿಂಗಳು ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆರಂಭಿಕ ಪಂದ್ಯಗಳನ್ನು ಸೋತು ಅಂತ್ಯದಲ್ಲಿ ಹೋರಾಡಿದರೂ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ಲೀಗ್‌ ಹಂತದಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಇಮಾದ್‌ ವಾಸಿಂ ಮತ್ತು ಹಸನ್‌ ಅಲಿ ಇಬ್ಬರೂ ಪಾಕಿಸ್ತಾನದ ವಿಶ್ವಕಪ್‌ ತಂಡದ ಪರ ಆಡಿದ್ದರು.

ವಿಂಡೀಸ್‌ ಪ್ರವಾಸದಲ್ಲಿ ಕೊಹ್ಲಿ-ರೋಹಿತ್‌ ಮುರಿಯಬಹುದಾದ ದಾಖಲೆಗಳಿವು ವಿಂಡೀಸ್‌ ಪ್ರವಾಸದಲ್ಲಿ ಕೊಹ್ಲಿ-ರೋಹಿತ್‌ ಮುರಿಯಬಹುದಾದ ದಾಖಲೆಗಳಿವು

ವಿಶ್ವಕಪ್‌ ಟೂರ್ನಿಯಲ್ಲಿ ಹಸನ್‌ ಅಲಿ ಅವರ ಪ್ರದರ್ಶನ ಅಷ್ಟು ಹೇಳಿಕೊಳ್ಳುವಂತಿರಲಿಲ್ಲ. ಟೂರ್ನಿಯಲ್ಲಿ ಪಾಕ್‌ ಪರ ಅವರು ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದು ಒಂದೆರಡು ವಿಕೆಟ್‌ ಪಡೆಯಲಷ್ಟೇ ಶಕ್ತರಾದರು. ಅದರಲ್ಲೂ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆದ ಟೀಮ್‌ ಇಂಡಿಯಾ ವಿರುದ್ಧದ ಹೈ ವೋಲ್ಟೇಜ್‌ ಪಂದ್ಯದಲ್ಲಿ 84 ರನ್‌ಗಳನ್ನು ಬಿಟ್ಟುಕೊಟ್ಟ ಅಲಿ ಅವರನ್ನು ನಂತರದ ಪಂದ್ಯಗಳಿಂದ ಕೈಬಿಡಲಾಗಿತ್ತು. 2016ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹಸನ್‌ ಅಲಿ, 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ಸ್‌ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರ ವೃತ್ತಿ ಬದುಕಿನ ಪ್ರಮುಖ ಹೈಲೈಟ್‌ಗಳಲ್ಲಿ ಒಂದು.

Story first published: Thursday, August 1, 2019, 17:16 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X