ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ರೀತಿಯ ಕ್ರಿಕೆಟ್ ಟ್ರೋಫಿ ನೋಡಿದ್ದೀರಾ? ಟ್ರಾಲ್‌ಗೆ ಒಳಗಾದ 'ಬಿಸ್ಕತ್ ಕಪ್‌'!

Pakistan Australia T20 Biscuit cup trophy twitter trolled

ದುಬೈ, ಅಕ್ಟೋಬರ್ 24: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನಾ ತರಹದ ಟ್ರೋಫಿಗಳನ್ನು ನೋಡಿದ್ದೀರಿ. ಸಾಮಾನ್ಯವಾಗಿ ಹೆಚ್ಚಿನ ಟ್ರೋಫಿಗಳಿಗೆ ಆಯಾ ಸರಣಿಯ ಮುಖ್ಯ ಪ್ರಾಯೋಜಕತ್ವ ವಹಿಸುವ ಕಂಪೆನಿಯ ಹೆಸರನ್ನೇ ಇಡಲಾಗುತ್ತದೆ. ಇನ್ನು ಕೆಲವು ಟ್ರೋಫಿಗಳಿಗೆ ಕ್ರಿಕೆಟ್ ಜಗತ್ತಿಗೆ ಸಂಬಂಧಿಸಿದ ವ್ಯಕ್ತಿಗಳ ಹೆಸರಿನ ಟ್ರೋಫಿಗಳೂ ಇರುತ್ತವೆ.

ಆದರೆ, ಇಲ್ಲೊಂದು ವಿಶಿಷ್ಟ ಟ್ರೋಫಿ ಇದೆ. ಪಾಕಿಸ್ತಾನ-ಆಸ್ಟ್ರೇಲಿಯಾ ತಂಡಗಳ ನಡುವೆ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಟ್ರೋಫಿ ಸಾಕಷ್ಟು ತಮಾಷೆಯ ಟ್ರೋಲ್‌ಗಳಿಗೆ ಆಸ್ಪದ ನೀಡಿದೆ.

ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮತ್ತು ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಸೇರಿ ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ. ಈ ಟ್ರೋಫಿಯ ಮೇಲ್ಭಾಗದಲ್ಲಿ ದೊಡ್ಡದಾದ 'ಬಿಸ್ಕತ್' ಇದೆ.

ಪಾಕಿಸ್ತಾನದ ಟಿಯುಸಿ ಎಂಬ ಬಿಸ್ಕತ್ ಕಂಪೆನಿ ಈ ಸರಣಿಯ ಪ್ರಾಯೋಜಕತ್ವ ವಹಿಸಿದ್ದು, ಅದಕ್ಕಾಗಿ ಟ್ರೋಫಿಗೂ 'ಬಿಸ್ಕತ್' ಸೇರಿಸಲಾಗಿದೆ. ಕ್ರಿಕೆಟ್ ಇತಿಹಾಸದಲ್ಲಿಯೇ ಈ ರೀತಿಯ ವಿಚಿತ್ರ ಶೈಲಿಯ ಟ್ರೋಫಿ ಅನಾವರಣಗೊಳಿಸುವುದು ಇದೇ ಮೊದಲು.

ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ

ಈ ಟ್ರೋಫಿಯ ಚಿತ್ರವನ್ನು ಪ್ರಕಟಿಸುತ್ತಿದ್ದಂತೆಯೇ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟ್ವಿಟ್ಟರ್‌ನಲ್ಲಿ ಮನಬಂದಂತೆ ಟ್ರೋಲ್ ಮಾಡಿದ್ದಾರೆ. ಅದ ಕೆಲವು ತಮಾಷೆಯ ಟ್ವೀಟ್‌ಗಳು ಇಲ್ಲಿವೆ....

ವಿಶ್ವಕಪ್ ಟ್ರೋಪಿ ಹೇಗಿರಬಹುದು?

ಒಂದು ವೇಳೆ ಟಿಯುಸಿ ಕಂಪೆನಿ 2019ರ ವಿಶ್ವಕಪ್ ಟ್ರೋಫಿಯ ಪ್ರಾಯೋಜಕತ್ವ ವಹಿಸಿದರೆ, ಆ ಟ್ರೋಫಿ ಹೇಗಿರಬಹುದು ಎಂದು ಶಬ್ಬೀರ್ ಸಯ್ಯದ್ ಎಂಬುವವರು ಈ ರೀತಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್

ಬಿಸ್ಕತ್ ಪ್ಯಾಕ್ ನೀಡಬಹುದು

ಈ ಟ್ರೋಫಿಯ ಬದಲು ಬಿಸ್ಕತ್ ಪ್ಯಾಕೆಟ್‌ಗಳನ್ನೇ ಎಲ್ಲರಿಗೂ ನೀಡಬಹುದು ಎಂದು ಅಮ್ಮರಾಹ್ ಎಂಬುವವರು ಲೇವಡಿ ಮಾಡಿದ್ದಾರೆ.

ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

ಸ್ಪರ್ಧೆ ಬಿಟ್ಬಿಡಿ

ಸ್ಪರ್ಧೆಯನ್ನು ನಿಲ್ಲಿಸಿಬಿಡಿ. ಕ್ರೀಡೆ ತನ್ನ ಇದುವರೆಗಿನ ಅತ್ಯಧ್ಬುತ ಟ್ರೋಫಿಯನ್ನು ಪಡೆದುಕೊಂಡಿದೆ ಎಂದು ಚಾರ್ಲಿ ರೆನಾಲ್ಡ್ಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬಿಸ್ಕತ್‌ಗೆ ಹೊಸ ಅರ್ಥ

ಪಿಸಿಬಿಯ ಕಾಲೆಳೆಯುವುದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೂಡ ಹಿಂದೆ ಬಿದ್ದಿಲ್ಲ. ಬಿಸ್ಕತ್ ನೀಡುವುದು ಮತ್ತು ಪಡೆಯುವುದು ಸಂಪೂರ್ಣವಾಗಿ ಹೊಸ ಅರ್ಥ ಪಡೆದುಕೊಂಡಿದೆ ಎಂದು ಐಸಿಸಿ ಟ್ವೀಟ್ ಮಾಡಿದೆ.

ರೋಟಿ ಕಪ್

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ನೋಡಿದಾಗ ಅವರು ರೋಟಿ ಕಪ್ ಗೆಲ್ಲಲು ತಮ್ಮ ಎಲ್ಲ ಪ್ರಯತ್ನಗಳನ್ನೂ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಪ್ರತಿಭಾ ಎಂಬುವವರ ಟ್ವೀಟ್ ಮಾಡಿದ್ದಾರೆ.

Story first published: Wednesday, October 24, 2018, 15:47 [IST]
Other articles published on Oct 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X