ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಪಾಕ್ ವೇಗಿ ಮೊಹಮ್ಮದ್ ಅಮಿರ್

Pakistan pacer Mohammed Amir announces retirement

ಪಾಕಿಸ್ತಾನ ಕ್ರಿಕೆಟ್‌ನ ವೇಗದ ಬೌಲರ್ ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದಾರೆ. ಕಳೆದ ವರ್ಷ ಅತಿಯಾದ ಕ್ರಿಕೆಟ್‌ನ ಕಾರಣವನ್ನು ನೀಡಿ ಟೆಸ್ಟ್‌ ಮಾದರಿಗೆ ವಿದಾಯವನ್ನು ಘೋಷಿಸಿದ್ದ ಅಮಿರ್ ಟೀಕೆಗೆ ಗುರಿಯಾಗಿದ್ದರು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸೀಮಿತ ಓವರ್‌ಗಳ ಮಾದರಿಗೂ ಅಮೀರ್ ನಿವೃತ್ತಿಯನ್ನು ಘೋಷಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಅನುಭವಿ ವೆಗಿಯಾಗಿರುವ ಮೊಹಮ್ಮದ್ ಅಮಿರ್ ಅವರನ್ನು ಕೈಬಿಡಲಾಗಿತ್ತು. ಅದಾದ ಬಳಿಕ ಈಗ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೊಹಮ್ಮದ್ ಅಮಿರ್ ತಮ್ಮ 28ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪೃಥ್ವಿ ಶಾ ವೀಕ್‌ನೆಸ್ ಕಾಮೆಂಟರಿಯಲ್ಲಿ ವಿವರಿಸಿದ ಪಾಂಟಿಂಗ್, ಮರುಕ್ಷಣವೇ ಶಾ ಬೌಲ್ಡ್!ಪೃಥ್ವಿ ಶಾ ವೀಕ್‌ನೆಸ್ ಕಾಮೆಂಟರಿಯಲ್ಲಿ ವಿವರಿಸಿದ ಪಾಂಟಿಂಗ್, ಮರುಕ್ಷಣವೇ ಶಾ ಬೌಲ್ಡ್!

2009ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಬಿಸಿದ್ಧರು. ಇಲ್ಲಿಯ ಮರೆಗೆ ಮೂರು ಮಾದರಿಯಲ್ಲಿ 147 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಮಿರ್ 259 ವಿಕೆಟ್ ಪಡೆದಿದ್ದಾರೆ.

2009ರಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಮೊಹಮದ್ ಅಮಿರ್ ಕೂಡ ಭಾಗವಾಗಿದ್ದರು. ಆದರೆ ಅದಾದ ಬಳಿಕ ಮೊಹಮ್ಮದ್ ಅಮಿರ್ ಕ್ರಿಕೆಟ್ ವೃತ್ತಿ ಜೀವನ ಇಳಿಮುಖವನ್ನು ಕಂಡಿತ್ತು. 2010ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅಮಿರ್ ಭಾಗಿಯಾಗಿರುವುದು ಸಾಭೀತಾಯಿತು. ಇದು ಅಮಿರ್ ಜೀವನದ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ಇದಕ್ಕಾಗಿ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅವರು ನಿಷೇಧಕ್ಕೂ ಒಳಗಾಗಿದ್ದರು.

ವಿರಾಟ್ ಕೊಹ್ಲಿ ಟಾಸ್ ಗೆದ್ದ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತೇ ಇಲ್ಲ!ವಿರಾಟ್ ಕೊಹ್ಲಿ ಟಾಸ್ ಗೆದ್ದ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತೇ ಇಲ್ಲ!

ನಿಷೇಧ ಅಂತ್ಯವಾದ ಬಳಿಕ ಮತ್ತೆ ಪಾಕಿಸ್ತಾನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡರು. 2017ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾದರು. ಅದಾದ ಬಳಿಕ ಅತಿಯಾದ ಕ್ರಿಕೆಟ್‌ನ ಕಾರಣವನ್ನು ಮುಂದಿಟ್ಟು ಟೆಸ್ಟ್ ಕ್ರಿಕೆಟ್‌ಗೆ 2019ರಲ್ಲಿ ಆಮಿರ್ ನಿವೃತ್ತಿ ಘೋಷಿಸಿದರು. ಈಗ ಟಿ20 ಹಾಗೂ ಏಕದಿನ ಮಾದರಿಗೂ ಅವರು ವಿದಾಯ ಹೇಳಿದ್ದಾರೆ.

Story first published: Thursday, December 17, 2020, 13:46 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X