Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

Pakistan players want to play like Kohli: Younis Khan

ಲಂಡನ್‌, ಜೂನ್‌ 03: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಕ್ರಿಕೆಟ್‌ ಪಂದ್ಯ ವೀಕ್ಷಣಗೆ ಇಡೀ ಜಗತ್ತೇ ಕಾದು ಕುಳಿತಿರುತ್ತದೆ. ಇತ್ತಂಡಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ನಡೆದು ಸುಮಾರು 15 ವರ್ಷಗಳೇ ಕಳೆದಿದ್ದು, ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿವೆ.

ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ವೈರತ್ವ ಪಂದ್ಯದ ವೇಳೆ ಎಷ್ಟೇ ಇದ್ದರೂ, ಕ್ರಿಕೆಟ್‌ ಮೈದಾನದಿಂದ ಆಚೆಗೆ ಆಟಗಾರರು ಒಬ್ಬರನ್ನೊಬ್ಬರು ಗೌರವಿಸುತ್ತದೆ. ಇದಕ್ಕೆ ಹಲವು ನಿದರ್ಶನಗಳಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌, ಪಾಕ್‌ನ ಹಲವು ಯುವ ಕ್ರಿಕೆಟಿಗರಿಗೆ ವಿರಾಟ್‌ ಕೊಹ್ಲಿ ಸ್ಫೂರ್ತಿಯಾಗಿದ್ದು, ಅವರಂತೆ ಆಡುವ ಹೆಬ್ಬಯಕೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

"ಪಾಕಿಸ್ತಾನದಲ್ಲಿ ವಿರಾಟ್‌ ಕೊಹ್ಲಿ ಅವರನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಿದೆ. ಪಾಕಿಸ್ತಾನದ ಹಲವು ಕ್ರಿಕೆಟಿಗರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ, ಅವರಂತೆ ಫೀಟ್ನೆಸ್‌ ಕಾಯ್ದುಕೊಳ್ಳುವ ಹಾಗೂ ಅವರ ಸ್ವಭಾವ ಅನುಕರಿಸುವ ಹೆಬ್ಬಯಕೆ ಇದೆ. ಏಷ್ಯಾ ಕಪ್‌ನಲ್ಲಿ ವಿರಾಟ್‌ ಆಡದೇ ಇದ್ದರು ಇಂಡೊ-ಪಾಕ್‌ ಪಂದ್ಯಕ್ಕೆ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಕೊಹ್ಲಿ ಪ್ರಭಾವ ದೊಡ್ಡದಿದೆ,'' ಎಂದು ಯೂನಿಸ್‌ ಖಾನ್‌ ಟೆಲಿವಿಷನ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ನಡುವಣ ಜಿದ್ದಾಜಿದ್ದಿನ ಸ್ಪರ್ಧೆ ಕುರಿತಾಗಿ ಮಾತನಾಡಿದ್ದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, "ಇಂಡೊ-ಪಾಕ್‌ ಪಂದ್ಯ ಹೆಚ್ಚು ಕುತೂಹಲ ಹಿಡಿದಿಟ್ಟಿರುತ್ತದೆ. ಇದನ್ನು ಹಲವು ಬಾರಿ ಹೇಳಿದ್ದೇನೆ. ಅಭಿಮಾನಿಗಳ ದೃಷ್ಠಕೋನಕ್ಕೂ ಆಟಗಾರರ ದೃಷ್ಠಿಕೋನಕ್ಕೂ ಸಾಕಷ್ಟು ವ್ಯೆತ್ಯಾಸವಿದೆ. ಪಂದ್ಯಕ್ಕೂ ಮುನ್ನ ನಿರೀಕ್ಷೆಯ ಭಾರ ಮತ್ತು ಉತ್ಸುಕತೆಯ ಅನುಭವ ಖಂಡಿತಾ ಆಗುತ್ತದೆ. ಆದರೆ, ಮೈದಾನಕ್ಕೆ ಇಳಿದ ಬಳಿಕ ಎಲ್ಲವೂ ವೃತ್ತಿಪರವಾಗಿಬಿಡುತ್ತದೆ,'' ಎಂದು ಹೇಳಿದ್ದರು.

"ಒಂದು ತಂಡವಾಗಿ ಗೆಲ್ಲ ಬೇಕಿರುವ ಮತ್ತೊಂದು ಪಂದ್ಯವಷ್ಟೇ. ಕ್ರೀಡಾಂಗಣದಲ್ಲಿನ ವಾತಾವರಣ ವಿಭಿನ್ನವಾಗಿ ಇರುವುದರಿಂದ ಕೊಂಚ ಒತ್ತಡ ಎದುರಾಗುವುದು ಸಹಜ. ಇದೊಂದು ಕ್ರಿಕೆಟ್‌ ಪಂದ್ಯವಷ್ಟೇ. ಇದನ್ನೇ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಒಳ್ಳೆ ಕ್ರಿಕೆಟ್‌ ಆಡಿದಲ್ಲಿ ಉತ್ತಮ ಸ್ಥಾನ ನಮ್ಮದಾಗಲಿದೆ,'' ಎಂದು ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್‌ 16ರಂದು ಮುಖಾಮೂಖಿಯಾಗುತ್ತಿದ್ದು, ಇಡೀ ಕ್ರಿಕೆಟ್‌ ಜಗತ್ತೇ ಈ ಪಂದ್ಯ ವೀಕ್ಷಣೆಗಾಗಿ ಕಾದು ಕುಳಿತಿದೆ.

Story first published: Monday, June 3, 2019, 18:17 [IST]
Other articles published on Jun 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+