ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷ

PCB Chairman Ramiz Raja praises Englands batting against Pakistan

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ರಾವಲ್ಪಿಂಡಿಯಲ್ಲಿ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಆಕ್ರಮಣಕಾರಿಯಾಗಿ ಆಡಿದೆ. ಇದರ ಪರಿಣಾಮವಾಗಿ ಬೆನ್ ಸ್ಟೋಕ್ಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 657 ರನ್‌ಗಳನ್ನು ಗಳಿಸಿದೆ. ಇಂಗ್ಲೆಂಡ್ ತಂಡದ ಈ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಮೆಚ್ಚುಗೆ ಸೂಚಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಲ್ಲಿಯೂ ಇಂಗ್ಲೆಂಡ್ ಆಟಗಾರರು ಆಕ್ರಮಣಕಾರಿ ಪ್ರದರ್ಶನ ನೀಡಿದ್ದಾರೆ. ತಂಡದ ನಾಲ್ವರು ಆಟಗಾರರು ಶತಕವನ್ನು ಸಿಡಿಸಿ ಮಿಂಚಿದ್ದು ಹಲವು ದಾಖಲೆಗಳನ್ನು ಇಂಗ್ಲೆಂಡ್ ತಂಡ ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಪಿಚ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಖಂಡನೆ ವ್ಯಕ್ತಪಡಿಸಿದ್ದು ಪಿಸಿಬಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಇಂಗ್ಲೆಂಡ್ ತಂಡದ ಪ್ರದರ್ಶನವನ್ನು ಹೊಗಳಿ ಮಾತನಾಡಿದ್ದಾರೆ.

ಫಿಫಾ ವಿಶ್ವಕಪ್: ಪೊಲಾಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆಫಿಫಾ ವಿಶ್ವಕಪ್: ಪೊಲಾಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆ

"ಇಂಗ್ಲೆಂಡ್ ತಂಡದ ಪ್ರದರ್ಶನ ನಿಜಕ್ಕೂ ಅದ್ಭುತ, ಡಿಆರ್ಎಸ್ ತೆಗೆದುಕೊಂಡಿದ್ದ ಸಂದರ್ಭದಲ್ಲಿ ಮಾತ್ರವೇ ಪಾಕಿಸ್ತಾನ 5 ನಿಮಿಷಗಳಲ್ಲಿ 30 ರನ್‌ಗಳನ್ನು ಬಿಟ್ಟುಕೊಟ್ಟಿಲ್ಲ. ಇದು ನಿಜಕ್ಕೂ ಅದ್ಭುತ. ಪಿಚ್ಚನ್ನು ಬಳಸಿಕೊಂಡು ಹೇಗೆ ಅದ್ಭುತವಾಗಿ ಬ್ಯಾಟಿಂಗ್ ನಡೆಸಬೇಕು ಎಂಬುದಕ್ಕೆ ಇದು ಅದ್ಭುತ ಉದಾಹರಣೆ. 3 ವಿಕೆಟ್ ಕಳೆದುಕೊಂಡು ತಂಡಗಳು 350ರಿಂದ 400 ರನ್‌ಗಳನ್ನು ಗಳಿಸುವುದು ಸಾಧ್ಯವಿದೆ. ಆದರೆ ಇದು ಅದ್ಭುತ. ಅವರಿಗೆ ತಮ್ಮ ನಿರ್ಭೀತ ಆಟದ ಮೇಲೆ ಸಾಕಷ್ಟು ಸ್ಪಷ್ಟತೆಯಿದೆ. ಈ ಥರದ ಬ್ಯಾಟಿಂಗ್‌ಅನ್ನು ಆನು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ ರಮೀಜ್ ರಾಜಾ.

ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 657 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಕ್ರಾವ್ಲೆ 122 ರನ್‌ಗಳಿಸಿದರೆ ಡಕ್ಕೆಟ್ 107 ರನ್‌ಗಳಿಸಿದರು. ಬಳಿಕ ಬಂದ ಒಲ್ಲೀ ಪೋಪ್ ಕೂಡ 108 ರನ್‌ಗಳನ್ನು ಗಳಿಸಿದರು. ನಾಲ್ಕನೇ ಆಟಗಾರನಾಗಿ ಶತಕ ಸಿಡಿಸಿದ ಬ್ರೂಕ್ ಕೇವಲ 80 ಎಸೆತಗಳಲ್ಲಿ ಶತಕದ ಸಾಧನೆ ಮಾಡುವಲ್ಲಿ ಯಶಸ್ವಿಯಾದರು.

ಇನ್ನು ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ್ದು ಅದ್ಭುತ ಆರಂಬ ಪಡೆದುಕೊಂಡಿದೆ. ಯಾವುದೇ ವಿಕೆಟ್ ಕಳೆದುಕೊಳ್ಳದೆ ಪಾಕಿಸ್ತಾನ 181 ರನ್‌ಗಳಿಸಿದ್ದು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದೆ. ಅಬ್ದುಲ್ಲಾ ಶಫೀಕ್ 89 ರನ್‌ಗಳಿಸಿದರೆ ಇಮಾಮ್ ಉಲ್ ಹಕ್ 90 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ.

Story first published: Saturday, December 3, 2022, 5:50 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X