ಮೈಖೇಲ್ ನಲ್ಲಿ ಫ್ಯಾಂಟಸಿ ಲೀಗ್ ಆಡಿ, ಬಹುಮಾನ ಗೆಲ್ಲಿ!

Posted By:
Predict the best XI, win exciting prizes in fantasy league, powered by CricBattle
Mykhel Cricket Fantasy League | Oneindia Kannada

ಬೆಂಗಳೂರು, ಏಪ್ರಿಲ್ 02: ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ ಹೊಸ ಸೀಸನ್ ನಲ್ಲಿ ಅಭಿಮಾನಿಗಳು ಸಕ್ರಿಯವಾಗಿ ಪಾಲ್ಗೊಂಡು, ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಮೈಖೇಲ್ ವೆಬ್ ತಾಣವು ಒದಗಿಸುತ್ತಿದೆ. ಕ್ರಿಕ್ ಬ್ಯಾಟಲ್ ಸಹಯೋಗದೊಂದಿಗೆ ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಲೀಗ್ ಆರಂಭಿಸುತ್ತಿದೆ.

ಈ ಫ್ಯಾಂಟಸಿ ಕ್ರಿಕೆಟ್ ಲೀಗ್ ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಡುವ XI ತಂಡವನ್ನು ಆಯ್ಕೆ ಮಾಡಬಹುದು. ನಿಮ್ಮ ಆಯ್ಕೆಯ ಆಟಗಾರರು ಕಾರ್ಯಕ್ಷಮತೆ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಅಂದಿನ ಬಹುಮಾನ ಸಿಗಲಿದೆ.

ಪ್ರತಿ ದಿನ, ಪ್ರತಿ ಪಂದ್ಯ, ಪ್ರತಿ ವಾರ ನೀವು ಈ ಲೀಗ್ ನಲ್ಲಿ ಪಾಲ್ಗೊಳ್ಳಬಹುದು. ಒಟ್ಟಾರೆಯಾಗಿ ಸೀಸನ್ ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೂ ಖಚಿತ ಬಹುಮಾನ ಸಿಗಲಿದೆ.

ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ

ಫ್ಯಾಂಟೀಸ್ ಲೀಗ್ ಬಗ್ಗೆ ಮಾತನಾಡಿದ ಮೈಖೆಲ್ ಸಿಇಒ ಶ್ರೀರಾಮ್ ಹೆಬ್ಬಾರ್, ಕ್ರಿಕೆಟ್ ಜಾಗತಿಕ ಕ್ರೀಡೆಯಾಗಿದ್ದು, ಅಭಿಮಾನಿಗಳ ಅಗತ್ಯಕ್ಕೆ ತಕ್ಕಂತೆ ಫ್ಯಾಂಟಸಿ ಲೀಗ್ ಗೇಮ್ ನಮ್ಮ ವೇದಿಕೆಯಿಂದ ಒದಗಿಸುತ್ತಿದ್ದೇವೆ. ಈ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಆಟವನ್ನು ಇನ್ನಷ್ಟು ಹತ್ತಿರವಾಗಿಸಿಕೊಳ್ಳಬಹುದು. ಇಂಗ್ಲೀಷ್ ಅಲ್ಲದೆ ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಕೂಡಾ ಲೀಗ್ ಆಡುವ ಅವಕಾಶ ನೀಡಲಾಗಿದೆ. ಈ ರೀತಿ ಸ್ಥಳೀಯ ಭಾಷೆಯಲ್ಲಿ ಕ್ರಿಕೆಟ್ ಲೀಗ್ ಗೇಮ್ ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.

ಕ್ರಿಕೆಟ್ ಬ್ಯಾಟಲ್ ನ ಸಿಇಒ ರಾಕೇಶ್ ದೇಸಾಯಿ ಮಾತನಾಡಿ, ಮೈಖೇಲ್ ನಲ್ಲಿ ಸ್ಥಳೀಯ ಭಾಷೆ, ಅಭಿಮಾನಿಗಳಿಗೆ ತಕ್ಕ ವೇದಿಕೆ ಒದಗಿಸುವ ಸಾಮರ್ಥ್ಯ ಕಂಡು ಬಂದಿದ್ದರಿಂದ ಈ ಕ್ರಿಕೆಟ್ ಲೀಗ್ ಗೆ ತಾಂತ್ರಿಕ ನೆರವು ಒದಗಿಸುತ್ತಿದ್ದೇವೆ. ಫ್ಯಾಂಟಸಿ ಕ್ರಿಕೆಟ್ ಲೀಗ್ ನಲ್ಲಿ ಆಟದ ಜೊತೆಗೆ ಗಳಿಕೆಗೂ ಅವಕಾಶವಿದೆ ಎಂದರು.

ಈ ಲೀಗ್ ಆಡಲು ಹೆಚ್ಚು ಶ್ರಮಪಡಬೇಕಾಗಿಲ್ಲ. ಲಾಗ್ ಆನ್ ಆಗಿ ನೋಂದಣಿ ಮಾಡಿಕೊಂಡರೆ ಸಾಕು, ನಿಮ್ಮ ತಂಡವನ್ನು ನಿಮ್ಮ ಬಜೆಟ್ ಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಸೇವ್ ಮಾಡಿಕೊಳ್ಳಿ. ಐಪಿಎಲ್ ಪಂದ್ಯಕ್ಕೆ ತಕ್ಕಂತೆ ನಿಮ್ಮ ಆಡುವ XI ಕಣಕ್ಕಿಳಿಸಿ, ಅಂಕ ಗಳಿಸಿ, ದುಡ್ಡು ಮಾಡಿ.

ಉದಾಹರಣೆಗೆ ನಿಮ್ಮ ಆಯ್ಕೆಯ ಆಟಗಾರರು 25, 30, ಅರ್ಧಶತಕ, ಸೆಂಚುರಿ..ಇತ್ಯಾದಿ ಗಳಿಸುತ್ತಿದ್ದಂತೆ, ಹೆಚ್ಚುವರಿ ರನ್ ರೇಟ್ ಹೊಂದಿದ್ದರೆ ಅಂಕಗಳು ನಿಮ್ಮ ಖಾತೆ ತುಂಬುತ್ತಾ ಹೋಗುತ್ತೆ. ಇದೇ ರೀತಿ ಬೌಲರ್ ವಿಕೆಟ್ ಗಳಿಸುತ್ತಿದ್ದಂತೆ, ಮೇಡನ್ ಓವರ್ ಹಾಕಿದರೆ, ಉತ್ತಮ ಎಕಾನಾಮಿ ದರ ಹೊಂದಿದ್ದರೆ ಅಂಕ ಸಿಗುತ್ತದೆ.

ವಿಕೆಟ್ ಕೀಪರ್ ಆಗಿದ್ದರೆ ಸ್ಟಂಪ್, ರನ್ ಔಟ್, ಕ್ಯಾಚಿಗೆ ಅಂಕಗಳು ಲಭಿಸಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 2, 2018, 13:56 [IST]
Other articles published on Apr 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ