ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ರಘುರಾಮ್ ಭಟ್ ಅವಿರೋಧವಾಗಿ ಆಯ್ಕೆ

ಕರ್ನಾಟಕದ ಮಾಜಿ ಆಟಗಾರ ಎಡಗೈ ಸ್ಪಿನ್ನರ್ ರಘುರಾಮ್ ಭಟ್ ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ರಘುರಾಮ್ ಭಟ್ ಜೊತೆಗೆ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಕೂಡ ನೇಮಕಗೊಂಡಿದ್ದಾರೆ.

1980 ರಿಂದ 1993ರವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿರುವ ರಘುರಾಮ್ ಭಟ್ 1983ರಲ್ಲಿ ಪಾಕಿಸ್ತಾನ ವಿರುದ್ಧ ಹಾಗೂ ಅದೇ ವರ್ಷದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ತಲಾ 1 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಈ ಎರಡು ಟೆಸ್ಟ್ ಪಂದ್ಯಗಳಲ್ಲಿ ರಘುರಾಮ್ ಭಟ್ 4 ವಿಕೆಟ್ ಪಡೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 374 ವಿಕೆಟ್ ಕಬಳಿಸಿದ್ದಾರೆ.

ನವೆಂಬರ್ 20ರಂದು ನಡೆಯಬೇಕಿದ್ದ ಚುನಾವಣೆಗೆ ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಬಿ.ಎನ್. ಮಧುಕರ್, ಸಂಜಯ್ ಪೋಳ್ ಹಾಗೂ ವಿನಯ್ ಮೃತ್ಯುಂಜಯ ಅವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಬುಧವಾರ (ನ.9) ಕೊನೆಯ ದಿನಾಂಕವಾಗಿತ್ತು. ಅಂತೆಯೇ ಈ ಮೇಲ್ಕಂಡ ಸದಸ್ಯರು ನಾಮಪತ್ರ ಹಿಂಪಡೆದ ಪರಿಣಾಮ ಕೆಎಸ್‌ಸಿಎ ಅಧ್ಯಕ್ಷರಾಗಿ ರಘುರಾಮ್ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

IPL 2023: RCB ಅಭಿಮಾನಿಗಳಿಗೆ ಗುಡ್‌ನ್ಯೂಸ್: ಮೊದಲ ಪಂದ್ಯದಲ್ಲಿ ಕ್ರಿಸ್‌ಗೇಲ್‌ ಜೊತೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಎಬಿಡಿ!IPL 2023: RCB ಅಭಿಮಾನಿಗಳಿಗೆ ಗುಡ್‌ನ್ಯೂಸ್: ಮೊದಲ ಪಂದ್ಯದಲ್ಲಿ ಕ್ರಿಸ್‌ಗೇಲ್‌ ಜೊತೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಎಬಿಡಿ!

ಅಧ್ಯಕ್ಷರಷ್ಟೇ ಅಲ್ಲದೆ ಇನ್ನುಳಿದ ಸ್ಥಾನಗಳಿಗೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಂ. ಆರ್‌. ಹೆಗಡೆ ಅಂತಿಮಗೊಳಿಸಿದ ಕೆಎಸ್‌ಸಿಎ ಆಡಳಿತ ಮಂಡಳಿ ಸದ್ಯಸರ ಪಟ್ಟಿಯು ಈ ಕೆಳಕಂಡಂತಿದೆ.

ರಘುರಾಮ್ ಭಟ್ ಎ. : ಅಧ್ಯಕ್ಷ

ಬಿ.ಕೆ. ಸಂಪತ್ ಕುಮಾರ್: ಉಪಾಧ್ಯಕ್ಷ

ಎ. ಶಂಕರ್: ಕಾರ್ಯದರ್ಶಿ

ಶಾವೀರ್ ತಾರಾಪುರೆ: ಜಂಟಿ ಕಾರ್ಯದರ್ಶಿ

ಇ.ಎಸ್ ಜಯರಾಮ್: ಖಜಾಂಚಿ

ಬೆಂಗಳೂರು ವಲಯದ ಆಡಳಿತ ಸಮಿತಿ ಸದ್ಯರು:
ಎಂ.ಎಸ್ ಕೇಶವ್ (ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್)

ಕೆ.ವಿ ಮಂಜುನಾಥ ರಾಜು (ಹೆಮಂಡ್ಸ್ ಕ್ರಿಕೆಟ್ ಕ್ಲಬ್)

ಎಂ.ಎಸ್. ವಿನಯ್ (ಫ್ರೆಂಡ್ಸ್‌ ಯೂನಿಯನ್ ಕ್ರಿಕೆಟ್ ಕ್ಲಬ್)

ಮೈಸೂರು ವಲಯದ ಆಡಳಿತ ಮಂಡಳಿ ಸದಸ್ಯರು:
ಹರಿಕೃಷ್ಣ ಕುಮಾರ್ ಆರ್‌. ಕೆ. (ನ್ಯಾಷನಲ್ ಕ್ರಿಕೆಟ್ ಕ್ಲಬ್, ಮೈಸೂರು)

ಶಿವಮೊಗ್ಗ: ಎಚ್‌.ಎಸ್ ಸದಾನಂದ (ದುರ್ಗಿಗುಡಿ ಕ್ರಿಕೆಟ್ ಕ್ಲಬ್)

ತುಮಕೂರು: ಕೆ. ಶಶಿಧರ್ (ವೀನಸ್ ಕ್ರಿಕೆಟ್ ಕ್ಲಬ್)

ಧಾರವಾಡ: ನಿಖಿಲ್ ಎಂ ಭೂಸದ್ (ಬಿಡಿಕೆ ಕ್ರೀಡಾ ಫೌಂಡೇಶನ್, ಹುಬ್ಬಳ್ಳಿ)

ರಾಯಚೂರು: ಸುಜಿತ್ ಬೊಹರಾ (ಸಿಟಿ ಎಲೆವನ್ ಕ್ರಿಕೆಟ್ ಕ್ಲಬ್)

ಮಂಗಳೂರು: ರತನ್ ಕುಮಾರ್ (ಮಂಗಳೂರು ಸ್ಪೋರ್ಟ್ಸ್ ಕ್ಲಬ್)

ಆಜೀವ ಸದಸ್ಯರ ವಿಭಾಗ: ಸಂಜಯ್ ಪೋಳ್ ಮತ್ತು ಎನ್.ಎನ್. ಯುವರಾಜ್ ಅವಿರೋಧ ಆಯ್ಕೆ

For Quick Alerts
ALLOW NOTIFICATIONS
For Daily Alerts
Story first published: Wednesday, November 9, 2022, 19:24 [IST]
Other articles published on Nov 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X