ಏಕದಿನ ಪದಾರ್ಪಣಾ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಅಫ್ಘಾನಿಸ್ತಾನ ಕ್ರಿಕೆಟಿಗ

ಅಪ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ಏಕದಿನ ಸರಣಿಗಾಗಿ ಯುಎಇನಲ್ಲಿ ಮೂಖಾಮುಖಿಯಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐರ್ಲೆಂಡ್ ಹಾಘೂ ಅಪ್ಘಾನಿಸ್ತಾನ ತಂಡಗಳು ಮೊದಲ ಏಕದನ ಪಂದ್ಯದಲ್ಲಿ ಮೂಖಾಮುಖಿಯಾಗಿತ್ತು. ಇದರಲ್ಲಿ ಹದಿಹರೆಯದ ಕ್ರಿಕೆಟಿಗ ರಹ್ಮನುಲ್ಲಹ್ ಗರ್ಬಾಜ್ ಚೊಚ್ಚಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ತನ್ನ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ರಹ್ಮನುಲ್ಲಹ್ ಗರ್ಬಾಜ್ ಅದ್ಭುತವಾದ ಶತಕವನ್ನು ಸಿಡಿಸಿ ಅಪಘಾನಿಸ್ತಾನ ಸವಾಲಿನ ಮೊತ್ತವನ್ನು ಪೇರಿಸಲು ಕಾರಣರಾದರು. 127 ಎಸೆತಗಳಲ್ಲಿ 127 ರನ್ ಬಾರಿಸಿದ ಗುರ್ಬಾಜ್ 8 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿದರು. ಈ ಅದ್ಭುತ ಬ್ಯಾಟಿಂಗ್‌ನಿಂದಾಗಿ 16 ರನ್‌ಗಳಿಂದ ಐರ್ಲೆಂಡ್ ವಿರುದ್ಧ ಅಪ್ಘಾನ್ ಗೆದ್ದು ಬೀಗಿದೆ.

ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ

ಗರ್ಬಾಜ್ ಅವರ ಈ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಕೆಲ ಪ್ರಮುಖ ದಾಖಲೆಗಳನ್ನು ಮೊದಲ ಪಂದ್ಯದಲ್ಲೇ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಫ್ಘಾನಿಸ್ತಾನ ತಂಡದ ಪರವಾಗಿ ಚೊಚ್ಚಲ ಪಂದ್ಯದಲ್ಲೇ ಶತಕವನ್ನು ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಗರ್ಬಾಜ್ ಒಳಗಾಗಿದ್ದಾರೆ.

ಸದ್ಯ 19ರ ಹರೆಯದಲ್ಲಿರುವ ಗರ್ಬಾಜ್ ಮತ್ತೊಂದು ಗಮನಾರ್ಹವಾದ ಸಾಧನೆಯನ್ನು ಮಾಡಿದ್ದಾರೆ. 2000ನೇ ಇಸವಿಯಿಂದೀಚೆಗೆ ಹಿಟ್ಟಿದ ಆಟಗಾರರ ಪೈಕಿ ಶತಕವನ್ನು ಏಕದಿನ ಕ್ರಿಕೆಟ್‌ನಲ್ಲಿ ಶತಕವನ್ನು ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಅಪರೂಪದ ಹೆಗ್ಗಳಿಕೆಯನ್ನು ಕೂಡ ಗರ್ಬಾಜ್ ತನ್ನದಾಗಿಸಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

ಈ ಗೆಲುವಿನಿಂದ ಅಪ್ಘಾನಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದು 2023ರ ಏಕದಿನ ವಿಶ್ವಕಪ್‌ಗೆ ಅರ್ಹತೆಯನ್ನು ನೀಡಲಿರುವ ವಿಶ್ವಕಪ್ ಸೂಪರ್ ಲೀಗ್‌ನ ಭಾಗವೂ ಆಗಿರುವ ಕಾರಣದಿಂದ ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲು ಎರಡೂ ತಂಡಗಳಿಗೆ ಪ್ರಮುಖವಾಗಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 22, 2021, 13:52 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X