ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್: ಅಂಕಿ ಅಂಶಗಳು ಹೇಳುವುದೇನು?

ರಾಜ್‌ಕೋಟ್, ಅಕ್ಟೋಬರ್ 3: ಭಾರತದ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲು ಕೆರೆಬಿಯನ್ ಪಡೆ ತಯಾರಿ ನಡೆಸಿದೆ.

ರಾಜ್‌ಕೋಟ್ ಮೈದಾನದಲ್ಲಿ ಗುರುವಾರದಿಂದ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 4-1ರಿಂದ ಸೋತಿದ್ದರೂ, ವೆಸ್ಟ್ ಇಂಡೀಸ್ ವಿರುದ್ಧ ತವರು ನೆಲದಲ್ಲಿ ಭಾರತವೇ ಫೇವರಿಟ್ ಎನಿಸಿದೆ.

ಹೊಸಬರು ಮತ್ತು ಅನುಭವಿಗಳನ್ನು ಒಳಗೊಂಡ ಭಾರತ, ಗೆಲುವಿನ ಉತ್ಸಾಹದಲ್ಲಿದೆ. ಅತ್ತ ಸತತ ಸೋಲುಗಳು, ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ಕಿತ್ತಾಟದಿಂದ ಬಡವಾಗಿರುವ ವೆಸ್ಟ್ ಇಂಡೀಸ್, ಹೊಸ ಹುರುಪು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಶಕ್ತಿಯುತವಾಗಿ ಕಂಡರೂ, ವೆಸ್ಟ್ ಇಂಡೀಸ್‌ನ ಟೆಸ್ಟ್ ತಂಡವನ್ನು ಕಡೆಗಣಿಸುವಂತಿಲ್ಲ. ಇತ್ತೀಚೆಗೆ ಶ್ರೀಲಂಕಾದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡಿದ್ದ ವಿಂಡೀಸ್, ಬಾಂಗ್ಲಾದೇಶದ ವಿರುದ್ಧ 2-0ಯಿಂದ ಗೆಲುವು ಕಂಡಿತ್ತು.

ಆಕ್ರಮಣಕಾರಿ ಆಟ ನನ್ನ ಶೈಲಿ, ಉತ್ತಮ ಪ್ರದರ್ಶನ ನನ್ನ ಗುರಿ : ಮಯಾಂಕ್ಆಕ್ರಮಣಕಾರಿ ಆಟ ನನ್ನ ಶೈಲಿ, ಉತ್ತಮ ಪ್ರದರ್ಶನ ನನ್ನ ಗುರಿ : ಮಯಾಂಕ್

2014ರಲ್ಲಿ ವೇತನ ವಿವಾದದ ಕಾರಣ ವಿಂಡೀಸ್ ತಂಡ ಭಾರತ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿತ್ತು. ಅದರ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಸರಣಿ ಆಡುತ್ತಿವೆ.

ಕ್ರಿಕೆಟ್ ಇತಿಹಾಸದಲ್ಲಿ ಉಭಯ ದೇಶಗಳ ಟೆಸ್ಟ್ ಮುಖಾಮುಖಿಯ ಕೆಲವು ದಾಖಲೆಗಳು ಏನಿವೆ ನೋಡೋಣ.

ಭಾರತ-ವಿಂಡೀಸ್ ಮುಖಾಮುಖಿ

ಭಾರತ-ವಿಂಡೀಸ್ ಮುಖಾಮುಖಿ

ಟೆಸ್ಟ್: 94
ಭಾರತದ ಗೆಲುವು: 18
ವಿಂಡೀಸ್ ಗೆಲುವು: 30
ಡ್ರಾ: 46

ನನಗಿದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ: ಬಿಸಿಸಿಐ ಮೇಲೆ ಹರ್ಭಜನ್ ಅಸಮಾಧಾನ

ಭಾರತದಲ್ಲಿ ಪಂದ್ಯಗಳು

ಭಾರತದಲ್ಲಿ ಪಂದ್ಯಗಳು

ಟೆಸ್ಟ್: 45
ಭಾರತದ ಗೆಲುವು: 11
ವಿಂಡೀಸ್ ಗೆಲುವು: 14
ಡ್ರಾ: 20

ಕ್ರಿಕೆಟ್: ತಂಡಕ್ಕೆ ಆಯ್ಕೆಯಾದರೂ ಮಯಾಂಕ್‌ಗೆ ಆಡುವ ಅವಕಾಶವಿಲ್ಲ

ಅತ್ಯಧಿಕ ರನ್

ಅತ್ಯಧಿಕ ರನ್

ಸುನಿಲ್ ಗವಾಸ್ಕರ್: 2,749
ಹೆಚ್ಚು ಶತಕ
ಸುನಿಲ್ ಗವಾಸ್ಕರ್: 13

ಕರುಣ್ ನಾಯರ್ ಭಾರತ ತಂಡದಿಂದ ಹೊರಗೆ: ಪ್ರತಿಕ್ರಿಯಿಸಿದ ನಾಯಕ ಕೊಹ್ಲಿ

ಅಧಿಕ ವಿಕೆಟ್

ಅಧಿಕ ವಿಕೆಟ್

ಕಪಿಲ್ ದೇವ್: 89

ಇನ್ನಿಂಗ್ಸ್ ಒಂದರಲ್ಲಿ ಹೆಚ್ಚು ಬಾರಿ 5 ವಿಕೆಟ್
ಮಾಲ್ಕಂ ಮಾರ್ಷಲ್: 6

ವಿಂಡೀಸ್ ಗೆಲುವು

ವಿಂಡೀಸ್ ಗೆಲುವು

ವೆಸ್ಟ್ ಇಂಡೀಸ್ ಭಾರತದ ನೆಲದಲ್ಲಿ ಕೊನೆ ಟೆಸ್ಟ್ ಗೆದ್ದಿದ್ದು 1994ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಅದು ಕೇವಲ ಎಂಟು ಟೆಸ್ಟ್ ಪಂದ್ಯಗಳನ್ನು ಭಾರತದಲ್ಲಿ ಆಡಿದೆ.

ಗಡಿ ದಾಟಲು ರನ್

ಗಡಿ ದಾಟಲು ರನ್

ಚೇತೇಶ್ವರ ಪೂಜಾರ ಅವರಿಗೆ 5 ಸಾವಿರ ರನ್ ಗಡಿ ಮುಟ್ಟಲು 191 ರನ್ ಅವಶ್ಯಕತೆ ಇದ್ದರೆ, ಕೆ.ಎಲ್. ರಾಹುಲ್ 2 ಸಾವಿರ ರನ್ ಗಡಿ ತಲುಪಲು 189 ರನ್ ಬೇಕಿದೆ.

Story first published: Wednesday, October 3, 2018, 20:43 [IST]
Other articles published on Oct 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X