ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ 2021-22: ನಾಕೌಟ್‌ ಪಂದ್ಯಗಳಿಗೆ ಕರ್ನಾಟಕ ತಂಡ ಪ್ರಕಟ

Karnataka Ranji team

ಮುಂಬರುವ ರಣಜಿ ಟ್ರೋಫಿ 2021-22ರ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಮನೀಷ್ ಪಾಂಡೆ ನಾಯಕತ್ವದಲ್ಲಿ ಮುನ್ನಡೆಯಲಿರುವ ತಂಡದಲ್ಲಿ ಒಟ್ಟು 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಐಪಿಎಲ್ 2022ರ ನಿಮಿತ್ತ ರಣಜಿ ಟ್ರೋಫಿಯನ್ನ ಎರಡು ಹಂತಗಳಲ್ಲಿ ಆಯೋಜಿಸಲಾಗಿತ್ತು. ಐಪಿಎಲ್ 2022ರ ಸೀಸನ್‌ಗೂ ಮೊದಲೇ ಈಗಾಗಲೇ ಮೊದಲ ಹಂತವು ಪೂರ್ಣಗೊಂಡಿದ್ದು, ಫೆಬ್ರವರಿ 10 ರಿಂದ ಮಾರ್ಚ್ 15 ರ ನಡುವೆ ನಡೆಯಿತು. ಐಪಿಎಲ್ ಮುಗಿದ ಬಳಿಕ ಎರಡನೇ ಹಂತವು ಜೂನ್ 6ರಿಂದ ಆರಂಭಗೊಳ್ಳಲಿದ್ದು, ಜೂನ್ 22 ರವರೆಗೆ ನಡೆಯುತ್ತದೆ. ಅದ್ರಲ್ಲೂ ವಿಶೇಷವಾಗಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಗ್ರೂಪ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ತಂಡವು ಸಿ ಗ್ರೂಪ್‌ನಲ್ಲಿ ಸ್ಥಾನ ಪಡೆದಿತ್ತು. ಈಗಾಗಲೇ ಪೂಲ್ ಗೇಮ್‌ಗಳನ್ನು ಮುಗಿಸಿರುವ ಕರ್ನಾಟಕದೊಂದಿಗೆ ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೇರಿ ಕಾದಾಟ ನಡೆಸಿದವು.

ಕರ್ನಾಟಕ ತಂಡಕ್ಕೆ ಸವಾಲೆಸೆಯಲಿರುವ ಉತ್ತರ ಪ್ರದೇಶ

ಕರ್ನಾಟಕ ತಂಡಕ್ಕೆ ಸವಾಲೆಸೆಯಲಿರುವ ಉತ್ತರ ಪ್ರದೇಶ

ಜೂನ್ 6ರಂದು ಕರ್ನಾಟಕ ತಂಡವು ಮೂರನೇ ಕ್ವಾಟರ್ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸಲಿದೆ. ಈ ಪಂದ್ಯವು ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಇದೇ ದಿನ ಆಲೂರಿನ ಕೆಎಸ್‌ಸಿಯ ಎರಡನೇ ಗ್ರೌಂಡ್‌ನಲ್ಲಿ ಮುಂಬೈ ಮತ್ತು ಉತ್ತಾರಖಂಡ ತಂಡಗಳು ಮುಖಾಮುಖಿಯಾಗಲಿವೆ. ಜೊತೆಗೆ ಕೆಎಸ್‌ಸಿಎ ಮೂರನೇ ಗ್ರೌಂಡ್‌ನಲ್ಲಿ ಪಂಜಾಬ್ ಮತ್ತು ಮಧ್ಯಪ್ರದೇಶ ತಂಡಗಳು ಸೆಣಸಾಟ ನಡೆಸಲಿವೆ.

ಇನ್ನು ಬೆಂಗಳೂರಿನ ಜಸ್ಟ್‌ ಕ್ರಿಕೆಟ್ ಅಕಾಡೆಮಿ ಗ್ರೌಂಡ್‌ನಲ್ಲಿ ಬೆಂಗಾಳ ಮತ್ತು ಜಾರ್ಖಂಡ್ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಕಣಕ್ಕಿಳಿಯಲಿವೆ.

ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್ ರಣಜಿ ಟ್ರೋಫಿ 2021-22 ನಾಕೌಟ್ ಪಂದ್ಯಗಳಿಗೆ ಸಿದ್ಧಗೊಂಡಿರುವ ಕರ್ನಾಟಕ ಸ್ಕ್ವಾಡ್‌ ಈ ಕೆಳಗಿದೆ.

ವಿರಾಟ್ ಕೊಹ್ಲಿ ಫಾರ್ಮ್‌ ಕುರಿತು ಟೀಕೆ ಮಾಡುವುದನ್ನ ನಿಲ್ಲಿಸಿ ಎಂದು ಆಗ್ರಹಿಸಿದ ಶೋಯೆಬ್ ಅಖ್ತರ್

ಕರ್ನಾಟಕ ರಣಜಿ ತಂಡ:

ಕರ್ನಾಟಕ ರಣಜಿ ತಂಡ:

ಮನೀಶ್ ಪಾಂಡೆ (ನಾಯಕ), ಸಮರ್ಥ್ ಆರ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸಿದ್ಧಾರ್ಥ್ ಕೆ ವಿ, ನಿಶ್ಚಲ್ ಡಿ, ಶರತ್ ಶ್ರೀನಿವಾಸ್ (ವಿಕೆಟ್‌ ಕೀಪರ್‌), ಶರತ್ ಬಿ ಆರ್ (ವಿಕೆಟ್‌ ಕೀಪರ್‌), ಶ್ರೇಯಸ್ ಗೋಪಾಲ್, ಗೌತಮ್ ಕೆ, ಶುಭಾಂಗ ಹೆಗಡೆ, ಸುಚಿತ್ ಜೆ, ಕಾರ್ಯಪ್ಪ ಕೆ ಸಿ, ರೋನಿತ್ ಮೋರೆ, ಕೌಶಿಕ್ ವಿ, ವೈಶಾಕ್ ವಿ, ವೆಂಕಟೇಶ ಎಂ, ವಿದ್ವತ್ ಕಾವೇರಪ್ಪ, ಕಿಶನ್ ಎಸ್ ಬೇಡರೆ

IPL 2022: ಬೆಸ್ಟ್ ಪ್ಲೇಯಿಂಗ್ 11 ತಿಳಿಸಿದ ಇರ್ಫಾನ್ ಪಠಾಣ್

Match Finisher Dinesh Karthik ಗೆ ಹುಟ್ಟುಹಬ್ಬದ ಸಂಭ್ರಮ | #Cricket | Oneindia Kannada
ಕರ್ನಾಟಕ ತಂಡದ ಹೆಡ್ ಕೋಚ್ ಮತ್ತು ಇತರೆ ಸಹಾಯಕ ಸಿಬ್ಬಂದಿ

ಕರ್ನಾಟಕ ತಂಡದ ಹೆಡ್ ಕೋಚ್ ಮತ್ತು ಇತರೆ ಸಹಾಯಕ ಸಿಬ್ಬಂದಿ

ಮುಖ್ಯ ಕೋಚ್: ಯೆರೆ ಕೆ ಗೌಡ
ಬೌಲಿಂಗ್ ಕೋಚ್: ಅರವಿಂದ್ ಎಸ್.
ಫೀಲ್ಡಿಂಗ್ ಕೋಚ್: ದೀಪಕ್ ಎ ಚೌಗುಲೆ
ಫಿಸಿಯೋಥೆರಪಿಸ್ಟ್: ಜಬಾ ಪ್ರಭು
ಫಿಸಿಯೋಥೆರಪಿಸ್ಟ್: ಗೌತಮ್ ಹೆಚ್ ಎಸ್
ಸಾಮರ್ಥ್ಯ ಮತ್ತು ಕಂಡೀಷನಿಂಗ್ ಕೋಚ್: ಶ್ರೀ ಎ ಟಿ ರಾಜಮಣಿ ಪ್ರಭು
ಮಸ್ಸೂರ್: ಸೋಮಸುಂದರ್ ಸಿ ಎಂ
ಮ್ಯಾನೇಜರ್: ಅನುತೋಷ್ ಪೋಲ್
ವಿಡಿಯೋ ವಿಶ್ಲೇಷಕ: ವಿನೋದ್ ಕುಮಾರ್ ಎಂ. ಎಸ್

Story first published: Tuesday, May 31, 2022, 20:41 [IST]
Other articles published on May 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X