ರಶೀದ್ ಸಾಹಸ: ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ್ 45 ರನ್ ಜಯ

By Sadashiva
ರಶೀದ್ ಸಾಹಸ: ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ್ 45 ರನ್ ಜಯ | Oneindia Kannada
Rashid Khan leads Afghanistan to comfortable win

ಡೆಹ್ರಾಡೂನ್, ಜೂ. 4: ರಶೀದ್ ಖಾನ್ ಅಮೋಘ ಬೌಲಿಂಗ್ ನೆರವಿನೊಂದಿಗೆ ಭಾರತಕ್ಕೆ ಬಾಂಗ್ಲಾ ಪ್ರವಾಸದ ಟಿ20 ಪಂದ್ಯಾಟದಲ್ಲಿ ಅಫ್ಘಾನಿಸ್ತಾನ್ ತಂಡ ಬಾಂಗ್ಲಾದೆದುರು 45 ರನ್ ಜಯ ಗಳಿಸಿದೆ. ಡೆಹ್ರಾಡೂನ್ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾ 19 ಓವರ್ ಗಳಲ್ಲಿ 122 ರನ್ ಪೇರಿಸಿ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿ ಬಾಂಗ್ಲಾ ತಂಡಕ್ಕೆ 168 ರನ್ ಟಾರ್ಗೆಟ್ ನೀಡಿತ್ತು. ಮೊಹಮ್ಮದ್ ಶಹಜಾದ್ 40 (37), ಉಸ್ಮಾನ್ ಘನಿ 26 (24), ಅಸ್ಗರ್ ಸ್ತಾನಿಕ್ ಝೈಯ್ 25 (24), ಸಮೀಉಲ್ಲಾ ಶೆನ್ವಾರಿ 36 (18), ಶಫಿಕುಲ್ಲಾ 24 (8) ರನ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು.

ಬಾಂಗ್ಲಾ ಪರ ಬೌಲಿಂಗ್ ದಾಳಿ ನಡೆಸಿದ ಅಬ್ದುಲ್ ಹಸನ್ 40 ರನ್ನಿಗೆ 2, ಮೊಹಮದುಲ್ಲ 1 ರನ್ನಿಗೆ 2 ವಿಕೆಟ್ ಕಬಳಿಸಿ ಅಫ್ಘಾನಿಸ್ತಾನ್ ತಂಡವನ್ನು ಕಾಡಿದರು.

ಆದರೆ ಚೇಸಿಂಗ್ ಗೆ ಇಳಿದ ಬಾಂಗ್ಲಾ ಪದ ಬ್ಯಾಟ್ಸ್ಮನ್ ಗಳು ಅಂಥದ್ದೇನೂ ಪ್ರದರ್ಶನ ತೋರಲಿಲ್ಲ. ಲಿಟಾನ್ ದಾಸ್ 30 (20), ಮುಷ್ಫಿಕರ್ ರಹ್ಮಾನ್ 20 (17), ಮೊಹಮ್ಮದುಲ್ಲ 29 (25), ಶಕೀಬ್ ಅಲ್ ಹಸನ್ 15 (15) ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ 15 ರನ್ ಗೆರೆ ದಾಟಿಸಲಿಲ್ಲ. ಇದೇ ಬಾಂಗ್ಲಾ ಸೋಲಿಗೆ ಕಾರಣವಾಯಿತು.

ಜೊತೆಗೆ ಅಪ್ಘಾನಿಸ್ತಾನ್ ಸ್ಟಾರ್ ಬೌಲರ್ ರಶೀದ್ ಖಾನ್ ಅವರು ಮಾರಕ ಸ್ಪಿನ್ ದಾಳಿ ನಡೆಸಿದ್ದು ಬಾಂಗ್ಲಾ ಹಿನ್ನಡೆಗೆ ಮತ್ತೊಂದು ಕಾರಣವಾಯಿತು. ಶಪೂರ್ ಝದ್ರನ್ ಅವರೂ ರಶೀದ್ ಗೆ ಸಾಥ್ ನೀಡಿದರು.
40 ರನ್ನಿಗೆ ಶಪೂರ್ 3 ವಿಕೆಟ್ ಕಬಳಿಸಿದರೆ, ರಶೀದ್ ಕೇವಲ 13 ರನ್ನಿಗೆ 3 ವಿಕೆಟ್ ಕೆಡವಿದರು. ಬಾಂಗ್ಲಾ 19 ಓವರ್ ಗಳಲ್ಲೇ ಎಲ್ಲಾ ವಿಕೆಟ್ ಕಳೆದು 45 ರನ್ ಹಿನ್ನೆಡೆಯಿಂದ ಶರಣಾಯಿತು.

For Quick Alerts
ALLOW NOTIFICATIONS
For Daily Alerts

  ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

  Story first published: Monday, June 4, 2018, 11:39 [IST]
  Other articles published on Jun 4, 2018
  POLLS

  myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more