ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಾಯಕತ್ವ ತ್ಯಜಿಸಬಹುದೆಂದು ಸುಳಿವು ನೀಡಿದ ರವಿಶಾಸ್ತ್ರಿ: ODI ನಾಯಕತ್ವವೂ ಕೈ ಜಾರುವುದೆ?

ಟಿ20 ನಾಯಕತ್ವ ಬಿಟ್ಟುಕೊಟ್ಟ ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನು ಬಿಟ್ಟುಕೊಡಬಹುದು ಎಂಬ ವರದಿಗೆ ಪುಷ್ಠಿ ನೀಡುವಂತೆ, ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಸುಳಿವು ನೀಡಿದ್ದಾರೆ. ಕೊಹ್ಲಿ ಓಡಿಐ ನಾಯಕತ್ವ ತ್ಯಜಿಸಬಹುದು ಎಂದು ಸುದ್ದಿಗಳು ಹರಿದಾಡಿವೆ.

ದುಬೈನಲ್ಲಿ ನಡೆಯುತ್ತಿರುವ ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದ ಬಳಿಕ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದರು. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಕಡೆಗೆ ಹೆಚ್ಚು ಗಮನ ನೀಡುವಂತೆ ನೋಡಿಕೊಳ್ಳಲು ಏಕದಿನ ನಾಯಕತ್ವವನ್ನು ಹಿಂಪಡೆಯಲು ಬಿಸಿಸಿಐ ಬಯಸುತ್ತಿದೆ ಎಂದು ವರದಿಯಾಗಿತ್ತು. ಆದರೆ ರವಿಶಾಸ್ತ್ರಿ ಮಾತು ಆ ವಿಷಯಕ್ಕೆ ಮತ್ತಷ್ಟು ಬಲ ನೀಡಿದೆ.

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?

ಕೊಹ್ಲಿ ಓಡಿಐ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಬಯಸುತ್ತಿದೆ ಎಂದು ವರದಿಗಳು ಹರಿದಾಡುತ್ತಿವೆ. ಭಾರತೀಯ ಕ್ರಿಕೆಟ್ ಮಂಡಳಿಯು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಆತ ನಾಯಕತ್ವದಿಂದ ಕೆಳಗಿಳಿಯುದು ಒಳ್ಳೆಯದು ಎಂದು ಬಯಸುತ್ತಿದೆ.

ಕೊಹ್ಲಿ-ಶಾಸ್ತ್ರಿ ಬಾಂಡಿಂಗ್ ಚೆನ್ನಾಗಿದೆ!

ಕೊಹ್ಲಿ-ಶಾಸ್ತ್ರಿ ಬಾಂಡಿಂಗ್ ಚೆನ್ನಾಗಿದೆ!

2017 ರಲ್ಲಿ ಟೀಮ್ ಇಂಡಿಯಾ ಚುಕ್ಕಾಣಿ ಹಿಡಿದ ನಂತರ, ಮಾಜಿ ಭಾರತೀಯ ಆಲ್ ರೌಂಡರ್ ರವಿಶಾಸ್ತ್ರಿ ಖಂಡಿತವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಅಡಿಯಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾದ ನೆಲದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆಲುವು ಸೇರಿದಂತೆ ಹಲವಾರು ಸ್ಮರಣೀಯ ಗೆಲುವುಗಳನ್ನು ದಾಖಲಿಸಿದೆ. ಶಾಸ್ತ್ರಿ ಅವರು ಭಾರತೀಯ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ.

ಕೊಹ್ಲಿ ಕ್ಯಾಪ್ಟನ್ಸಿ ಭವಿಷ್ಯದ ಕುರಿತು ರವಿಶಾಸ್ತ್ರಿ ಏನು ಹೇಳಿದ್ದಾರೆ?

ಕೊಹ್ಲಿ ಕ್ಯಾಪ್ಟನ್ಸಿ ಭವಿಷ್ಯದ ಕುರಿತು ರವಿಶಾಸ್ತ್ರಿ ಏನು ಹೇಳಿದ್ದಾರೆ?

"ಕೆಂಪು-ಚೆಂಡಿನ ಕ್ರಿಕೆಟ್‌ನಲ್ಲಿ(ಟೆಸ್ಟ್‌), ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಕಳೆದ 5 ವರ್ಷಗಳಿಂದ ವಿಶ್ವದ ನಂ 1 ತಂಡವಾಗಿದೆ. ಆದ್ದರಿಂದ ಅವರು ಬಿಟ್ಟುಕೊಡಲು ಬಯಸದಿದ್ದರೆ ಅಥವಾ ಅವರು ಮಾನಸಿಕವಾಗಿ ದಣಿದಿದ್ದರೆ ಹಾಗೂ ಅವರು ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕೆಂದು ಹೇಳಿದರೆ ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದು, ಅದು ತಕ್ಷಣ ಸಂಭವಿಸುತ್ತದೆ ಎಂದು ಭಾವಿಸಬೇಡಿ . ಆದರೆ ಅದು ಸಂಭವಿಸಬಹುದು ಎಂದು ರವಿಶಾಸ್ತ್ರಿ ಇಂಡಿಯಾ ಟುಡೇಗೆ ತಿಳಿಸಿದರು.

ಇದರರ್ಥ ವಿರಾಟ್ ಕೊಹ್ಲಿ ಸದ್ಯ ದಿಢೀರ್ ಎಂದು ಏಕದಿನ ನಾಯಕತ್ವ ಬಿಟ್ಟುಕೊಡದಿದ್ದರೂ, ಮುಂದಿನ ದಿನಗಳಲ್ಲಿ ಖಂಡಿತವಾಗಿಯು ಬಿಟ್ಟುಕೊಡುವ ಸಮಯ ಎದುರಾಗುತ್ತದೆ ಎಂದು ಶಾಸ್ತ್ರಿ ಮಾರ್ಮಿಕವಾಗಿ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲೂ ಇದೇ ಆಗಲಿದೆ!

ಏಕದಿನ ಕ್ರಿಕೆಟ್‌ನಲ್ಲೂ ಇದೇ ಆಗಲಿದೆ!

ತನ್ನ ಮಾತನ್ನ ಮುಂದುವರಿಸಿದ ರವಿಶಾಸ್ತ್ರಿ ''ಏಕದಿನ ಪಂದ್ಯದಲ್ಲೂ ಇದೇ ಆಗಬಹುದು. ಅವರು ಕೇವಲ ಟೆಸ್ಟ್ ನಾಯಕತ್ವದ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಹೇಳಬಹುದು. ಅವನ ಮನಸ್ಸು ಮತ್ತು ದೇಹವೇ ಆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದೇನು ಕೊಹ್ಲಿಯೇ ಮೊದಲು ಮಾಡಿದಂತಿಲ್ಲ. ಹಿಂದೆ ಅನೇಕ ನಾಯಕರು ತಮ್ಮ ಬ್ಯಾಟಿಂಗ್ ಕಡೆಗೆ ಗಮನ ಕೇಂದ್ರೀಕರಿಸಲು ನಾಯಕತ್ವ ತ್ಯಜಿಸಿದ್ದಾರೆ'' ಎಂದು ಶಾಸ್ತ್ರಿ ಹೇಳಿದರು.

ತಂಡದಲ್ಲಿನ ಬಿರುಕನ್ನು ಸರಿಪಡಿಸಲು ರಾಹುಲ್ ದ್ರಾವಿಡ್ ರೆಡಿ

ತಂಡದಲ್ಲಿನ ಬಿರುಕನ್ನು ಸರಿಪಡಿಸಲು ರಾಹುಲ್ ದ್ರಾವಿಡ್ ರೆಡಿ

ರವಿಶಾಸ್ತ್ರಿ ಬದಲಿಗೆ ಟೀಮ್ ಇಂಡಿಯಾ ಕೋಚ್ ಚುಕ್ಕಾಣಿ ಹಿಡಿಯುತ್ತಿರುವುದು ಬೇರೆ ಯಾರು ಅಲ್ಲ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಆಗಿದ್ದಾರೆ. ಈ ಹಿಂದೆ ಭಾರತ ಎ ಮತ್ತು ಭಾರತ ಅಂಡರ್-19 ಗೆ ಕೋಚಿಂಗ್ ನೀಡಿದ ದ್ರಾವಿಡ್ ಅವರು ತರಬೇತಿಯ ಕಸರತ್ತನ್ನು ಚೆನ್ನಾಗಿ ತಿಳಿದಿದ್ದಾರೆ. ಹಾಗಾಗಿ ಅವರ ಮೇಲೆ ನಿರೀಕ್ಷೆಗಳು ಗಗನಕುಸುಮವಾಗಿವೆ. ಭಾರತದ ಪೂರ್ಣ ಸಮಯದ ತರಬೇತುದಾರರಾಗಿ ಅವರ ಮೊದಲ ನಿಯೋಜನೆಯು ಮುಂಬರುವ ನ್ಯೂಜಿಲೆಂಡ್ ವಿರುದ್ಧ ಮೂರು T20I ಗಳು ಮತ್ತು ಒಂದೆರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರುವ ದೇಶೀಯ ಸರಣಿಯಾಗಿದೆ.

Story first published: Saturday, November 13, 2021, 9:49 [IST]
Other articles published on Nov 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X