ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವ್ಹಾ..! ಶೇನ್ ವಾರ್ನ್, ಡೇಲ್ ಸ್ಟೇನ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಂದು ದಾಖಲೆಯ ಶಿಖರವನ್ನೇರಿದ್ದಾರೆ. ಶ್ರೀಲಂಕಾ ವಿರುದ್ಧ ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಮತ್ತು ದಕ್ಷಿಣ ಆಫ್ರಿಕಾದ ಹಿರಿಯ ಬೌಲರ್ ಡೇಲ್ ಸ್ಟೇನ್‌ ದಾಖಲೆ ಮುರಿದಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ಧನಂಜಯ ಡಿ ಸಿಲ್ವಾರನ್ನ 4ರನ್‌ಗೆ ಔಟ್ ಮಾಡಿದ ಬಳಿಕ ಅಶ್ವಿನ್, ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್‌ರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನ ಮುರಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 440ನೇ ವಿಕೆಟ್ ಪಡೆದ ಸಾಧನೆಯೊಂದಿಗೆ, ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದರು.

ಡೇಲ್ ಸ್ಟೇನ್ ದಾಖಲೆ ಪುಡಿ

ಡೇಲ್ ಸ್ಟೇನ್ ದಾಖಲೆ ಪುಡಿ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಧನಂಜಯ ಡಿ ಸಿಲ್ವಾ ಅವರನ್ನು ಕೇವಲ 4 ರನ್‌ಗಳಿಗೆ ಔಟ್ ಮಾಡುವ ಮೂಲಕ ಅಶ್ವಿನ್ ಸ್ಟೇಯ್ನ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಟನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ತಮ್ಮ 86ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 440 ವಿಕೆಟ್ ಪಡೆದ್ರೆ, ಸ್ಟೇ್ನ್‌ 93 ಪಂದ್ಯಗಳ ವೃತ್ತಿಜೀವನದಲ್ಲಿ 439 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನಂತರದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಶ್ರೇಷ್ಠ ಬೌಲರ್ ಕರ್ಟ್ನಿ ವಾಲ್ಶ್ ಅವರು ತಮ್ಮ ವೃತ್ತಿಜೀವನದಲ್ಲಿ 519 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸುತ್ತಿದ್ದಾರೆ ಈ ಆಟಗಾರ: ಕನ್ನಡಿಗನ ಬಗ್ಗೆ ಆಕಾಶ್ ಚೋಪ್ರ ಬೇಸರ

ಶ್ರೀಲಂಕಾ ವಿರುದ್ಧ 62 ವಿಕೆಟ್ ಪಡೆದ ಸಾಧನೆ

ಶ್ರೀಲಂಕಾ ವಿರುದ್ಧ 62 ವಿಕೆಟ್ ಪಡೆದ ಸಾಧನೆ

ಶ್ರೀಲಂಕಾ ವಿರುದ್ಧವೇ 62 ವಿಕೆಟ್ ಪಡೆದ ಸಾಧನೆಯನ್ನ ಭಾರತದ ಲೀಡಿಂಗ್ ಸ್ಪಿನ್ನರ್ ಆರ್. ಅಶ್ವಿನ್ ಮಾಡಿದ್ದಾರೆ. ಈ ಮೂಲಕ ಏಷ್ಯಾದ ರಾಷ್ಟ್ರಗಳ ವಿರುದ್ಧ 59 ವಿಕೆಟ್ ಪಡೆದ ಆಸ್ಟ್ರೇಲಿಯಾದ ಲೆಜೆಂಡ್ ಶೇನ್ ವಾರ್ನ್‌ ದಾಖಲೆಯನ್ನ ಹಿಂದಿಕ್ಕಿದ್ದಾರೆ.

ಇನ್ನು ಏಷ್ಯಾದ ರಾಷ್ಟ್ರಗಳ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ 4ನೇ ಸ್ಥಾನಕ್ಕೆ ತಲುಪಿದ್ದಾರೆ. ಜಂಭೋ ಖ್ಯಾತಿ ಅನಿಲ್ ಕುಂಬ್ಳೆ ಶ್ರೀಲಂಕಾ ವಿರುದ್ಧ 18 ಟೆಸ್ಟ್‌ ಪಂದ್ಯಗಳಲ್ಲಿ 74 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನ ಸಯೀದ್ ಅಜ್ಮಲ್ 14 ಟೆಸ್ಟ್ ಪಂದ್ಯಗಳಲ್ಲಿ 66 ವಿಕೆಟ್ ಪಡೆದಿದ್ದು, ಪಾಕ್‌ನ ಲೆಜೆಂಡರಿ ಬೌಲರ್ ವಾಸಿಂ ಅಕ್ರಂ 19 ಪಂದ್ಯಗಳಲ್ಲಿ 63 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಶ್ವಿನ್ 11 ಪಂದ್ಯಗಳಲ್ಲಿ 62 ವಿಕೆಟ್ ಪಡೆದಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಿದ್ದಾರೆ.

ಎಂ.ಎಸ್‌ ಧೋನಿ ದಾಖಲೆ ಮುರಿಯಲು ಈ ಆಟಗಾರನಿಂದ ಸಾಧ್ಯ: ನಿಖಿಲ್ ಚೋಪ್ರಾ

ಶ್ರೀಲಂಕಾ ವಿರುದ್ಧ ಆರು ವಿಕೆಟ್ ಉರುಳಿಸಿದ ಆರ್. ಅಶ್ವಿನ್

ಶ್ರೀಲಂಕಾ ವಿರುದ್ಧ ಆರು ವಿಕೆಟ್ ಉರುಳಿಸಿದ ಆರ್. ಅಶ್ವಿನ್

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್‌ಗೆ 2 ವಿಕೆಟ್ ಪಡೆದಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್‌ನಲ್ಲಿ 55ರನ್‌ಗೆ 4 ವಿಕೆಟ್ ಪಡೆದು ಶ್ರೀಲಂಕಾದ ಇನ್ನಿಂಗ್ಸ್‌ಗೆ ಇತಿಶ್ರಿ ಹಾಡಿದರು.

ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ದಿಮುತ್ ಕರುಣರತ್ನೆ 107, ಕುಶಾಲ್ ಮೆಂಡೀಸ್ 54 ರನ್‌ ಹೊರತುಪಡಿಸಿ ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಪರಿಣಾಮ 208 ರನ್‌ಗೆ ಆಲೌಟ್‌ ಆಗುವ ಮೂಲಕ 238 ರನ್‌ಗಳ ಹೀನಾಯ ಸೋಲನ್ನ ಕಂಡಿದೆ. ಟಿ20 ಸರಣಿಯಲ್ಲಿ 0-3ರಿಂದ ವೈಟ್ ವಾಶ್ ಅನುಭವಿಸಿದ ಬೆನ್ನಲ್ಲೇ, ಟೆಸ್ಟ್‌ನಲ್ಲಿ 0-2ರಲ್ಲಿ ಮತ್ತೊಂದು ವೈಟ್‌ವಾಶ್ ಮುಖಭಂಗವನ್ನ ಶ್ರೀಲಂಕಾ ಅನುಭವಿಸಿದೆ.

RCB ಕಪ್ ಗೆಲ್ಲಲು ಮುಳುವಾಗಿರುವ 3 ತಂಡಗಳು ಇವೇ ನೋಡಿ | Oneindia Kannada

Story first published: Monday, March 14, 2022, 19:32 [IST]
Other articles published on Mar 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X