ವಿಕ್ರಂ ಲ್ಯಾಂಡರ್ ಅವಶೇಷ ಪತ್ತೆ ಹಚ್ಚಿದ ನಾಸಾಗೆ ವಿಚಿತ್ರ ಬೇಡಿಕೆಯಿಟ್ಟ ಆರ್‌ಸಿಬಿ!!

RCB trolled congratulatory tweet to NASA | Oneindia Kannada

ವಿರಾಟ್ ಕೊಹ್ಲಿ ಹಾಗೂ ಎಬಿಡಿವಿಲ್ಲಿಯರ್ಸ್ ಆರ್‌ಸಿಬಿ ತಂಡದ ಪ್ರಮುಖ ಆಟಗಾರರು. ಅವರಿಬ್ಬರು ನೆಲಕಚ್ಚಿ ನಿಂತರು ಅಂದರೆ ಸಾಕು ಬೌಂಡರಿ ಸಿಕ್ಸರ್‌ಗಳ ಸುರಿಮಳೆಯೇ ಆಗುತ್ತದೆ. ಹೀಗಾಗಿ ಅದೆಷ್ಟು ಬಾಲ್‌ಗಳು ಮೈದಾನದಾಚೆ ಹೋಗಿ ಕಳೆದು ಹೋಗಿದೆಯೋ ಗೊತ್ತಿಲ್ಲ.

ಆಟದಲ್ಲಿ ಅದೆಲ್ಲಾ ಸಾಮಾನ್ಯ. ಹೊಸ ಚೆಂಡಿನ ಮೂಲಕ ಆಟ ಮುಂದುವರೆಸನಹುದು. ಆದರೆ ಆರ್‌ಸಿಬಿ ಇವತ್ತು ಮಾಡಿದ್ದೇನು ಗೊತ್ತಾ! ವಿರಾಟ್ ಮತ್ತು ಎಬಿಡಿ ಸಿಕ್ಸರ್ ಬಾರಿಸಿ ಕಳೆದು ಹಾಕಿರುವ ಬಾಲ್ ಹುಡುಕಿ ಕೊಡಲು ನಾಸಾಗೆ ಹೇಳಿಬಿಟ್ಟಿದೆ. ಇದಕ್ಕೆ ಕಾರಣವೂ ಇದೆ. ನಾಸಾ ಮಾಡಿದ ಒಂದು ಕಾರ್ಯಕ್ಕೆ ಮೆಚ್ಚಿದ ಆರ್‌ಸಿಬಿ ತನ್ನದೂ ಒಂದಿರಲಿ ಅಂತ ಈ ವಿಚಿತ್ರ ಬೇಡಿಕೆಯಿಟ್ಟು ಆರ್‌ಸಿಬಿ ಅಭಿಮಾನಿಗಳಲ್ಲಿ ನಗುತರಿಸುವ ಪ್ರಯತ್ನ ಮಾಡಿದೆ.

ಐಪಿಎಲ್ ಹರಾಜು: ಈ ಐವರು ಆರ್‌ಸಿಬಿಯಲ್ಲಿದ್ದರೆ ಈ ಸಲ ಕಪ್ ನಮ್ದೇ!!

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ರ ಮುಖ್ಯ ಭಾಗವಾದ ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮುನ್ನವೇ ಸಂಪರ್ಕ ಕಳೆದುಕೊಂಡು ಪತನವಾಗಿತ್ತು. ಇವತ್ತು ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್ (ಎಲ್ಆರ್ಒ) ಮೂಲಕ ತೆಗೆದ ಚಿತ್ರವೊಂದನ್ನು ನಾಸಾ ಟ್ವಿಟ್ಟರ್‌ನಲ್ಲಿ ವಿಕ್ರಮ್ ಲ್ಯಾಂಡರ್‌ನ ಅವಶೇಷಗಳನ್ನು ಪತ್ತೆ ಮಾಡಿರುವುದಾಗಿ ಬಿಡುಗಡೆ ಮಾಡಿತ್ತು. ಇದಕ್ಕೆ ಪೂರಕವಾಗಿ ಆರ್‌ಸಿಬಿ ಈ ಟ್ವಿಟನ್ನು ಆರ್‌ಸಿಬಿ ಮಾಡಿದೆ.

ಬೆಂಗಳೂರು ಕಿತ್ತು ಹಾಕಿದ RCB Tweets ವಿರುದ್ಧ ಫ್ಯಾನ್ಸ್ ಗರಂ!

ರಾಯಲ್‌ ಚಾಲೆಂಜರ್ಸ್ ತಂಡ ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಅಭಿಮಾನಿಗಳ ನೆಚ್ಚಿನ ತಂಡವಾಗಿಯೇ ಉಳಿದುಕೊಂಡಿದೆ. ಟೂರ್ನಿ ಗೆಲ್ಲಲಾಗದಿದ್ದರೂ ಅಂಗಳದಲ್ಲಿ ಸಾಕಷ್ಟು ಮನರಂಜನೆಯನ್ನು ನೀಡಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಉತ್ತಮ ಭಾಂಧವ್ಯವನ್ನೂ ಇಟ್ಟುಕೊಂಡಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 3, 2019, 20:59 [IST]
Other articles published on Dec 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X