RCB vs PBKS: ಈ ಆವೃತ್ತಿಯ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ಆರ್‌ಸಿಬಿ ಸ್ಟಾರ್!

ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಈ ಬಾರಿಯ ಐಪಿಎಲ್ ಟೂರ್ನಿಯ 60ನೇ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ ಭಾರೀ ಅಂತರದ ಸೋಲು ಅನುಭವಿಸಿದೆ. ಈ ಸೋಲಿನಿಂದಿಗೆ ಆರ್‌ಸಿಬಿ ತಂಡದ ಪ್ಲೇಆಫ್ ಹಾದಿ ಕಠಿಣವಾದಂತಾಗಿದೆ. ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಹಿನ್ನಡೆ ಅನುಭವಿಸಿ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪ್ರಮುಖ ಸ್ಟಾರ್ ಆಟಗಾರನೋರ್ವ ಈ ಬಾರಿಯ ಐಪಿಎಲ್‌ನ ಕಳಪೆ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಪಂಜಾಬ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗೆ ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ಅಮೋಘ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾಯಿತು. ಕೇವಲ 29 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ 66 ರನ್ ಚಚ್ಚಿದರು. ಅದಾದ ಬಳಿಕ ಅಂತಿಮ ಹಂತದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಅಷ್ಟೇ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿದಾಟುವಂತೆ ಮಾಡಿದರು. ಲಿವಿಂಗ್‌ಸ್ಟೋನ್ 42 ಎಸೆತಗಳಲ್ಲಿ 70 ರನ್ ಬಾರಿಸಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಎದುರಾಳಿ ತಂಡಕ್ಕೆ ದಾಖಲೆಯ ರನ್ ಬಿಟ್ಟುಕೊಡುವ ಮೂಲಕ ಕಳಪೆ ದಾಖಲೆಯನ್ನು ಮಾಡಿದ್ದಾರೆ.

IPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾIPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾ

ಟೂರ್ನಿಯಲ್ಲಿ ಆರ್‌ಸಿಬಿ ಪರವಾಗಿ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ಜೋಶ್ ಹೇಜಲ್‌ವುಡ್ ಈ ಬಾರಿಯ ಈ ಪಂದ್ಯದ ನಾಲ್ಕು ಓವರ್‌ಗಳಲ್ಲಿ ಬಿಟ್ಟುಕೊಟ್ಟಿದ್ದು ಬರೊಬ್ಬರಿ 64 ರನ್. ಓವರ್‌ಗೆ 16ರಂತೆ ರನ್ ಬಿಟ್ಟುಕೊಟ್ಟಿದ್ದರು ಈ ಆಸಿಸ್ ವೇಗಿ. ಇದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೌಲರ್ ನೀಡಿದ ಅತ್ಯಂತ ಹೆಚ್ಚಿನ ರನ್ ಎನಿಸಿಕೊಂಡಿದೆ.

ಹೇಜಲ್‌ವುಡ್ ಎಸೆದ ಈ ಪಂದ್ಯದ ಮೊದಲ ಓವರ್‌ನಲ್ಲಿ 22 ರನ್ ಸಿಡಿದಿತ್ತು. ಜಾನಿ ಬೈರ್‌ಸ್ಟೋವ್ ಆಸಿಸ್ ವೇಗಿಯ ಮೇಲೆ ಈ ಓವರ್‌ನಲ್ಲಿ ದಾಳಿ ಮಾಡಿದ್ದರು. ತನ್ನ ಅಂತಿಮ ಓವರ್‌ನಲ್ಲಿಯೂ ವೇಗಿ 24 ರನ್‌ಗಳನ್ನು ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಹೇಜಲ್‌ವುಡ್ ದಾಳಿಯನ್ನು ಪುಡಿಗಟ್ಟಿದ್ದರು.

ಇದಕ್ಕೂ ಮುನ್ನ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಕೆಟ್ಟ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಮಾರ್ಕ್ರೋ ಜಾನ್ಸನ್ ಹೆಸರಿನಲ್ಲಿತ್ತು. ಜಾನ್ಸನ್ ನಾಲ್ಕು ಓವರ್‌ನಲ್ಲಿ 63 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಇನ್ನು ಇದು ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳ ಪೈಕಿ ಅತಿ ಕೆಟ್ಟ ಸ್ಪೆಲ್ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಆರ್‌ಸಿಬಿ ತಂಡದಲ್ಲಿದ್ದ ಶೇನ್ ವಾಟ್ಸನ್ 2016ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 61 ರನ್ ಬಿಟ್ಟುಕೊಟ್ಟಿದ್ದು ಆರ್‌ಸಿಬಿ ಬೌಲರ್ ಓರ್ವನ ಕೆಟ್ಟ ಸ್ಪೆಲ್ ಎನಿಸಿಕೊಂಡಿತ್ತು.

ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಜಾನಿ ಬೈರ್‌ಸ್ಟೋವ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೊನ್ ಅವರ ಅಬ್ಬರದ ಪ್ರದರ್ಶನದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 209/9 ರನ್‌ಗಳಿಸಿತ್ತು. ಲಿವಿಂಗ್‌ಸ್ಟೊನ್ 70 ರನ್ ಗಳಿಸಿದ್ದರೆ ಬೈರ್‌ಸ್ಟೋವ್ 66 ರನ್‌ಗಳ ಕೊಡುಗೆ ನೀಡಿದ್ದಾರೆ. ಹರ್ಷಲ್ ಪಟೇಲ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 155 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಆರ್‌ಸಿಬಿ ಪ್ಲೇಯಿಂಗ್ ‍XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಮಯಾಂಕ್ ಅಗರ್ವಾಲ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್

For Quick Alerts
ALLOW NOTIFICATIONS
For Daily Alerts
Story first published: Saturday, May 14, 2022, 11:12 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X