ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ದಾದಾ' ಗಿರಿಯ ದಿನಗಳನ್ನು ನೆನಪಿಸುವ ಪುಸ್ತಕ

ಕೋಲ್ಕತ್ತಾ, ಏ. 28 : ಸಚಿನ್ ತೆಂಡೂಲ್ಕರ್ ಆತ್ಮಕತೆ ಬರೆದಿದ್ದು ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ಕ್ರಿಕೆಟ್ ದಂತಕಥೆಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಯಾಗಿದೆ. ಭಾರತೀಯ ಕ್ರಿಕೆಟ್ ನ ದಿಗ್ಗಜರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಕುರಿತ ಪುಸ್ತಕವೊಂದು ಕೋಲ್ಕತ್ತಾದಲ್ಲಿ ಲೋಕಾರ್ಪಣೆಗೊಂಡಿದೆ.

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಪ್ತರ್ಷಿ ಸರ್ಕಾರ್ ಎಂಬುವರು ಪುಸ್ತವನ್ನು ಬರೆದಿದ್ದಾರೆ. ಸೌರವ್ ಗಂಗೂಲಿಯವರ ಅಪ್ಪಟ ಅಭಿಮಾನಿಯಾಗಿರುವ ಸರ್ಕಾರ್ 'ಸೌರವ್ ಗಂಗೂಲಿ: ಕ್ರಿಕೆಟ್, ಕ್ಯಾಪ್ಟನ್ಸಿ ಮತ್ತು ಕಾಂಟ್ರವರ್ಸಿ' ಎಂಬ ಶೀರ್ಷಿಕೆಯನ್ನು ಪುಸ್ತಕಕ್ಕೆ ನೀಡಿದ್ದಾರೆ. ಗಂಗೂಲಿ ಕ್ರಿಕೆಟ್ ಜೀವನದ ಒಳ ಹೊರಗನ್ನು, ಸಾಧನೆಯನ್ನು, ನಾಯಕತ್ವದಲ್ಲಿ ಎದುರಿಸಿದ ಸವಾಲುಗಳನ್ನು ಪುಸ್ತಕ ಪ್ರತಿಬಿಂಬಿಸುತ್ತಿದೆ.[ಗಂಗೂಲಿ,ದ್ರಾವಿಡ್, ಸಚಿನ್ ರಿಂದ ಕೋಚ್ ಆಯ್ಕೆ]

sourav ganguly

ಒಬ್ಬ ಮನುಷ್ಯ ಮತ್ತು ಕ್ರಿಕೆಟರ್ ನಡುವಿನ ಸಂಬಂಧವನ್ನು ಇದು ವಿವರಿಸುತ್ತದೆ. ನಾನು ಗಂಗೂಲಿ ಅವರಿಗೆ ಸಂಬಂಧಿಸಿದ ವರದಿ ಬಿತ್ತಾರ ಮಾಡುವ ವೆಬ್ ತಾಣವೊಂದನ್ನು ನಡೆಸುತ್ತಿದ್ದೆ. ಜನರು ಯಾಕೆ ಇವೆಲ್ಲವನ್ನು ಆಧರಿಸಿ ಒಂದು ಪುಸ್ತಕ ಹೊರತರಬಾರದು ಎಂದು ಕೇಳಿದರು. ಅವರ ಆಶಯದಂತೆ ಪುಸ್ತಕ ಇದೀಗ ಲೋಕಾರ್ಪಣೆಯಾಗಿದೆ ಎಂದು ಹೇಳಿದರು.[ಸೌರವ್ ಗಂಗೂಲಿ ದಾಖಲೆ ಮುರಿದ ಎಂಎಸ್ ಧೋನಿ]

ಗ್ರೆಗ್ ಚಾಪೆಲ್ ಅವರೊಂದಿಗಿನ ಸಂಘರ್ಷ ಮತ್ತಿತರ ಸಂಗತಿಗಳ ಬಗ್ಗೆಯೂ ಪುಸ್ತಕದಲ್ಲಿ ಸಂಪೂರ್ಣ ವಿವರಣೆ ನೀಡಲಾಗಿದೆ. ಸೌರವ್ ಗಂಗೂಲಿ ಬಾಲ್ಯದ ಕೋಚ್ ಅಶೋಕ್ ಮುಸ್ತಾಫಿ ಪುಸ್ತವನ್ನು ಬಿಡುಗಡೆ ಮಾಡಿದರು. ಬಂಗಾಳ ಕ್ರಿಕೆಟ್ ಮಂಡಳಿಯ ಪ್ರಮುಖರು ಈ ವೇಳೆ ಹಾಜರಿದ್ದರು. ತಮ್ಮ ಬಿಡುವಿಲ್ಲದ ಕೆಲಸದ ಕಾರಣ ಭಾರತದ ಮಾಜಿ ನಾಯಕ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X