ರೋಹಿತ್ ಶರ್ಮಾಗೂ ಇದನ್ನೇ ಹೇಳಿದ್ದೆ; ಪಂತ್ ಮಾಡುತ್ತಿರುವ ತಪ್ಪು ತಿದ್ದಿಕೊಳ್ಳಲು ಕಪಿಲ್ ದೇವ್ ಸಲಹೆ

Pant ಕೂಡ Rohit ಮಾಡಿದ ತಪ್ಫನ್ನೇ ಮಾಡುತ್ತಿದ್ದಾರೆ | Oneindia Kannada

ರಿಷಭ್ ಪಂತ್ ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಉತ್ತಮ ಪ್ರದರ್ಶನದ ನಂತರ ಕ್ರೀಡಾಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ರಿಷಭ್ ಪಂತ್ ವೇಗದ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾ ಪರ ಆಪದ್ಬಾಂಧವನಾಗಿ ನಿಂತಿದ್ದರು.

ಧೋನಿ ನಿವೃತ್ತಿಯಾಗುವವರೆಗೂ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ: ವೃದ್ಧಿಮಾನ್ ಸಾಹ

ಸದ್ಯ ರಿಷಭ್ ಪಂತ್ ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗಲಿದ್ದು ನ್ಯೂಜಿಲೆಂಡ್ ವಿರುದ್ಧ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದಾರೆ. ಈ ಪ್ರವಾಸದ ಕುರಿತು ಈಗಾಗಲೇ ಕೆಲ ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಇದೀಗ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಮುಟ್ಟಲೂ ಸಾಧ್ಯವಿಲ್ಲ ಎಂದ ಆಸ್ಟ್ರೇಲಿಯಾ ಆಟಗಾರ

1983ರಲ್ಲಿ ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾದ ನಾಯಕ ಕಪಿಲ್ ದೇವ್ ಇಂಗ್ಲೆಂಡ್ ಪ್ರವಾಸದ ಕುರಿತು ಮಾತನಾಡುವಾಗ ರಿಷಭ್ ಪಂತ್ ಬ್ಯಾಟಿಂಗ್ ವೈಖರಿ ಬಗ್ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. 'ರಿಷಭ್ ಪಂತ್ ಓರ್ವ ಪ್ರಬುದ್ಧ ಆಟಗಾರ. ಆತನಿಗೆ ಟೀಮ್ ಇಂಡಿಯಾ ಪರ ಆಡಲು ಇನ್ನೂ ಸಾಕಷ್ಟು ಸಮಯವಿದೆ, ನಿಜಕ್ಕೂ ಆತನ ಹೊಡೆತಗಳ ಮಟ್ಟ ಅದ್ಭುತವಾದದ್ದು. ಆದರೆ ಇಂಗ್ಲೆಂಡ್ ನೆಲ ಸವಾಲಿನಿಂದ ಕೂಡಿರಲಿದ್ದು, ಪಂತ್ ಪ್ರತಿ ಎಸೆತಕ್ಕೂ ದೊಡ್ಡ ಹೊಡೆತ ಬಾರಿಸುವವ ಪ್ರಯತ್ನಕ್ಕೆ ಮುಂದಾಗದೇ ಮೈದಾನದಲ್ಲಿ ಹೆಚ್ಚು ಸಮಯ ಉಳಿಯುವ ಪ್ರಯತ್ನ ಮಾಡಬೇಕು. ಆರಂಭದಲ್ಲಿ ರೋಹಿತ್ ಶರ್ಮಾಗೂ ಕೂಡ ಇದೇ ಸಲಹೆಯನ್ನು ನೀಡಿದ್ದೆವು, ಶರ್ಮಾ ಕೂಡ ದೊಡ್ಡ ಹೊಡೆತಗಳ ಪ್ರಯತ್ನಕ್ಕೆ ಕೈಹಾಕಿ ಬೇಗನೇ ವಿಕೆಟ್ ಒಪ್ಪಿಸುತ್ತಿದ್ದರು ನಂತರದ ದಿನಗಳಲ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟಿ ನೆಲೆಯೂರಿದ ಮೇಲೆ ದೊಡ್ಡ ಹೊಡೆತಗಳಿಗೆ ಕೈಹಾಕುವ ಅಭ್ಯಾಸವನ್ನು ಮಾಡಿಕೊಂಡು ಯಶಸ್ವಿಯಾದರು' ಎಂದು ರಿಷಭ್ ಪಂತ್‌ಗೆ ತಾಳ್ಮೆಯ ಬ್ಯಾಟಿಂಗ್ ನಡೆಸುವಂತೆ ಕಪಿಲ್ ದೇವ್ ಸಲಹೆ ನೀಡಿದ್ದಾರೆ.

ಸ್ವಲ್ಪ ಸಮಯ ಕಾದು ನಂತರ ಬಲವಾದ ಹೊಡೆತಗಳಿಗೆ ಮುಂದಾಗಲಿ

ಸ್ವಲ್ಪ ಸಮಯ ಕಾದು ನಂತರ ಬಲವಾದ ಹೊಡೆತಗಳಿಗೆ ಮುಂದಾಗಲಿ

ರಿಷಭ್ ಪಂತ್ ಬ್ಯಾಟಿಂಗ್ ವೈಖರಿ ಕುರಿತು ಸಲಹೆ ನೀಡಿರುವ ಕಪಿಲ್ ದೇವ್ ಇಂಗ್ಲೆಂಡ್ ಪ್ರವಾಸದಲ್ಲಿ ಪಂತ್ ಕೆಲ ಸಮಯದವರೆಗೆ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಭದ್ರವಾಗಿ ನೆಲೆಯೂರಿದ ಮೇಲೆ ದೊಡ್ಡ ಹೊಡೆತಗಳಿಗೆ ಮುಂದಾಗಬೇಕೆಂದು ಕಪಿಲ್ ದೇವ್ ಹೇಳಿದ್ದಾರೆ.

ಇಂಗ್ಲೆಂಡ್ ನೆಲ ತುಂಬಾ ಭಿನ್ನವಾಗಿರಲಿದೆ

ಇಂಗ್ಲೆಂಡ್ ನೆಲ ತುಂಬಾ ಭಿನ್ನವಾಗಿರಲಿದೆ

ಇಂಗ್ಲೆಂಡ್ ಪಿಚ್‌ಗಳು ಇತರ ದೇಶದ ಪಿಚ್‌ಗಳಿಗಿಂತ ಬಹಳ ಭಿನ್ನವಾಗಿರಲಿದ್ದು ನಾವು ಊಹಿಸಿದ ರೀತಿ ವೇಗವಾಗಿ ಆಡುವುದು ಕಷ್ಟ. ಹೀಗಾಗಿ ಇಂಗ್ಲೆಂಡ್ ನೆಲದಲ್ಲಿ ತುಂಬಾ ಜಾಗರೂಕತೆಯಿಂದ ಬ್ಯಾಟಿಂಗ್ ಮಾಡಬೇಕಾಗುತ್ತದೆ, ಪಿಚ್‌ಗೆ ಸರಿ ಹೊಂದಿಕೊಳ್ಳುವವರೆಗೂ ದೊಡ್ಡ ಹೊಡೆತಗಳಿಗೆ ಕೈ ಹಾಕಬಾರದು ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.

ಸೀಮಿತ ಓವರ್ ಪಂದ್ಯಗಳಿಗಿಂತ ಟೆಸ್ಟ್ ಕ್ರಿಕೆಟ್ ಅಚ್ಚುಮೆಚ್ಚು

ಸೀಮಿತ ಓವರ್ ಪಂದ್ಯಗಳಿಗಿಂತ ಟೆಸ್ಟ್ ಕ್ರಿಕೆಟ್ ಅಚ್ಚುಮೆಚ್ಚು

ಇದೇ ವೇಳೆ ಟಿ ಟ್ವೆಂಟಿ ಮತ್ತು ಏಕದಿನ ಪಂದ್ಯಗಳಿಗಿಂತ ಟೆಸ್ಟ್ ಪಂದ್ಯಗಳು ಅಚ್ಚುಮೆಚ್ಚು ಎಂಬ ವಿಷಯವನ್ನು ಕಪಿಲ್ ದೇವ್ ಹೊರಹಾಕಿದ್ದಾರೆ. ಸಮಯ ಸಿಕ್ಕಾಗ ಸೀಮಿತ ಓವರ್ ಪಂದ್ಯಗಳನ್ನು ವೀಕ್ಷಿಸುವುದಕ್ಕಿಂತ ಟೆಸ್ಟ್ ಪಂದ್ಯಗಳನ್ನು ಹೆಚ್ಚಾಗಿ ವೀಕ್ಷಿಸುತ್ತೇನೆ, ಏಕದಿನ ಮತ್ತು ಟಿ ಟ್ವೆಂಟಿ ಪಂದ್ಯಗಳಿಗಿಂತ ಟೆಸ್ಟ್ ಕ್ರಿಕೆಟ್ ಹೆಚ್ಚು ಇಷ್ಟ ಎಂದು ಕಪಿಲ್ ದೇವ್ ಹೇಳಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 27, 2021, 8:01 [IST]
Other articles published on May 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X