ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೋನಾ ಕಾಟಕ್ಕೆ ಮಹತ್ವದ ಕ್ರಿಕೆಟ್ ಟೂರ್ನಿ ಬಲಿ: ದಿಗ್ಗಜರ ಕ್ರಿಕೆಟ್ ಕ್ಯಾನ್ಸಲ್

Road Safety World Series Cancelled Due To Coronavirus Outbreak

ಕೊರೊನಾ ವೈರಸ್ ಕಾಟಕ್ಕೆ ಮಹತ್ವದ ಟೂರ್ನಿಯೊಂದು ರದ್ಧಾಗಿದೆ. ದಿಗ್ಗಜರ ಟೂರ್ನಿಯೆಂದೇ ಖ್ಯಾತಿಯಾಗಿರುವ ರೋಡ್ ಸೇಫ್ಟಿ ವಲ್ಡ್ ಸಿರೀಸ್ ಅನ್ನು ತಾತ್ಕಾಲಿಕವಾಗಿ ರದ್ಧುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಟೂರ್ನಿ ನಡೆಯುತ್ತಿರುವ ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಆಟಗಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ ಸದ್ಯ ನಡೆಯುತ್ತಿರುವ ಈ ಟೂರ್ನಿಯನ್ನು ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಬಗ್ಗೆ ತನಗೆ ಉನ್ನತ ಮೂಲಗಳು ಮಾಹಿತಿ ನೀಡಿದೆ ಎಂದು ಖ್ಯಾತ ಸುದ್ಧಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಮೊದಲು ಖಾಲಿ ಮೈದಾನದಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲು ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಅದರ ಬದಲು ಮುಂದೂಡುವ ತೀರ್ಮಾನಕ್ಕೆ ಆಯೋಜಕರು ಬಂದಿದ್ದಾರೆ.

ಮಹತ್ವಾಕಾಂಕ್ಷಿಯ ಟೂರ್ನಿ

ಮಹತ್ವಾಕಾಂಕ್ಷಿಯ ಟೂರ್ನಿ

ರೋಡ್ ಸೇಫ್ಟಿ ಅತ್ಯಂತ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಆಯೋಜನೆ ಮಾಡಲಾಗಿತ್ತು. ಈಗಾಗಲೆ ವಿಶ್ವ ಕ್ರಿಕೆಟ್‌ನಿಂದ ದೂರವಾಗಿರುವ ದಿಗ್ಗಜ ಆಟಗಾರರನ್ನು ಮತ್ತೆ ಕ್ರಿಕೆಟ್ ಅಂಗಳದಲ್ಲಿ ಕಾಣುವ ವಿಶೇಷ ಅವಕಾಶ ಈ ಟೂರ್ನಿಯ ಮೂಲಕ ಪ್ರೇಕ್ಷಕರಿಗೆ ಲಭಿಸಿತ್ತು.

ದಿಗ್ಗಜರು ಕಣದಲ್ಲಿ

ದಿಗ್ಗಜರು ಕಣದಲ್ಲಿ

ವಿಶ್ವ ಕ್ರಿಕೆಟ್‌ನ ಲೆಜೆಂಡರಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಬ್ರ್ಯಾನ್ ಲಾರಾ, ತಿಲಕರತ್ನೆ ದಿಲ್ಶನ್, ಚಮಿಂಡಾ ವಾಸ್, ಮುತ್ತಯ್ಯ ಮುರಳೀಧರನ್, ಶಾನ್ ಪೊಲಾಕ್, ಜಾಂಟಿ ರೋಡ್ಸ್, ಹರ್ಷಲ್ ಗಿಬ್ಸ, ಬ್ರೆಟ್ ಲೀ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.

ಸದ್ಯಕ್ಕೆ ಮೊಟಕು

ಸದ್ಯಕ್ಕೆ ಮೊಟಕು

ಸಾರ್ವಜನಿಕರ ಹಿತದೃಷ್ಟಿಯಿಂದ ಆಯೋಜಕರು ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಕೊರೊನಾ ಭೀತಿಯಿಂದ ಮುಕ್ತವಾಗುವವರೆಗೂ ಪಂದ್ಯಗಳನ್ನು ನಡೆಸದೆ ಇರಲು ತೀರ್ಮಾನಿಸಲಾಗಿದೆ. ಉಳಿದ ಪಂದ್ಯಗಳ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸುವುದಾಗಿ ಆಯೋಜಕರು ಹೇಳಿಕೊಂಡಿದ್ದಾರೆ.

ಮೊದಲು ಸ್ಥಳಾಂತರಿಸಲಾಗಿತ್ತು

ಮೊದಲು ಸ್ಥಳಾಂತರಿಸಲಾಗಿತ್ತು

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಪುಣೆಯಲ್ಲಿ ಈ ಮೊದಲು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಪಂದ್ಯಗಳನ್ನು ಸ್ಥಳಾಂತರಿಸಲಾಗಿತ್ತು. ಪುಣೆಯ ಪಂದ್ಯಗಳನ್ನು ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಈಗ ಎಲ್ಲಾ ಪಂದ್ಯಗಳು ರದ್ಧಾಗಿದೆ.

ಒಂದೇ ದಿನ 10 ಪ್ರಕರಣ ಬೆಳಕಿಗೆ

ಒಂದೇ ದಿನ 10 ಪ್ರಕರಣ ಬೆಳಕಿಗೆ

ಮಹಾರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 10 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿತ್ತು. ಇದು ಪಂದ್ಯದ ಆಯೋಜನೆ ಮುಂದೂಡಲು ಪ್ರಮುಖ ಕಾರಣ ಎನ್ನಲಾಗ್ತಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಭೀತಿ ಹೆಚ್ಚಾಗಲು ಕಾರಣವಾಗಿದೆ.

Story first published: Friday, March 13, 2020, 14:09 [IST]
Other articles published on Mar 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X