ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್, 4-1 ಸರಣಿ ಗೆದ್ದ ಭಾರತ

By Sachhidananda Acharya

ನಾಗ್ಪುರ, ಅಕ್ಟೋಬರ್ 2: ರೋಹಿತ್ ಶರ್ಮಾ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ 5ನೇ ಏಕದಿನ ಪಂದ್ಯವನ್ನು ಗೆದ್ದು ಭಾರತ 4-1 ರಿಂದ ಸರಣಿ ಜಯಿಸಿದೆ. ಈ ಜಯದೊಂದಿಗೆ ಭಾರತ ಮತ್ತೆ ಐಸಿಸಿ ಏಕದಿನ ರ್ಯಾಕಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದೆ.

ಸೋತ ಪಂದ್ಯದಲ್ಲೂ ದಾಖಲೆ ಬರೆದ ಕೊಹ್ಲಿ ಹಾಗೂ ತಂಡಸೋತ ಪಂದ್ಯದಲ್ಲೂ ದಾಖಲೆ ಬರೆದ ಕೊಹ್ಲಿ ಹಾಗೂ ತಂಡ

ನಾಗ್ಪುರದಲ್ಲಿ ಭಾನುವಾರ ನಡೆದ ಐದನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಕ್ಯಾಪ್ಟನ್ ಸ್ಟೀವನ್ ಸ್ಮಿತ್ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕರಾದ ಆ್ಯರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟಿಗೆ 66 ರನ್ ಕಲೆ ಹಾಕಿದರು. ಆದರೆ ನಂತರ ಬಂದ ದಾಂಡಿಗರು ಅಷ್ಟಾಗಿ ನೆಲಕಚ್ಚಿ ಆಡದ ಕಾರಣ ಆಸ್ಟ್ರೇಲಿಯಾ 50 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 242 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಕ್ಷರ್ ಪಟೇಲ್ ಮಾರಕ ಬೌಲಿಂಗ್

ಅಕ್ಷರ್ ಪಟೇಲ್ ಮಾರಕ ಬೌಲಿಂಗ್

ಆಸಿಸ್ ಪರ ವಾರ್ನರ್ 52, ಟ್ರಾವಿಸ್ ಹೆಡ್ 42, ಮಾರ್ಕಸ್ ಸ್ಟೋಯಿನಿಸ್ 46 ಹಾಗೂ ಫಿಂಚ್ 32 ರನ್ ಗಳ ಕೊಡುಗೆ ನೀಡಿದರು. ಭಾರತದ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಻ಅ಻ಕ್ಷರ್ ಪಟೇಲ್ 10 ಓವರ್ ಗಳಲ್ಲಿ 38 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಭುವನೇಶ್ವರ್ ಕುಮಾರ್ 1, ಜಸ್ ಪ್ರೀತ್ ಬೂಮ್ರಾ 2, ಹಾರ್ದಿಕ್ ಪಾಂಡ್ಯಾ 1, ಕೇದಾರ್ ಜಾಧವ್ 1 ವಿಕೆಟ್ ಪಡೆದು ಮಿಂಚಿದರು.

ಭಾರತಕ್ಕೆ ಆಸರೆಯಾದ ರೋಹಿತ್ ಶರ್ಮಾ

ಭಾರತಕ್ಕೆ ಆಸರೆಯಾದ ರೋಹಿತ್ ಶರ್ಮಾ

243 ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತಕ್ಕೆ ರೋಹಿತ್ ಶರ್ಮಾ ಆಸರೆಯಾದರು. ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಓಪನಿಂಗ್ ಬ್ಯಾಟ್ಸ್ ಮನ್ ಗಳಾದ ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ ಮೊರೆ ಹೋದರು. ಮೊದಲ ವಿಕೆಟ್ ಗೆ 124 ರನ್ ಜತೆಯಾಟವಾಡಿದ ಈ ಜೋಡಿ 23ನೇ ಓವರಿನಲ್ಲಿ ಬೇರ್ಪಟ್ಟಿತ್ತು.

ಕೊಹ್ಲಿ ನಿಧಾನಗತಿಯ ಆಟ

ಕೊಹ್ಲಿ ನಿಧಾನಗತಿಯ ಆಟ

ರಹಾನೆ ಅರ್ಧಶತಕ (61ರನ್) ಸಿಡಿಸಿ ವಿಕೆಟ್ ಒಪ್ಪಿಸಿದರು. ರಹಾನೆ ಔಟ್ ಆಗುತ್ತಲೇ ಕ್ರೀಸಿಗೆ ಬಂದ ಕೋಹ್ಲಿ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರು. ಅದಾಗಲೇ ಪಿಚ್ ಸರಿಯಾಗಿ ಅರಿತಿದ್ದ ರೋಹಿತ್ ಶರ್ಮಾ ಹೊಡಿ ಬಡಿಯ ಆಟಕ್ಕೆ ಮುಂದಾದರು.

ಸೊಗಸಾದ 14ನೇ ಶತಕ

ಸೊಗಸಾದ 14ನೇ ಶತಕ

ಶತಕದಂಚಿನಲ್ಲಿ ಕಾಣಿಸಿಕೊಂಡು ಸ್ನಾಯು ಸೆಳೆತದ ಮಧ್ಯೆಯೂ ಅಧ್ಭುತ ಇನ್ನಿಂಗ್ಸ್ ಕಟ್ಟಿದ ರೋಹಿತ್ ಶರ್ಮಾ ಅಂತಿಮವಾಗಿ 109 ಎಸೆತಗಳಲ್ಲಿ 11 ಬೌಂಡರಿ, 5ಸಿಕ್ಸರ್ ಗಳಿಂದ 125 ರನ್ ಸಿಡಿಸಿದರು. ಇನ್ನೇನು ಪಂದ್ಯ ಗೆಲ್ಲಲು 20 ರನ್ ಗಳು ಬೇಕು ಎಂದಾಗ ಶರ್ಮಾ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆದರೆ ಅದಾಗಲೇ ಭಾರತ ಗೆಲುವಿನ ಅಂಚಿಗೆ ಬಂದು ನಿಂತಿತ್ತು.

ಗೆಲುವಿನ ಶಾಸ್ತ್ರ ಮುಗಿಸಿದ ಜಾಧವ್, ಪಾಂಡೆ

ಗೆಲುವಿನ ಶಾಸ್ತ್ರ ಮುಗಿಸಿದ ಜಾಧವ್, ಪಾಂಡೆ

ಉಳಿದ 20 ರನ್ ಗಳ ಶಾಸ್ತ್ರವನ್ನು ವಿರಾಟ್ ಕೊಹ್ಲಿ, ಕೇದಾರ್ ಜಾಧವ್ ಮತ್ತು ಪಾಂಡೆ ಮುಗಿಸಿದರು. ಶರ್ಮಾಗೆ ಉತ್ತಮ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ ಉಪಯುಕ್ತ 39ರನ್ ಗಳ ಕೊಡುಗೆ ನೀಡಿದರು.

ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ

ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ

ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 2 ವಿಕೆಟ್ ಪಡೆದರೆ ನೇಥನ್ ಕೌಲ್ಟರ್ ನೈಲ್ 1 ವಿಕೆಟ್ ಪಡೆದರು. 125 ರನ್ ಸಿಡಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಜತೆಗೆ ಏಕದಿನ ಮಾದರಿಯಲ್ಲಿ ಶರ್ಮಾ 6,000 ರನ್ ಗಳನ್ನೂ ಪೂರೈಸಿದರು.

ಸರಣಿಯಲ್ಲಿ 222ರನ್ ಸಿಡಿಸಿ 6 ವಿಕೆಟ್ ಗಳನ್ನೂ ಪಡೆದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದರು.

ಅಕ್ಟೋಬರ್ 7ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆರಂಭವಾಗಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X