RSWS-2: ಶ್ರೀಲಂಕಾ ಲೆಜೆಂಡ್ಸ್‌ಗೆ ಮತ್ತೊಂದು ಭರ್ಜರಿ ಗೆಲುವು: ಇಂಗ್ಲೆಂಡ್ ಲೆಜೆಂಡ್ಸ್ ನೀರಸ ಪ್ರದರ್ಶನ

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಆವೃತ್ತಿಯ ಐದನೇ ಮುಖಾಮುಖಿ ಇಂದು ನಡೆದಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು ತಿಲಕರತ್ನೆ ದಿಲ್ಶನ್ ಪಡೆ ಭರ್ಜರಿ ಗೆಲುವು ಸಾಧಿಸಿದೆ. ಸನತ್ ಜಯಸೂರ್ಯ ಅವರ ಬೌಲಿಂಗ್ ದಾಳಿಗೆ ನಲುಕಿದ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ಸುಲಭ ಸವಾಲಾಯಿತು.

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿತು. ಆಲ್‌ರೌಂಡರ್ ಸನತ್ ಜಯಸೂರ್ಯ ತಮ್ಮ ಬೌಲಿಂಗ್ ಕರಾಮತ್ತನ್ನು ಮತ್ತೊಮ್ಮೆ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಜಯಸೂರ್ಯ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಕೇವಲ 78 ರನ್‌ಗಳಿಗೆ ಆಲೌಟ್ ಆಯಿತು. ನಾಲ್ಕು ಓವರ್‌ಗಳ ತಮ್ಮ ಬೌಲಿಂಗ್ ದಾಳಿಯಲ್ಲಿ ಜುಯಸೂರ್ಯ ಎರಡು ಮೇಡನ್ ಓವರ್‌ಗಳ ಸಹಿತ ಕೇವಲ ಮೂರು ರನ್‌ ನೀಡಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ.

ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ಇನ್ನು 79 ರನ್‌ಗಳ ಸುಲಭ ಸವಾಲು ಪಡೆದ ಶ್ರೀಲಂಕಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಈ ಮೊತ್ತವನ್ನು ಮೀರಿ ನಿಲ್ಲಲು ಯಶಸ್ವಿಯಾಯಿತು. ದಿಲ್ಶನ್ ಮುನವೀರ ಹಾಗೂ ತಿಲಕರತ್ನೆ ದಿಲ್ಶನ್ ಮೊದಲ ವಿಕೆಟ್‌ಗೆ 24 ರನ್‌ಗಳ ಜೊತೆಯಾಟ ನೀಡಿದರೆ ಉಫುಲ್ ತರಂಗ 23 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಶ್ರೀಲಂಕಾ ತಂಡ 3 ವಿಕೆಟ್ ಕಳೆದುಕೊಂಡು 14.3 ಓವರ್‌ಗಳಲ್ಲಿ ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನಿಂದಿಗೆ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಎರಡು ಪಂದ್ಯಗಳನ್ನು ಆಡಿರುವ ಶ್ರೀಲಂಕಾ ತಂಡ ಎರಡು ಗೆಲುವು ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದು ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ವೆಸ್ಟ್ ಇಂಡೀಸ್ ಮೂರು, ದಕ್ಷಿಣ ಆಫ್ರಿಕಾ ನಾಲ್ಕು ಹಾಗೂ ಇಂಗ್ಲೆಂಡ್ ಐದನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಲೆಜೆಂಡ್ಸ್ ತಂಡ ಅಂತಿಮ ಸ್ಥಾನದಲ್ಲಿದೆ.

ಟಿ20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್ ರಾಜೀನಾಮೆ!ಟಿ20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್ ರಾಜೀನಾಮೆ!

ಆಡುವ ಬಳಗ ಹೀಗಿದೆ
ಇಂಗ್ಲೆಂಡ್ ಲೆಜೆಂಡ್ಸ್: ಮಾಲ್ ಲೋಯ್, ಇಯಾನ್ ಬೆಲ್ (ನಾಯಕ), ಟಿಮ್ ಆಂಬ್ರೋಸ್, ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್), ರಿಕ್ಕಿ ಕ್ಲಾರ್ಕ್, ಡಿಮಿಟ್ರಿ ಮಸ್ಕರೇನ್ಹಸ್, ಡ್ಯಾರೆನ್ ಮ್ಯಾಡಿ, ಕ್ರಿಸ್ ಸ್ಕೋಫೀಲ್ಡ್, ಕ್ರಿಸ್ ಟ್ರೆಮ್ಲೆಟ್, ಸ್ಟೀಫನ್ ಪ್ಯಾರಿ, ಸ್ಟುವರ್ಟ್ ಮೀಕರ್
ಬೆಂಚ್: ನಿಕ್ ಕಾಂಪ್ಟನ್, ಡ್ಯಾರೆನ್ ಸ್ಟೀವನ್ಸ್, ಜೇಮ್ಸ್ ಟಿಂಡಾಲ್

ಶ್ರೀಲಂಕಾ ಲೆಜೆಂಡ್ಸ್: ದಿಲ್ಶಾನ್ ಮುನವೀರ, ತಿಲಕರತ್ನೆ ದಿಲ್ಶಾನ್ (ನಾಯಕ), ಸನತ್ ಜಯಸೂರ್ಯ, ಉಪುಲ್ ತರಂಗ (ವಿಕಕೆಟ್ ಕೀಪರ್), ಚತುರಂಗ ಡಿ ಸಿಲ್ವ, ಅಸೆಲಾ ಗುಣರತ್ನ, ಇಸುರು ಉದಾನ, ನುವಾನ್ ಕುಲಶೇಖರ, ಚಾಮರ ಸಿಲ್ವ, ಇಶಾನ್ ಜಯರತ್ನ, ಜೀವನ್ ಮೆಂಡಿಸ್
ಪೀಠ: ಚಾಮಿಂದ ವಾಸ್, ಚಾಮರ ಕಪುಗೆಡೆರ, ಧಮ್ಮಿಕಾ ಪ್ರಸಾದ್, ದಿಲ್ರುವಾನ್ ಪೆರೇರಾ, ಮಹೇಲ ಉಡವಟ್ಟೆ, ಕೌಶಲ್ಯ ವೀರರತ್ನೆ, ತಿಸಾರ ಪೆರೇರಾ, ಚಿಂತಕ ಜಯಸಿಂಹ

For Quick Alerts
ALLOW NOTIFICATIONS
For Daily Alerts
Story first published: Tuesday, September 13, 2022, 22:57 [IST]
Other articles published on Sep 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X