ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RSWS 2022: ಸಚಿನ್ vs ಬ್ರೇಟ್ ಲೀ ಕದನಕ್ಕೆ ವೇದಿಕೆ ಸಿದ್ಧ: ರೋಚಕ ಘಟ್ಟದಲ್ಲಿ ದಿಗ್ಗಜರ ಸೆಣೆಸಾಟ

RSWS 2022: India Legends vs Australia Legends, Semi Final match preview and Probable XI

ರೋಡ್‌ಸೇಫ್ಟಿ ವರ್ಲ್ಡ್ ಸಿರೀಸ್ ಅಂತಿಮ ಘಟ್ಟವನ್ನು ತಲುಪಿದೆ. 8 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಅಂತ್ಯವಾಗಿದ್ದು ಸೆಮಿಫೈನಲ್ ಹಂತಕ್ಕೆ ನಾಲ್ಕು ತಂಡಗಳು ಪ್ರವೇಶ ಪಡೆದುಕೊಂಡಿದೆ. ಶ್ರೀಲಂಕಾ ಲೆಜೆಂಡ್ಸ್, ಇಂಡಿಯಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್ ಹಾಗೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಕೊಂಡಿದ್ದು ಪ್ರಶಸ್ತಿಗಾಗಿ ಈ ತಂಡಗಳ ಮಧ್ಯೆ ಸೆಣೆಸಾಟ ನಡೆಸಲಿದೆ.

ಇಂದು ಬುಧವಾರ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ಹಾಗೂ ಶೇನ್ ವಾಟ್ಸನ್ ನೇತೃತ್ವದ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶಿಸಲಿದ್ದು ಟ್ರೋಫಿಯನ್ನು ಎತ್ತಿಹಿಡಿಯುವ ಅವಕಾಶ ಪಡೆದುಕೊಳ್ಳಲಿದೆ. ಇಂಡಿಯಾ ಲೆಜೆಂಡ್ಸ್ ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದು ಈ ಬಾರಿ ಮತ್ತೆ ಚಾಂಪಿಯನ್ ಪಟ್ಟಕ್ಕೇರುವ ಉತ್ಸಾಹದಲ್ಲಿದೆ.

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್

ಕುತೂಹಲ ಕೆರಳಿಸಿದ ದಿಗ್ಗಜರ ಮುಖಾಮುಖಿ

ಕುತೂಹಲ ಕೆರಳಿಸಿದ ದಿಗ್ಗಜರ ಮುಖಾಮುಖಿ

ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವಿನ ಕದನ ಕ್ರಿಕೆಟ್ ಅಂಗಳದಲ್ಲಿ ಯಾವತ್ತಿಗೂ ರೋಚಕವಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಇನ್ನು ದಿಗ್ಗಜರ ಸೆಣೆಸಾಟದಲ್ಲಿಯೂ ಇದು ಮುಂದುವರಿದಿದೆ. ಎರಡು ತಂಡ ಕೂಡ ಬಲಾಢ್ಯ ಆಟಗಾರರ ಪಡೆಯನ್ನು ಹೊಂದಿರುವ ಕಾರಣ ಈ ಕದನ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಇಂಡಿಯಾ ಲೆಜೆಂಡ್ಸ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡದ ವೇಗಿ ಬ್ರೇಟ್ ಲಿ ನಡುವಿನ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವನ್ನು ನೀಡುವುದರಲ್ಲಿ ಅನುಮಾನವಿಲ್ಲ.

ಉತ್ತಮ ಫಾರ್ಮ್‌ನಲ್ಲಿದ್ದಾರೆ ಭಾರತದ ದಿಗ್ಗಜರು

ಉತ್ತಮ ಫಾರ್ಮ್‌ನಲ್ಲಿದ್ದಾರೆ ಭಾರತದ ದಿಗ್ಗಜರು

ಇನ್ನು ಈ ಬಾರಿಯ ಟೂರ್ನಿಯಲ್ಲಿ ಭಾರತದ ಪಂದ್ಯಗಳು ಹೆಚ್ಚಾಗಿ ಮಳೆಗೆ ಆಹುತಿಯಾಗಿರುವುದು ನಿರಾಸೆ ಮೂಡಿಸಿದೆ. ಕೇವಲ ಎರಡು ಪಂದ್ಯಗಳು ಮಾತ್ರವೇ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗಿರುವುದು ವಿಪರ್ಯಾಸ. ಆದರೆ ಈ ಎರಡು ಪಂದ್ಯಗಳು ಮಾತ್ರ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದೆ. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧ ಸಚಿನ್ ಪಡೆ ಗೆಲುವು ಸಾಧಿಸಿದೆ. ಈ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್ ಮತ್ತು ಪಠಾಣ್ ಸೋದರರು ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಸಂಭಾವ್ಯ ಆಡುವ ಬಳಗ

ಸಂಭಾವ್ಯ ಆಡುವ ಬಳಗ

ಇಂಡಿಯಾ ಲೆಜೆಂಡ್ಸ್: ಸಚಿನ್ ತೆಂಡೂಲ್ಕರ್, ನಮನ್ ಓಜಾ, ಸುರೇಶ್ ರೈನಾ, ಯೂಸುಫ್ ಪಠಾಣ್, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ಆರ್ ಪವಾರ್, ರಾಹುಲ್ ಶರ್ಮಾ
ಆಸ್ಟ್ರೇಲಿಯಾ ಲೆಜೆಂಡ್ಸ್: ಶೇನ್ ವ್ಯಾಟ್ಸನ್, ಅಲೆಕ್ಸ್ ಡೂಲನ್, ಬೆನ್ ಡಂಕ್, ಕ್ಯಾಲಮ್ ಫರ್ಗುಸನ್, ನಾಥನ್ ರಿಯರ್ಡನ್, ಬ್ರಾಡ್ ಹ್ಯಾಡಿನ್, ಬ್ರಾಡ್ ಹಾಡ್ಜ್, ಜೇಸನ್ ಕ್ರೆಜಾ, ಚಾಡ್ ಸೇಯರ್ಸ್, ಡಿರ್ಕ್ ನ್ಯಾನೆಸ್, ಬ್ರೈಸ್ ಮೆಕ್‌ಗೇನ್

Story first published: Wednesday, September 28, 2022, 18:24 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X