ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ಬಕ್ನರ್ ಚಿತ್ರದೊಂದಿಗೆ ಸಚಿನ್ ತೆಂಡೂಲ್ಕರ್ ಟ್ರೋಲ್ ಮಾಡಿದ ಐಸಿಸಿ

Sachin Tendulkar comes up with witty reply after ICC trolls him on Twitter

ಮುಂಬೈ, ಮೇ 16: ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ಗೆ ಹೆಸರಾದವರು ಎಂಬುದು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗ ಗೊತ್ತಿರೋದೆ. ಆದರೆ ಕೆಲ ವರ್ಷಗಳ ಕಾಲ ಬೌಲಿಂಗ್ ಕೂಡ ಮಾಸ್ಟರ್ ಬ್ಲಾಸ್ಟರ್ ಅವರ ಯುದ್ಧಾಸ್ತ್ರವಾಗಿತ್ತು. ಸ್ಪಿನ್ ಎಸೆಯುತ್ತಿದ್ದ ಸಚಿನ್ ಹಲವಾರು ಪ್ರಮುಖ ವಿಕೆಟ್‌ಗಳನ್ನೂ ಉರುಳಿಸಿದ್ದರು.

ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌

ನವಿ ಮುಂಬೈನಲ್ಲಿ ತೆಂಡೂಲ್ಕರ್ ಮಿಡ್ಲ್‌ಸೆಕ್ಸ್ ಗ್ಲೋಬಲ್ ಅಕಾಡೆಮಿ ಕ್ಯಾಂಪ್‌ನ ನೆಟ್‌ನಲ್ಲಿ ವಿನೋದ್ ಕಾಂಬ್ಳಿ ಅವರು ತೆಂಡೂಲ್ಕರ್ ಬೌಲಿಂಗ್‌ಗೆ ಬ್ಯಾಟಿಂಗ್‌ ಮಾಡುತ್ತಿದ್ದ ವಿಡಿಯೋವನ್ನು ತೆಂಡೂಲ್ಕರ್ ತನ್ನ ಟ್ವಿಟರ್ ಖಾತೆಯಲ್ಲಿ ಮೇ 11ರಂದು ಹಾಕಿಕೊಂಡಿದ್ದರು.

ವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಭಾರತ ವಿಶ್ವಕಪ್ ತಂಡ ಮುನ್ನಡೆಸಿದ ನಾಯಕರುವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಭಾರತ ವಿಶ್ವಕಪ್ ತಂಡ ಮುನ್ನಡೆಸಿದ ನಾಯಕರು

ಆ ವಿಡಿಯೋದಲ್ಲಿ ಸಚಿನ್ ನೋಬಾಲ್ ಎಸೆದಿದ್ದರು. ಇದನ್ನು ಐಸಿಸಿ ಟ್ರೋಲ್ ಮಾಡಿತ್ತು. ಇದಕ್ಕೆ ಸಚಿನ್ ಕೂಡ ತಮಾಷೆಯಾಗೇ ಪ್ರತಿಕ್ರಿಯಿಸಿದ್ದಾರೆ.

ಬಾಲ್ಯದ ದಿನಗಳಿಗೆ ಹೋದೆವು

ವಿಡಿಯೋ ಜೊತೆ ಸಚಿನ್, 'ತೆಂಡೂಲ್ಕರ್‌ಎಂಜಿಎ ಲಂಚ್ ಬ್ರೇಕ್ ವೇಳೆ ವಿನೋದ್ ಕಾಂಬ್ಳಿ ಜೊತೆ ನೆಟ್ ಅಭ್ಯಾಸ ನಡೆಸಿದ್ದು ಉತ್ತಮ ಅನುಭವ ನೀಡಿತು. ಅದು ನಮ್ಮನ್ನು ಖಂಡಿತಾ ನಮ್ಮ ಬಾಲ್ಯದ ದಿನಗಳಿಗೆ ಕೊಂಡೊಯ್ಯಿತು' ಎಂದು ಬರೆದುಕೊಂಡಿದ್ದರು.

ಒಂದೇ ತಂಡದಲ್ಲಿ ಸಚಿನ್-ಕಾಂಬ್ಳಿ

'ವಿನೋದ್ ಕಾಂಬ್ಳಿ ಮತ್ತು ನಾನು ಯಾವಾಗಲೂ ಒಂದೇ ತಂಡದಲ್ಲಿ ಇರುತ್ತಿದ್ದೆವು ಹೊರತು ಪರಸ್ಪರ ವಿರುದ್ಧ ತಂಡದಲ್ಲಿ ಯಾವತ್ತೂ ಇದ್ದಿರಲಿಲ್ಲ. ಈ ವಿಚಾರ ಕೆಲವರಿಗಷ್ಟೇ ಗೊತ್ತಿದೆ' ಎಂದೂ ಸಚಿನ್ ಅದೇ ವಿಡಿಯೋ ಸಾಲಿನ ಜೊತೆ ಸೇರಿಸಿಕೊಂಡಿದ್ದರು.

ಬಕ್ನರ್ ಜೊತೆ ಸಚಿನ್ ಕಾಲೆಳೆದ ಐಸಿಸಿ

ಕಾಂಬ್ಳಿಗೆ ಸಚಿನ್ ಚೆಂಡು ಎಸೆಯುವಾಗ ತೆಂಡೂಲ್ಕರ್ ಅವರ ಕಾಲು ನೋಬಾಲ್ ಗೆರೆಯನ್ನು ದಾಟಿತ್ತು. ಇದನ್ನು ಗಮನಿಸಿದ ಇಂಟರ್‌ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 'ನಿಮ್ಮ ಕಾಲು ಎಲ್ಲಿದೆ ಎಂದು ಗಮನಿಸಿಕೊಳ್ಳಿ ಸಚಿನ್' ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಮಾಷೆಯಾಗಿ ಕಾಲೆಳೆದಿತ್ತು. ಸ್ಟೀವ್ ಬಕ್ನರ್ ಚಿತ್ರವನ್ನೂ ಐಸಿಸಿ ಆ ಟ್ವೀಟ್‌ನಲ್ಲಿ ಬಳಸಿಕೊಂಡಿತ್ತು.

ಬ್ಯಾಟಿಂಗ್ ಮಾಡ್ತಿಲ್ಲವಲ್ಲ ಸದ್ಯ

ಐಸಿಸಿ ತನ್ನ ಟ್ವೀಟ್ ಜೊತೆ ಬಕ್ನರ್ ಚಿತ್ರ ಬಳಸಿಕೊಂಡಿದ್ದಕ್ಕೆ ಕಾರಣವೂ ಇದೆ. ಸಚಿನ್ ಆಡುತ್ತಿದ್ದ ಸಮಯದಲ್ಲಿ ಬಕ್ನರ್ ಅಂಪೈರಿಂಗ್ ವೇಳೆ ಒಂದಿಷ್ಟು ವಿವಾದಗಳು ನಡೆದಿದ್ದವು. ಸಚಿನ್ ಔಟ್ ಇಲ್ಲದಾಗಲೂ ಬಕ್ನರ್ ಅನೇಕ ಸಾರಿ ಔಟ್ ತೀರ್ಪು ನೀಡಿದ್ದರು. ಹೀಗಾಗಿ ಐಸಿಸಿ ಟ್ವೀಟಿಗೆ ಸಚಿನ್ ತಮಾಷೆಯಾಗೇ ಪ್ರತಿಕ್ರಿಯಿಸಿದ್ದಾರೆ. 'ಅಂತೂ ಈ ಸಾರಿ ನಾನು ಬರೀ ಬೌಲಿಂಗ್ ಮಾಡುತ್ತಿದ್ದೇನೆ ಹೊರತು ಬ್ಯಾಟಿಂಗ್ ಮಾಡುತ್ತಿಲ್ಲವಲ್ಲ, ಸದ್ಯ. ಒಟ್ಟಿನಲ್ಲಿ ಅಂಪೈರ್ ನಿರ್ಧಾರವೇ ಅಂತಿಮವಪ್ಪ..' ಎಂದು ಬರೆದುಕೊಂಡಿದ್ದಾರೆ.

Story first published: Thursday, May 16, 2019, 10:18 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X