6 ರಾಜ್ಯಗಳಲ್ಲಿ ಬಡ ಮಕ್ಕಳ ಚಿಕಿತ್ಸೆಗೆ ಸಚಿನ್ ತೆಂಡೂಲ್ಕರ್ ನೆರವು

ನವದೆಹಲಿ: ಕೊರೊನಾ ಪಿಡುಗಿನ ನಡುವೆಯೂ ಮಹಾರಾಷ್ಟ್ರ, ವೆಸ್ಟ್ ಬೆಂಗಾಲ್, ಅಸ್ಸಾಂ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಸುಮಾರು 100ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸೆಗೆ ಭಾರತದ ಕ್ರಿಕೆಟ್ ದಂತಕತೆ, ಮಾಸ್ಟರ್ ಬ್ಲಾಸ್ಟರ್ ನೆರವು ನೀಡಿದ್ದಾರೆ.
ಏಕಮ್ ಎಂದು ಕರೆಯಲಾಗುವ ಸಂಸ್ಥೆಯ ಜೊತೆಗೆ ಕೈ ಜೋಡಿಸುತ್ತಿರುವ ಸಚಿನ್ ತೆಂಡೂಲ್ಕರ್, ಸರ್ಕಾರಿ ಮತ್ತು ಟ್ರಸ್ಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ. ತನ್ನ ಸಂಸ್ಥೆಯ ಮೂಲಕ 'ಕ್ರಿಕೆಟ್ ದೇವರು' ಬಡ ಮಕ್ಕಳಿಗೆ ನೆರವೀಯುತ್ತಿದ್ದಾರೆ.
ಗಂಭೀರ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ಬಡ ಕುಟುಂಬಗಳ ಪುಟಾಣಿಗಳು, ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದ ದೀನ-ದಲಿತರು ಸಚಿನ್ ತೆಂಡೂಲ್ಕರ್ ಅವರ ಸಂಸ್ಥೆಯ ಮೂಲಕ ಚಿಕಿತ್ಸೆಯ ನೆರವು ಪಡೆಯುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸಚಿನ್ ಅವರು ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿರುವ ಮುಕುಂದ ಆಸ್ಪತ್ರೆಗೆ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆ ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ಸಚಿನ್ ಈ ಕೊಡುಗೆಯಿಂದ ಪ್ರತೀ ವರ್ಷ ಸುಮಾರು 2000ಕ್ಕೂ ಹೆಚ್ಚು ಮಕ್ಕಳಿಗೆ ಸಹಾಯವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications