ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿಯಲ್ಲಿ ಸಚಿನ್‌ರನ್ನು ಡಕೌಟ್‌ ಮಾಡಿದ ಏಕೈಕ ಬೌಲರ್ ಈತ!

Sachin Tendulkar Recorded His Only Duck In Indian First-class Cricket

ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆಯಬೇಕೆಂಬುದು ಎಲ್ಲಾ ಬೌಲರ್‌ಗಳ ಬಹುದೊಡ್ಡ ಕನಸು. ಸಚಿನ್ ವಿಕೆಟ್ ಪಡೆದ ಅದೆಷ್ಟೋ ಬೌಲರ್‌ಗಳು ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಆದೇ ಸಚಿನ್ ತೆಂಡೂಲ್ಕರ್ ಸೊನ್ನೆಗೆ ವಿಕೆಟ್ ಒಪ್ಪಿಸಿದರೆ ಬೌಲರ್‌ ಯಾವ ರೀತಿ ಸಂಭ್ರಮಿಸಿರಬೇಡ ಹೇಳಿ!

ಹೀಗೆ ಸಚಿನ್ ಮೊದಲ ಬಾರಿಗೆ ರಣಜಿಯಲ್ಲಿ ಡಕ್‌ಔಟ್ ಆಗಿದ್ದರು. ಸಚಿನ್ ಅವರನ್ನು ಸೊನ್ನೆಗೆ ಫೆವಿಲಿಯನ್ ಕಡೆಗೆ ಹೋಗುವಂತೆ ಮಾಡಿದ್ದು ಹದಿನೆಂಟರ ಹರೆಯದ ಬೌಲರ್. ಆತ ಈಗ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಾರು ಆ ಬೌಲರ್, ಸಚಿನ್ ವಿಕೆಟ್ ಪಡೆದ ಆ ಸಂದರ್ಭ ಆ ಯುವ ಬೌಲರ್ ಪಾಲಿಗೆ ಹೇಗಿತ್ತು. ಇವೆಲ್ಲದಕ್ಕೂ ಮುಂದೆ ಇದೆ ಉತ್ತರ..

2009ರ ರಣಜಿ ಋತು

2009ರ ರಣಜಿ ಋತು

2009ರಲ್ಲಿ ರಣಜಿಯಲ್ಲಿ ಸಚಿನ್ ಪಂದ್ಯಗಳು ನಡೆಯುತ್ತಿತ್ತು. ಉತ್ತರ ಪ್ರದೇಶ ಜೊತೆ ಮುಂಬೈ ಕಾದಾಟಕ್ಕೆ ಇಳಿದಿತ್ತು. ಮುಂಬೈ ಪರ ಬ್ಯಾಟಿಂಗ್‌ಗೆ ಇಳಿದಿದ್ದ ಸಚಿನ್ ತೆಂಡೂಲ್ಕರ್ ಡಕೌಟ್ ಆಗಿದ್ದರು. ಸಚಿನ್ ತೆಂಡೂಲ್ಕರ್ ವಿಕೆಟನ್ನು ಸೊನ್ನೆಗೆ ಪಡೆದ ಆ ಯುವ ವೇಗಿಯ ಸಂಭ್ರಮ ಅಷ್ಟಿಷ್ಟಲ್ಲ.

ಯಾರು ಆ ಯುವ ಬೌಲರ್

ಯಾರು ಆ ಯುವ ಬೌಲರ್

ಸಚಿನ್ ತೆಂಡೂಲ್ಕರ್ ಡಕೌಟ್ ಮಾಡಿ ದೊಡ್ಡ ಸುದ್ದಿಯಾದ ಬೌಲರ್ ಬೇರೆ ಯಾರು ಅಲ್ಲ. ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಭುವನೇಶ್ವರ್ ಕುಮಾರ್. ಆ ಕ್ಷಣ ನನ್ನ ಮೇಲಿನ ವಿಶ್ವಾಸ ನನಗೆ ಹೆಚ್ಚಾಯಿತು ಎಂದು ಭುವನೇಶ್ವರ್ ಹೇಳಿದ್ದಾರೆ. ಆ ಮರೆಯಲಾಗದ ಸಂದರ್ಭದ ಬಗ್ಗೆ ಸ್ವತಃ ಭುವಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಯಾರಿಗೂ ಬೌಲ್ ಮಾಡಬಲ್ಲೆ ಎನಿಸಿತ್ತು

ಯಾರಿಗೂ ಬೌಲ್ ಮಾಡಬಲ್ಲೆ ಎನಿಸಿತ್ತು

ಸಚಿನ್ ವಿಕೆಟ್ ಪಡೆದ ಆ ಸಂದರ್ಭ ಯಾವ ರೀತಿ ಭವಿಷ್ಯಕ್ಕೆ ಸಹಕಾರಿಯಾಯಿತು ಎಂದು ಡೇವಿಡ್ ವಾರ್ನರ್ ಭುವನೇಶ್ವರ್ ಕುಮಾರ್‌ ಅವರನ್ನು ಪ್ರಶ್ನಿಸಿದಾಗ ' ಅದು ಸಚಿನ್ ರಣಜಿಯಲ್ಲಿ ಡಕೌಟ್‌ಗೆ ಬಲಿಯಾದ ಏಕಮಾತ್ರ ಸಂದರ್ಭದ ಅದಾಗಿತ್ತು. ಅದು ನನ್ನ ವಿಶ್ವಾಸವನ್ನು ಹೆಚ್ಚಿಸಿತ್ತು. ಆ ವಿಕೆಟ್‌ನ ನಂತರ ಸಾಕಷ್ಟು ಆತ್ಮ ವಿಶ್ವಾಸವನ್ನು ಗಳಿಸಿಕೊಂಡೆ. ಯಾರಿಗೆ ಬೌಲಿಂಗ್ ಮಾಡಬೇಕಾದರು ತಾನು ಈತನ ವಿಕೆಟ್ ಪಡೆಯಬಲ್ಲೆ ಎಂಬ ವಿಶ್ವಾಸವನ್ನು ಉಂಟುಮಾಡಿತು ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಭಾರತದ ಪ್ರಮುಖ ಬೌಲರ್

ಭಾರತದ ಪ್ರಮುಖ ಬೌಲರ್

ಈಗ ಭುವೇಶ್ವರ್ ಕುಮಾರ್ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 21 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಭುವಿ 63 ವಿಕೆಟ್ ಪಡೆದುಕೊಂಡಿದ್ದಾರೆ. 114 ಏಕದಿನ ಪಂದ್ಯಗಲ್ಲಿ 132 ವಿಕೆಟ್ ಪಡೆಯುವಲ್ಲಿಯಶಸ್ವಿಯಾಗಿದ್ದಾರೆ. ಇದರ ಜೊತೆಗೆ 43 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 41 ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Monday, April 27, 2020, 16:10 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X