ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಾನ್ ಬ್ರಾಡ್‌ಮನ್‌ರನ್ನ ಹಿಂದಿಕ್ಕಿದ ಸರ್ಫರಾಜ್ ಖಾನ್: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆ!

Sarfaraz khan

ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಅಮೋಘ ಫಾರ್ಮ್ ಮುಂದುವರಿದಿದೆ. ಇರಾನಿ ಕಪ್‌ನಲ್ಲಿ ಸೌರಾಷ್ಟ್ರ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಆಡುತ್ತಿದೆ. ಪಂದ್ಯದ ಎರಡನೇ ದಿನದಂದು ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್ 374 ರನ್‌ಗಳಿಗೆ ಆಲೌಟ್‌ ಆಗಿದೆ. ಇದಕ್ಕೂ ಮುನ್ನ ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ಕೇವಲ 98 ರನ್‌ಗಳಿಗೆ ಆಲೌಟ್‌ ಆಯಿತು.

ಸೌರಾಷ್ಟ್ರ ಪರ ಬ್ಯಾಟಿಂಗ್ ವೇಳೆ ಸರ್ಫರಾಜ್ ಖಾನ್ 178 ಎಸೆತಗಳಲ್ಲಿ 138 ರನ್ ಗಳಿಸಿದರು. ಅವರ ಅದ್ಭುತ ಇನ್ನಿಂಗ್ಸ್‌ನಲ್ಲಿ ಅವರು 20 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.

ಈ ಶತಕದೊಂದಿಗೆ ಅವರು ತಮ್ಮ ಪ್ರಥಮ ದರ್ಜೆಯಲ್ಲಿ 29 ಪಂದ್ಯಗಳ 43 ಇನ್ನಿಂಗ್ಸ್‌ಗಳಲ್ಲಿ 2928 ರನ್ ಗಳಿಸಿದ್ದಾರೆ. ಇದರೊಂದಿಗೆ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಮಾಡಿದ್ದಾರೆ. ಸರ್ಫರಾಜ್ ಡಾನ್ ಬ್ರಾಡ್ಮನ್ ಅವರನ್ನು ಹಿಂದಿಕ್ಕಿದ್ದಾರೆ.

43 ಇನ್ನಿಂಗ್ಸ್‌ಗಳಲ್ಲಿ 2928 ರನ್

43 ಇನ್ನಿಂಗ್ಸ್‌ಗಳಲ್ಲಿ 2928 ರನ್

ವಾಸ್ತವವಾಗಿ, ಸರ್ಫರಾಜ್ 29 ಪ್ರಥಮ ದರ್ಜೆ ಪಂದ್ಯಗಳ 43 ಇನ್ನಿಂಗ್ಸ್‌ಗಳಲ್ಲಿ 2928 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಡಾನ್ ಬ್ರಾಡ್ಮನ್ ಪ್ರಥಮ ದರ್ಜೆಯಲ್ಲಿ 22 ಪಂದ್ಯಗಳ 43 ಇನ್ನಿಂಗ್ಸ್‌ಗಳಲ್ಲಿ 83.63 ಸರಾಸರಿಯಲ್ಲಿ 2927 ರನ್ ಗಳಿಸಿದರು. ಈ ಸಮಯದಲ್ಲಿ, ಅವರು 12 ಶತಕ ಮತ್ತು 9 ಅರ್ಧ ಶತಕಗಳನ್ನು ಸಹ ಗಳಿಸಿದರು ಮತ್ತು 8 ಬಾರಿ ಔಟಾಗಲಿಲ್ಲ.

ಮತ್ತೊಂದೆಡೆ, ನಾವು ಸರ್ಫರಾಜ್ ಬಗ್ಗೆ ಮಾತನಾಡುವುದಾದರೆ, ಅವರು 43 ಇನ್ನಿಂಗ್ಸ್‌ಗಳಲ್ಲಿ 10 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೇ 7 ಬಾರಿ ಔಟಾಗದೆ ಉಳಿದಿದ್ದಾರೆ. ಬ್ರಾಡ್‌ಮನ್ ತಮ್ಮ 44ನೇ ಇನ್ನಿಂಗ್ಸ್‌ನಲ್ಲಿ ಔಟಾಗದೆ 452 ರನ್ ಗಳಿಸಿದರು.

IND vs SA: ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರಲಿದ್ದಾರೆ ಸೂರ್ಯಕುಮಾರ್ ಯಾದವ್

ಶತಕದ ಮೇಲೆ ಶತಕ ಸಿಡಿಸಿರುವ ಸರ್ಫರಾಜ್ ಖಾನ್

ಶತಕದ ಮೇಲೆ ಶತಕ ಸಿಡಿಸಿರುವ ಸರ್ಫರಾಜ್ ಖಾನ್

ಅದ್ಭುತ ಫಾರ್ಮ್‌ನಲ್ಲಿರುವ ಸರ್ಫರಾಜ್ ಖಾನ್ ಕಳೆದ ರಣಜಿ ಋತುವಿನಿಂದ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ರಣಜಿ ಫೈನಲ್‌ನಲ್ಲಿ ಮುಂಬೈ ಪರ ಶತಕ ದಾಖಲಿಸಿದ್ದ ಸರ್ಫರಾಜ್, ಈ ವರ್ಷದ ರಣಜಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದರು.

ಇದಲ್ಲದೆ ದುಲೀಪ್ ಟ್ರೋಫಿ ಹಾಗೂ ಇದೀಗ ಇರಾನಿ ಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ಸರ್ಫರಾಜ್ ತನ್ನ ಅದ್ಭುತ ಆಟವನ್ನ ಮುಂದುವರಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ 4 ವಾರಗಳಲ್ಲಿ ಚೇತರಿಕೆ ಸಾಧ್ಯತೆ! ಟಿ20 ವಿಶ್ವಕಪ್‌ಗೆ ಲಭ್ಯವಿದ್ದಾರೆಯೇ?

ಬ್ರಾಡ್‌ಮನ್ ಮತ್ತು ಸರ್ಫರಾಜ್ ಒಟ್ಟಾರೆ ಅಂಕಿ ಅಂಶ

ಬ್ರಾಡ್‌ಮನ್ ತಮ್ಮ ವೃತ್ತಿಜೀವನದಲ್ಲಿ 234 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 338 ಇನ್ನಿಂಗ್ಸ್‌ಗಳಲ್ಲಿ 95.14ರ ಸರಾಸರಿಯಲ್ಲಿ 28,067 ರನ್ ಗಳಿಸಿದ್ದಾರೆ. ಅವರು 117 ಪ್ರಥಮ ದರ್ಜೆ ಶತಕ ಮತ್ತು 69 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ 43 ಬಾರಿ ಔಟಾಗದೆ ಉಳಿದಿದ್ದಾರೆ.

ಮತ್ತೊಂದೆಡೆ, ಸರ್ಫರಾಜ್ 21 ಲಿಸ್ಟ್ ಎ ಪಂದ್ಯಗಳಲ್ಲಿ 325 ರನ್ ಮತ್ತು 74 ಟಿ20 ಐಗಳಲ್ಲಿ 872 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟಾರೆ 28 ಪಂದ್ಯಗಳಿಂದ 2790 ರನ್‌ಗಳಿಸಿದ್ದು ಗರಿಷ್ಠ ಅಜೇಯ 301ರನ್ ದಾಖಲಿಸಿದ್ದಾರೆ. ಇದೇ ಅವಧಿಯಲ್ಲಿ ಸರ್ಫರಾಜ್ 9 ಶತಕ ಮತ್ತು 8 ಅರ್ಧಶತಕ ದಾಖಲಿಸಿದ್ರು.

Story first published: Monday, October 3, 2022, 10:30 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X