ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೆಫಾಲಿ ವರ್ಮಾ ಮತ್ತು ಇನ್ನಿಬ್ಬರು ಆಟಗಾರ್ತಿಯರು ಡಬ್ಲ್ಯೂಬಿಬಿಎಲ್ ಆಡಲಿದ್ದಾರೆ

 Shafali Verma and two other Indian cricketers to be a part of WBBL 2021-22

ಬಿಸಿಸಿಐ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು ವಿಶ್ವದಾದ್ಯಂತ ನಡೆಯುವ ಯಾವುದೇ ಫ್ರಾಂಚೈಸಿ ಲೀಗ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟಿಗರು ಭಾಗವಹಿಸಬಹುದು ಎಂಬ ನಿರ್ಧಾರವನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಸ್ಮೃತಿ ಮಂಧಾನ ಹಾಗೂ ಹರ್ಮನ್ ಪ್ರೀತ್ ಕೌರ್ ಈ 4 ಭಾರತದ ಆಟಗಾರ್ತಿಯರಿಗೆ ದ ಹಂಡ್ರೆಡ್ ಉದ್ಘಾಟನಾ ಆವೃತ್ತಿಯಲ್ಲಿ ಭಾಗವಹಿಸಲು ಎನ್ಒಸಿಯನ್ನು (ನಿರಾಕರಣೆಯ ಪ್ರಶಂಸಾಪತ್ರ) ನೀಡಿತ್ತು.

ಇದೀಗ ಬಿಸಿಸಿಐ ಭಾರತದ 3 ಕ್ರಿಕೆಟ್ ಆಟಗಾರ್ತಿಯರಿಗೆ ಮುಂಬರುವ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲು ಅನುಮತಿಯನ್ನು ನೀಡಿದೆ. ಎನ್ಒಸಿ ಪಡೆದುಕೊಂಡಿರುವ ಶೆಫಾಲಿ ವರ್ಮಾ ಹಾಗೂ ಎಡಗೈ ಸ್ಪಿನ್ನರ್ ರಾಧಾ ಯಾದವ್ ತಮ್ಮ ಚೊಚ್ಚಲ ಮಹಿಳಾ ಬಿಗ್ ಬ್ಯಾಷ್ ಲೀಗ್‌ನ್ನು ಆಡಲಿದ್ದಾರೆ.

17 ವರ್ಷ ಹರೆಯದ ಶೆಫಾಲಿ ವರ್ಮಾ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ 2 ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿರುವ ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡಲಿದ್ದು ರಾಧಾ ಯಾದವ್ ಕೂಡ ಸಿಡ್ನಿ ಕ್ಲಬ್‌ನ ಎರಡು ತಂಡಗಳ ಪೈಕಿ ಯಾವುದಾದರೊಂದು ತಂಡದ ಪರ ಆಡಲಿದ್ದಾರೆ ಎಂಬ ಸುದ್ದಿ ಇದೆ. ಈ ಇಬ್ಬರು ಆಟಗಾರ್ತಿಯರ ಜತೆ ಮತ್ತೊಬ್ಬ ಭಾರತೀಯ ಕ್ರಿಕೆಟ್ ಆಟಗಾರ್ತಿ ಮುಂಬರುವ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲಿದ್ದಾರೆ.

Story first published: Thursday, May 13, 2021, 15:35 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X