ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿಂದೂ ಎಂಬ ಕಾರಣಕ್ಕೆ ಆಡುವ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದ ಕನೇರಿಯಾ ವಿರುದ್ಧ ಅಫ್ರಿದಿ ಕಿಡಿ

Shahid Afridi hits back at Danish Kaneria after serious allegations

ಪಾಕಿಸ್ತನಾದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಇತ್ತೀಚೆಗಷ್ಟೇ ಭಾಗವಹಿಸಿದ್ದ ಸಂದರ್ಶನವೊಂದರಲ್ಲಿ ಮಾತನಾಡಿ ಶಾಹಿದ್ ಅಫ್ರಿದಿ ತನ್ನ ವಿರುದ್ಧ ಪಿತೂರಿ ನಡೆಸಿದ್ದರು ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಹೌದು, ಶಾಹಿದ್ ಅಫ್ರಿದಿ ತಾನು ಹಿಂದೂ ಎಂಬ ಕಾರಣಕ್ಕಾಗಿ ತನಗೆ ಹೆಚ್ಚು ಆಡುವ ಅವಕಾಶ ನೀಡದೇ ತಂಡದಿಂದ ಹೊರಗಿಟ್ಟು ಬೆಂಚ್ ಕಾಯುವಂತೆ ಮಾಡಿದ್ದರು ಎಂಬ ಗಂಭೀರ ಆರೋಪವನ್ನು ಮಾಡಿದ್ದರು.

ಈ ಆರೋಪದ ಕುರಿತಾಗಿ ಇದೀಗ ಪಾಕಿಸ್ತಾನದ ಶಾಹಿದ್ ಅಫ್ರಿದಿ ಮಾತನಾಡಿದ್ದು, ದನೀಶ್ ಕನೇರಿಯಾ ಹೇಳಿದ್ದೆಲ್ಲಾ ಸುಳ್ಳು ಎಂದಿದ್ದಾರೆ. ಹೌದು, ಈ ಕುರಿತಾಗಿ ಮಾತನಾಡಿದ ಶಾಹಿದ್ ಅಫ್ರಿದಿ ' ದನೀಶ್ ಕನೇರಿಯಾ ನನ್ನ ಸೋದರನ ಹಾಗೆ ಹಾಗೂ ಇಬ್ಬರೂ ಸಹ ಒಂದೇ ವಿಭಾಗದಲ್ಲಿ ಹಲವಾರು ವರ್ಷಗಳ ಕಾಲ ಆಟವನ್ನಾಡಿದ್ದೇವೆ' ಎಂದು ಹೇಳಿಕೆ ನೀಡಿದ್ದಾರೆ. ಹಾಗೂ ಇದೇ ಸಂದರ್ಭದಲ್ಲಿ ದನೀಶ್ ಕನೇರಿಯಾ ವಿರುದ್ಧ ತನ್ನ ಕೋಪವನ್ನು ಹೊರಹಾಕಿದ ಶಾಹಿದ್ ಅಫ್ರಿದಿ ನನ್ನ ಚಾರಿತ್ರದ ಬಗ್ಗೆ ಮಾತನಾಡುವ ವ್ಯಕ್ತಿ ಮೊದಲು ತನ್ನ ಚಾರಿತ್ರವನ್ನು ನೋಡಿಕೊಳ್ಳಬೇಕಿದೆ ಎಂದಿದ್ದಾರೆ.

92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್!92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್!

ಇನ್ನೂ ಮುಂದುವರೆದು ಮಾತನಾಡಿರುವ ಶಾಹಿದ್ ಅಫ್ರಿದಿ ಒಂದುವೇಳೆ ಅವರು ಆರೋಪ ಮಾಡುತ್ತಿರುವುದು ನಿಜವೇ ಆಗಿದ್ದರೆ, ಇದನ್ನು ಅಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ದೂರು ನೀಡಬೇಕಿತ್ತು ಎಂದಿದ್ದಾರೆ. ಹಾಗೂ ದೂರು ನೀಡುವ ಬದಲು ಸುಮ್ಮನಿದ್ದು, ಈಗ ಎದುರಾಳಿ ದೇಶದ ಚಾನೆಲ್‌ಗಳಲ್ಲಿ ಕುಳಿತು ಆರೋಪ ಮಾಡುವುದು ಸರಿಯಲ್ಲ ಹಾಗೂ ಇದು ಎರಡೂ ದೇಶಗಳ ನಡುವೆ ಧರ್ಮದ ಹೆಸರಿನಲ್ಲಿ ದ್ವೇಷ ಸಾಧಿಸಲು ಎಡೆ ಮಾಡಿಕೊಡುತ್ತದೆ ಎಂದು ಶಾಹಿದ್ ಅಫ್ರಿದಿ ಹೇಳಿಕೆ ನೀಡಿದ್ದಾರೆ.

ದನೀಶ್ ಕನೇರಿಯಾ ಆರೋಪ ಮಾಡಿದ್ದು ಹೀಗೆ:

ನ್ಯೂಸ್ ಏಜೆನ್ಸಿ ಐಎಎನ್ಎಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ದನೀಶ್ ಕನೇರಿಯಾ ಶಾಹಿದ್ ಅಫ್ರಿದಿ ವಿರುದ್ಧ ಆರೋಪ ಮಾಡಿದ್ದರು. ತಾನು ಹಿಂದೂ ಎಂಬ ಕಾರಣಕ್ಕೆ ಅಫ್ರಿದಿ ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎಂದಿರುವ ದನೀಶ್ ಕನೇರಿಯಾ ತಂಡದ ಆಡುವ ಬಳಗದಲ್ಲಿ ತನಗೆ ಸ್ಥಾನ ನೀಡುತ್ತಿರಲಿಲ್ಲ ಎಂದೂ ಸಹ ಆರೋಪಿಸಿದ್ದರು. "ಅಫ್ರಿದಿ ಓರ್ವ ಸುಳ್ಳುಗಾರ ಹಾಗೂ ಆತ ಚಾರಿತ್ಯ್ರಹೀನ ವ್ಯಕ್ತಿ. ನನಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡುತ್ತಿರಲಿಲ್ಲ. ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ನಾನು ನನ್ನ ಪಾಡಿಗೆ ಆಟವಾಡುತ್ತಿದ್ದೆ. ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೆ, ಆದರೆ ಇದನ್ನು ಸಹಿಸದ ಅಫ್ರಿದಿ ನನ್ನ ವಿರುದ್ಧ ತಂಡದ ಇತರೆ ಆಟಗಾರರನ್ನು ಎತ್ತಿಕಟ್ಟುತ್ತಿದ್ದರು. ಆದರೆ, ಪಾಕಿಸ್ತಾನದ ಪರ ಆಡಿದ ಹೆಮ್ಮೆ ನನಗಿದೆ" ಎಂದು ದಾನಿಶ್ ಕನೇರಿಯಾ ಹೇಳಿಕೆ ನೀಡಿದ್ದರು.

ತಂಡಗಳನ್ನು ಗೆಲ್ಲಿಸಲಾಗದೇ ಐಪಿಎಲ್ ಟೂರ್ನಿಯ ಮಧ್ಯದಲ್ಲಿಯೇ ನಾಯಕತ್ವ ಬಿಟ್ಟ 14 ನಾಯಕರು ಇವರೇ!ತಂಡಗಳನ್ನು ಗೆಲ್ಲಿಸಲಾಗದೇ ಐಪಿಎಲ್ ಟೂರ್ನಿಯ ಮಧ್ಯದಲ್ಲಿಯೇ ನಾಯಕತ್ವ ಬಿಟ್ಟ 14 ನಾಯಕರು ಇವರೇ!

ದನೀಶ್ ಕನೇರಿಯಾ ಅಂಕಿಅಂಶ: ದನೀಶ್ ಪ್ರಭಾ ಶಂಕರ್ ಕನೇರಿಯಾ 1980ರ ಡಿಸೆಂಬರ್ 16ರಂದು ಸಿಂಧ್‌ನ ಕರಾಚಿಯಲ್ಲಿ ಜನಿಸಿದರು. ಪ್ರಭಾಶಂಕರ್‌ಭಾಯ್‌ ಲಾಲ್‌ಜೀಭಾಯ್ ಕನೇರಿಯಾ ಹಾಗೂ ಬಬಿತಾ ಪ್ರಭಾಶಂಕರ್‌ಭಾಯ್‌ ಕನೇರಿಯಾ ಈ ಇಬ್ಬರು ದನೀಶ್ ಕನೇರಿಯಾ ಅವರ ತಂದೆ ಮತ್ತು ತಾಯಿ. 2000 - 2010ರವರೆಗೆ ಪಾಕಿಸ್ತಾನ ಅಂತರರಾಷ್ಟ್ರೀಯ ತಂಡದ ಪರ ಆಡಿರುವ ದನೀಶ್ ಕನೇರಿಯಾ 61 ಟೆಸ್ಟ್ ಪಂದ್ಯಗಳನ್ನಾಡಿ 261 ವಿಕೆಟ್‌ಗಳನ್ನು ಪಡೆದಿದ್ದಾರೆ ಹಾಗೂ ಕೇವಲ 18 ಪಂದ್ಯಗಳನ್ನಾಡಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Friday, May 6, 2022, 17:57 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X