ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವದಲ್ಲಿ ರಿಕಿ ಪಾಂಟಿಂಗ್‌ಗಿಂತ ಧೋನಿಗೆ ಹೆಚ್ಚು ಅಂಕ ನೀಡಿದ ಶಾಹಿದ್ ಅಫ್ರಿದಿ

Shahid Afridi On Why He Rates Ms Dhoni Higher Than Ricky Ponting As Captain

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ನಾಯಕರು ಎಂದು ಹೆಸರಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ಇಬ್ಬರೂ ನಾಯಕರು ತಲಾ ಎರಡು ವಿಶ್ವಕಪ್ ಗೆದ್ದುಕೊಟ್ಟ ಸಾಧನೆಯನ್ನು ಮಾಡಿ ತಮ್ಮ ತಂಡವನ್ನು ಶ್ರೇಷ್ಠ ಮಟ್ಟಕ್ಕೇರಿಸಿದ್ದಾರೆ.

ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಇಬ್ಬರು ಶ್ರೇಷ್ಠ ನಾಯಕರ ಪೈಕಿ ಒಬ್ಬರನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯ ವಿಚಾರವೇನೆಂದರೆ ಶಾಹಿದ್ ಅಫ್ರಿದಿ ರಿಕಿ ಪಾಂಟಿಂಗ್‌ಗಿಂತ ಧೋನಿ ಅತ್ಯುತ್ತಮ ನಾಯಕ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಪ್ರಶ್ನೋತ್ತರ ಅವಧಿಯನ್ನು ನಡೆಸಿದ ಅಫ್ರಿದಿಗೆ ಈ ಪ್ರಶ್ನೆ ಎದುರಾಗಿತ್ತು.

ಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವುಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವು

ಶಾಹಿದ್ ಅಫ್ರಿದಿ ಧೋನಿ ರಿಕಿ ಪಾಂಟಿಂಗ್‌ಗಿಂತ ಶ್ರೇಷ್ಠ ಎಂದು ಮಾತ್ರವೇ ಹೇಳಿಲ್ಲ. ಅದಕ್ಕೆ ತಮ್ಮದೇ ಅದ ಕಾರಣವನ್ನೂ ನೀಡಿದ್ದಾರೆ. ಯುವ ತಂಡವನ್ನು ಕಟ್ಟಿಕೊಂಡು ಟೀಮ್ ಇಂಡಿಯಾವನ್ನು ಮುನ್ನಡೆಸಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಹಾಗಾಗಿ ಪಾಂಟಿಂಗ್‌ಗಿಂತ ಧೋನಿ ಮುಂದಿದ್ದಾರೆ ಎಂದು ಅಫ್ರಿದಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ 2011ರ ಏಕದಿನ ವಿಶ್ವಕಪ್ ಗೆಲುವಿಗೂ ಮುನ್ನ 2007ರಲ್ಲಿ ತಂಡದ ಪ್ರಮುಖ ಆಟಗಾರರ ಅನುಪಸ್ಥಿಯಲ್ಲಿ ಚೊಚ್ಚಲ ಟಿ20 ವಿಶ್ವಕಪ್‌ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್

ರಿಕಿ ಪಾಂಟಿಂಗ್ ಆಸ್ಟ್ರೇಲಿಯಾಗೆ 2003 ಹಾಗೂ 2007ರಲ್ಲಿ ಸತತ ಎರಡು ವಿಶ್ವಕಪ್‌ಗಳನ್ನು ಗೆಲ್ಲಿಸಿದ್ದರು. ಆದರೆ ಅದ್ಕು ಮುನ್ನ ಆಸ್ಟ್ರೆಲಿಯಾ ತಂಡ ಮಾಜಿ ನಾಯಕ ಸ್ಟೀವ್ ವಾ ನೇತೃತ್ವದಲ್ಲಿ ಉತ್ಕೃಷ್ಠಮಟ್ಟಕ್ಕೇರಿತ್ತು. ಅದಾಗಲೇ ಚೆನ್ನಾಗಿ ನೆಲೆಯೂರಿದ್ದ ತಂಡವನ್ನು ಮುನ್ನಡೆಸಿದ ಪಾಂಟಿಂಗ್ ಹಿಂದಿನ ಯಶಸ್ಸನ್ನು ಮುಂದುವರಿಸಿದ್ದರು.

Story first published: Thursday, July 30, 2020, 14:25 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X