ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ನಂತರ ಅಫ್ರಿದಿ ಏಕದಿನ ಕ್ರಿಕೆಟ್ ಆಡಲ್ಲಂತೆ !

By Mahesh

ಕರಾಚಿ, ಡಿ.22: ಟಿ20 ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಏಕದಿನ ಕ್ರಿಕೆಟ್ ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ ರೌಂಡರ್ ಶಾಹೀದ್ ಅಫ್ರಿದಿ ನಿವೃತ್ತಿ ಘೋಷಿಸಿದ್ದಾರೆ. 2015ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ಆಡುವುದಿಲ್ಲ ಎಂದು ಅಫ್ರಿದಿ ಘೋಷಿಸಿದ್ದಾರೆ.

'ನನ್ನ ಕ್ರಿಕೆಟ್ ಜೀವನದಲ್ಲಿ ಹಲವು ಏರಿಳಿತಗಳನ್ನು ನೋಡಿದ್ದೇನೆ. ಈ ಎಲ್ಲದರ ನಡುವೆಯೂ ನನಗೆ ನನ್ನ ಕ್ರಿಕೆಟ್ ಬದುಕಿನ ಬಗ್ಗೆ ಸಂತೃಪ್ತಿ ಇದೆ. ಏಕದಿನ ಕ್ರಿಕೆಟ್ ನಿಂದ ಹೆಮ್ಮೆಯಿಂದ ನಿವೃತ್ತಿ ಘೋಷಣೆ ಮಾಡಲು ಬಯಸಿದ್ದೆ. ನಾನು ಟಿ 20 ಪಂದ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಲು ಬಯಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಫೆಬ್ರವರಿ 14 ರಿಂದ ಮಾರ್ಚ್ 29ರ ವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿ ನಂತರ ಅಫ್ರಿದಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

Shahid Afridi to quit ODIs after 2015 World Cup

34 ವರ್ಷದ ಅಫ್ರಿದಿ 2010ರಲ್ಲಿ ಟಿ-ಟ್ವೆಂಟಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ನೋವಿನಿಂದಲೇ ಈ ವಿದಾಯ ಹೇಳುತ್ತಿದ್ದೇನೆ. ಆದರೆ, ತಂಡದ ಭವಿಷ್ಯದ ದೃಷ್ಟಿಯಿಂದ ನನ್ನ ನಿರ್ಧಾರ ಸರಿಯಾಗಿಯೇ ಇದೆ ಎಂದು ಅಫ್ರಿದಿ ಹೇಳಿದ್ದಾರೆ.

ನೈರೋಬಿಯಲ್ಲಿ ಕೀನ್ಯಾ ವಿರುದ್ಧ 1996ರಲ್ಲಿ ಅಕ್ಟೋಬರ್ 2ರಂದು ನಡೆದ ಪಂದ್ಯದೊಂದಿಗೆ ಅಫ್ರಿದಿ ಏಕದಿನ ಅಂತಾರಾಷ್ಟ್ರೀಯ ಟೂರ್ನಿಗೆ ಪಾದಾರ್ಪಣೆ ಮಾಡಿದ್ದರು. ಏಕದಿನ ಪ್ರವೇಶ ಮಾಡಿದ ಮೂರು ದಿನಗಳಲ್ಲೇ ಅವರು ವಿಶ್ವದಾಖಲೆ ಸಾಧನೆ ಮಾಡಿದ್ದರು.

ಟ್ವಿಟ್ಟರ್ ನಲ್ಲಿ ನಿವೃತ್ತಿ ಬಗ್ಗೆ ಅಫ್ರಿದಿ ಹೇಳಿದ್ದು ಹೀಗೆ:


ಅ.4ರಂದು ನೈರೋಬಿಯಲ್ಲೇ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಸುಮಾರು 17 ವರ್ಷಗಳ ಕಾಲ ಈ ದಾಖಲೆ ಯಾರೂ ಮುರಿಯಲು ಆಗಿರಲಿಲ್ಲ. ನ್ಯೂಜಿಲೆಂಡ್‌ನ ಕೋರೆ ಆಂಡರ್ಸನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಮುರಿದರು.

ಏಕದಿನ ಕ್ರಿಕೆಟ್ ವೃತ್ತಿ ಆರಂಭದಲ್ಲಿ ನೆರವಾದ ಕ್ರಿಕೆಟರ್ ಗಳನ್ನು ಸ್ಮರಿಸಿದ ಅಫ್ರಿದಿ:

ಒಟ್ಟು 389 ಏಕದಿನ ಪಂದ್ಯಗಳನ್ನಾಡಿರುವ ಪಾಕಿಸ್ತಾನದ ಆಲ್‌ರೌಂಡರ್ 23.49ರ ಸರಾಸರಿಯಲ್ಲಿ 7870 ರನ್‌ಗಳಿಸಿದ್ದಾರೆ. ಅಲ್ಲದೆ 391 ವಿಕೆಟ್‌ಗಳನ್ನೂ ಸಹ ಉರುಳಿಸಿದ್ದು, ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಆರನೇ ಬೌಲರ್ ಅವರಾಗಿದ್ದಾರೆ. ವಿಶ್ವಕಪ್ ಟೂರ್ನಿ ಮುಗಿಯುವುದರೊಳಗೆ 400 ವಿಕೆಟ್ ಪಡೆಯುವ ಇರಾದೆ ಹೊಂದಿದ್ದಾರೆ. 2010ರಲ್ಲೇ ಪಾಕಿಸ್ತಾನ ಟೆಸ್ಟ್ ತಂಡದಿಂದ ಹೊರ ನಡೆದು ನಿವೃತ್ತಿ ಘೋಷಿಸಿದ್ದಾರೆ.(ಪಿಟಿಐ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X