ಪುಲ್ವಾಮಾ ದಾಳಿ: ಮೃತ ಸೈನಿಕರ ಕುಟುಂಬಕ್ಕೆ ಹಣ ದೇಣಿಗೆ ನೀಡಿದ ಶಮಿ

ನವದೆಹಲಿ, ಫೆಬ್ರವರಿ 18: ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಪುಲ್ವಾಮಾ ದಾಳಿಯಲ್ಲಿ ಅಸುನೀಗಿದ ಸೈನಿಕರ ಕುಟುಂಬಕ್ಕೆ ಧನ ಸಹಾಯ ಮಾಡಿದ್ದಾರೆ. ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಬಳಿಕ ಮೃತ ಯೋಧರ ಕುಟುಂಬಕ್ಕೆ ಹಣ ದೇಣಿಗೆ ನೀಡಿದ ಮೂರನೇ ಭಾರತದ ಕ್ರಿಕೆಟಿಗ ಶಮಿ.
'ನಾವು ದೇಶಕ್ಕಾಗಿ ಆಡುವಾಗ ಅವರು (ಸೈನಿಕರು) ಗಡಿಯಲ್ಲಿ ನಿಂತು ನಮಗೆ ರಕ್ಷಣೆ ನೀಡುತ್ತಿರುತ್ತಾರೆ. ನಮ್ಮ ಯೋಧರ ಕುಟುಂಬದ ನೆರವಿಗೆ ನಾವಿದ್ದೇವೆ' ಎಂದು ಶಮಿ ಸೋಮವಾರ (ಫೆಬ್ರವರಿ 18) ಎಎನ್‌ಐ ಜೊತೆ ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್ ಕೂಡ ಸಾವನ್ನಪ್ಪಿದ ಕುಟುಂಬದ ಬೆಂಬಲಕ್ಕೆ ಇರುವುದಾಗಿ ತಿಳಿಸಿದ್ದರು.
ಮೃತ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರುವುದಾಗಿ ತಿಳಿಸಿದ್ದ ಕ್ರಿಕೆಟಿಗ ಸೆಹ್ವಾಗ್ ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದರು. ಬಿಸಿಸಿಐ ಆ್ಯಕ್ಟಿಂಗ್ ಪ್ರೆಸಿಡೆಂಡ್ ಎಕೆ ಖನ್ನಾ, ಉಗ್ರರ ದಾಳಿಗೆ ಬಲಿಯಾದ ಸೈನಿಕರ ಕುಟುಂಬದ ನೆರವಿಗೆ ಕನಿಷ್ಠ 5 ಕೋಟಿ ನೆರವನ್ನು ಬಿಸಿಸಿಐ ನೀಡುವಂತೆ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಅವರಲ್ಲಿ ಕೇಳಿಕೊಂಡಿದ್ದರು.
ಈ ಬಾರಿಯ ಇರಾನಿ ಕಪ್ ಗೆದ್ದಾಗ ವಿದರ್ಭ ತಂಡಕ್ಕೆ ಸಿಕ್ಕ ಅಷ್ಟೂ ಹಣವನ್ನು ಮೃತ ಸಿಆರ್‌ಪಿಎಫ್ ಯೋಧರ ಕುಟುಂಬದ ನರವಿಗೆ ನೀಡುವುದಾಗಿ ವಿದರ್ಭ ನಾಯಕ ಫೈಝ್ ಫಝಲ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications