ಶಿವಮೊಗ್ಗದಲ್ಲಿ ರಣಜಿ ಪಂದ್ಯ: ಕರ್ನಾಟಕ vs ಹೈದರಾಬಾದ್

Posted By:

ಶಿವಮೊಗ್ಗ, ಅಕ್ಟೋಬರ್ 23: ಕರ್ನಾಟಕ ಹಾಗೂ ಹೈದರಾಬಾದ್ ನಡುವಿನ ರಣಜಿ ಪಂದ್ಯಕ್ಕೆ ಇಲ್ಲಿನ ನವಿಲೆಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣಸಜ್ಜಾಗಿದೆ. ಆಟಗಾರರ ತಾಲೀಮು ಚಿತ್ರಗಳು ಇಲ್ಲಿವೆ..

ಮಂಗಳವಾರ ಆರಂಭವಾಗಲಿರುವ ಪಂದ್ಯಕ್ಕೆ ಉಭಯ ತಂಡಗಳು ಸೋಮವಾರ ಕಠಿಣ ತಾಲೀಮು ನಡೆಸಿದವು. ಪಂದ್ಯಾವಳಿಗೆ ಮೂರು ದಿನಗಳ ಮುನ್ನವೇ ಉಭಯ ತಂಡದ ಆಟಗಾರರು ಶಿವಮೊಗ್ಗಕ್ಕೆ ಬಂದಿಳಿದಿದ್ದರು. ಇಲ್ಲಿನ ವಾತಾವರಣ ಹಾಗೂ ಕ್ರೀಡಾಂಗಣಕ್ಕೆ ಹೊಂದಿಕೊಳ್ಳಲು ಇದರಿಂದ ನೆರವಾಗಿದೆ. ಶನಿವಾರ ರಾತ್ರಿ ನಗರದ ರಾಯಲ್ ಆರ್ಕಿಡ್‌ ಹೋಟೆಲ್‌ ನಲ್ಲಿ ಆಟಗಾರರು ವಾಸ್ತವ್ಯ ಹೂಡಿದರು.

ರಿಕ್ಷಾ ಚಾಲಕನ ಮಗ ಕ್ರಿಕೆಟರ್ ಸಿರಾಜ್ ಕನಸು ನನಸು

ಸೋಮವಾರ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಕ್ರೀಡಾಂಗಣಕ್ಕೆ ಬಂದ ಹೈದರಾಬಾದ್ ಮತ್ತು ಕರ್ನಾಟಕ ಆಟಗಾರರು ಫುಟ್‌ ಬಾಲ್‌ ಆಡುವ ಮೂಲಕ ದೈಹಿಕ ಕಸರತ್ತು ನಡೆಸಿದರು.

ತಂಡದ ನಾಯಕ ಅಂಬಟಿ ರಾಯುಡು ಪಿಚ್‌ ಪರಿಶೀಲನೆ ನಡೆಸಿದರು. ಬಳಿಕ ನೆಟ್ಸ್‌ಗೆ ತೆರಳಿ ಮಧ್ಯಾಹ್ನ 1ರವರೆಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಅಭ್ಯಾಸ ನಡೆಸಿದರು. ತಂಡದ ಪ್ರಮುಖ ಸ್ವಿನ್ನರ್ ಪ್ರಗ್ಯಾನ್ ಓಜಾ ಸೇರಿದಂತೆ ಇತರೆ ವೇಗಿ ಮತ್ತು ಸ್ವಿನ್ನರ್‌ಗಳು ತುಂಬಾ ಹೊತ್ತು ಬೌಲಿಂಗ್‌ ಮಾಡಿದರು. ಬಳಿಕ ಫೀಲ್ಡಿಂಗ್‌ ತಾಲೀಮು ನಡೆಸಿದರು.

ಭಾನುವಾರ ನಡೆದ ತಾಲೀಮಿನಲ್ಲಿ ಕಾಣಿಸಿಕೊಳ್ಳದ ಕರ್ನಾಟಕ ತಂಡದ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಸೋಮವಾರ ತಂಡವನ್ನು ಕೂಡಿಕೊಂಡಿದ್ದು, ಅವರು ಸಹ ಸಹ ಆಟಗಾರರೊಂದಿಗೆ ಕ್ರೀಡಾಂಗಣದಲ್ಲಿ ಬೆವರು ಸುರಿಸಿದರು.

ಆತ್ವವಿಶ್ವಾಸದಲ್ಲಿ ಆತೀಥೇಯರು

ಆತ್ವವಿಶ್ವಾಸದಲ್ಲಿ ಆತೀಥೇಯರು

ಕಳೆದ ಋತುವಿನಲ್ಲಿ ಕ್ವಾಟರ್ ಫೈನಲ್‌ನಲ್ಲಿ ಕರ್ನಾಟಕ ಮುಗ್ಗರಿಸಿತ್ತು. ಈ ಬಾರಿ ಮೈಸೂರಿನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಇನಿಂಗ್ಸ್ ಜಯದೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಟಗಾರರು ಅ.24ರಿಂದ ಆರಂಭವಾಗುವ ಶಿವಮೊಗ್ಗದಲ್ಲಿನ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಹಾದಿ ಸುಗಮಗೊಳಿಸಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.

ಆಟಗಾರರ ಮೆಚ್ಚುಗೆ

ಆಟಗಾರರ ಮೆಚ್ಚುಗೆ

ಬಿಸಿಸಿಐ ಈ ಬಾರಿಯ ರಣಜಿ ಪಂದ್ಯಗಳಿಗೆ ತಟಸ್ಥ ಕ್ಯುರೇಟರ್‌ಗಳನ್ನು ನೇಮಿಸಿದೆ. ಕರ್ನಾಟಕ- ಹಾಗೂ ಹೈದರಬಾದ್ ನಡುವಿನ ಪಂದ್ಯಕ್ಕೆ ಶಿವಮೊಗ್ಗದ ಪಿಚ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಕೆಎಸ್‌ಸಿಎ ಕ್ಯುರೇಟರ್‌ ಶ್ರೀರಾಮ್‌ ಅವರಿಗೆ ವಹಿಸಲಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡಕ್ಕೂ ಅನುಕೂಲವಾಗುವಂತೆ ಸಿದ್ಧಪಡಿಸಿರುವ ಪಿಚ್‌ ಬಗ್ಗೆ ಉಭಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯದ ಚೇರ್ಮನ್ ಸುಕುಮಾರ್ ಪಟೇಲ್ ತಿಳಿಸಿದರು.

ಸ್ಟಾರ್ ಆಟಗಾರರು

ಸ್ಟಾರ್ ಆಟಗಾರರು

ಪಂದ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಭಾರತವನ್ನು ಪ್ರತಿನಿಧಿಸಿರುವ ಎಂಟು ಆಟಗಾರರು ತಂಡದಲ್ಲಿರುವುದರಿಂದ ಕರ್ನಾಟಕವೇ ಗೆಲ್ಲಲಿದೆ ಎಂದು ಎಲ್ಲರೂ ಲೆಕ್ಕಚಾರ ಹಾಕುತ್ತಿದ್ದಾರೆ. ಅದಲ್ಲದೇ ರಾಜ್ಯ ತಂಡದ ಬಹುತೇಕ ಆಟಗಾರರು ಈ ಹಿಂದೆ ಶಿವಮೊಗ್ಗದ ವಾತಾವರಣದಲ್ಲಿ ಆಡಿರುವ ಅನುಭವ ಇರುವುದರಿಂದ ಎದುರಾಳಿ ತಂಡದ ಮೇಲೆ ಹಿಡಿದ ಸಾಧಿಸುವ ಸಾಧ್ಯತೆಯಿದೆ. ಅಲ್ಲದೆ ದ್ವಿತೀಯ ಪಂದ್ಯಕ್ಕೆ ಕೆ.ಎಲ್.ರಾಹುಲ್ ಸೇರಿಕೊಳ್ಳುತ್ತಿರುವುದು ತಂಡಕ್ಕೆ ಮತ್ತಷ್ಟು ಬಲಬಂದಂತಾಗಿದೆ.

ದೇಶದಲ್ಲೇ ಮೊದಲು

ದೇಶದಲ್ಲೇ ಮೊದಲು

ಕ್ರೀಡಾಂಗಣದ ಸುತ್ತಲೂ ಆಸನಗಳ ಬದಲಾಗಿ ದಿಬ್ಬದ ಆಕಾರದಲ್ಲಿ ವೇದಿಕೆ ಸಿದ್ದಪಡಸಿ ಹಸಿರು ಹುಲ್ಲು ಬೆಳೆಸಲಾಗಿದೆ. ಈ ನೆಲದಲ್ಲಿಯೇ ಪ್ರೇಕ್ಷಕರಿಗೆ ಕೂರುವ ವ್ಯವಸ್ಥೆ ಮಾಡಲಾಗಿದೆ. ಇದು ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಲ್ಲಿ ಈ ರೀತಿಯ ಕ್ರೀಡಾಂಗಣ ನಿರ್ಮಿಸಲಾಗಿದೆ.

ಮಲೆನಾಡಿಗರ ಕಾತರ

ಮಲೆನಾಡಿಗರ ಕಾತರ

ಕರ್ನಾಟಕ ಹಾಗೂ ಹೈದರಬಾದ್‌ ನಡುವಿನ ಪಂದ್ಯದ ಆರಂಭದ ದಿನವೇ ಈ ನೂತನ ಕ್ರೀಡಾಂಗಣದ ಉದ್ಘಾಟನೆ ನಡೆಯಲಿದ್ದು, ಪಂದ್ಯಕ್ಕೆ ಉಚಿತ ಪ್ರವೇಶವಕಾಶ ಕಲ್ಪಿಸಲಾಗಿದೆ. ಹಾಗಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೇ ಸ್ಟಾರ್‌ ಆಟಗಾರರು ಆಡುತ್ತಿರುವುದರಿಂದ ಸುತ್ತಮುತ್ತ ಜಿಲ್ಲೆಯ ಜನರು ಸೇರುವುದರಿಂದ ಕ್ರೀಡಾಂಗಣ ಭರ್ತಿಯಾಗುವ ಸಾಧ್ಯತೆಯಿದೆ.

ತಂಡಗಳು ಹೀಗಿವೆ

ತಂಡಗಳು ಹೀಗಿವೆ

ಕರ್ನಾಟಕ: ಆರ್.ವಿನಯ್ ಕುಮಾರ್ (ನಾಯಕ), ಅಭಿಷೇಕ್ ರೆಡ್ಡಿ, ಪವನ್ ದೇಶಪಾಂಡೆ, ಸಿ.ಎಂ.ಗೌತಮ್(ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಕೆ.ಗೌತಮ್, ಎಸ್.ಅರವಿಂದ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್, ಮಾಯಂಕ್ ಅಗರವಾಲ್, ಮೀರ್ ಕೌನೈನ್ ಅಬ್ಬಾಸ್, ಜೆ.ಸುಚಿತ್, ಡಿ.ನಿಶ್ಚಲ್, ಶರತ್ ಶ್ರೀನಿವಾಸ್, ರೋನಿತ್ ಮೋರೆ, ಕೆ.ಎಲ್.ರಾಹುಲ್, ಕರುಣ್ ನಾಯರ್.

ಹೈದರಾಬಾದ್: ಅಂಬಟಿ ರಾಯುಡು (ನಾಯಕ), ರೋಹಿತ್ ರಾಯುಡು, ಪಿ.ಸಾಯಿರಾಮ್, ಆಕಾಸ್ ಭಂಡಾರಿ, ಪ್ರಗ್ಯಾನ್ ಓಜಾ, ಆಶಿಶ್ ರೆಡ್ಡಿ , ಅಕ್ಷತ್ ರೆಡ್ಡಿ, ಎ.ಸುದೀಪ್, ಕೆ.ಸುಮಂತ್(ವಿಕೆಟ್ ಕೀಪರ್), ರವಿಕಿರಣ್, ಮೆಹ್ದಿ ಹಸನ್, ಅಮೋಲ್ ಶಿಂಧೆ, ಸಿ.ಮಿಲಿಂದ್, ತನ್ಮಯ್ ಅಗರ್ವಾಲ್, ಮೊಹಮ್ಮದ್ ಸಿರಾಜ್.

ವಿನಯ್ ಕುಮಾರ್, ಕರ್ನಾಟಕ ರಣಜಿ ತಂಡದ ನಾಯಕ

ವಿನಯ್ ಕುಮಾರ್, ಕರ್ನಾಟಕ ರಣಜಿ ತಂಡದ ನಾಯಕ

ಎದುರಾಳಿ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಹೈದ್ರಾಬಾದ್ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಅಂಬಟಿ ರಾಯುಡು, ಪ್ರಗ್ಯಾನ್ ಓಜಾ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವುದರಿಂದ ಹೈದರಬಾದ್ ತಂಡ ಮತ್ತಷ್ಟು ಬಲಿಷ್ಟವಾಗಿದೆ. ಅದೇ ರೀತಿ ಕರ್ನಾಟಕ ತಂಡ ಕೂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮವಾಗಿದೆ. ನೂತನ ಕೆಎಸ್‌ಸಿಎ ಕ್ರೀಡಾಂಗಣ ಬ್ಯಾಟಿಂಗ್‌ ಸಹಕಾರಿಯಾಗುವ ನಿರೀಕ್ಷೆ ಇದೆ.

ವಿನಯ್ ಕುಮಾರ್, ಕರ್ನಾಟಕ ರಣಜಿ ತಂಡದ ನಾಯಕ

Story first published: Monday, October 23, 2017, 20:49 [IST]
Other articles published on Oct 23, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ