
ಸ್ಮೃತಿ ಮಂಧಾನ ಫಾರ್ಮ್ ಮುಂದುವರೆಸಬೇಕು
ಹಿಂದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಫಾರ್ಮ್ ಕಂಡುಕೊಂಡಿದ್ದರೂ, ಶಫಾಲಿ ವರ್ಮಾ ಅವರು ಎರಡೂ ಪಂದ್ಯಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಕಾಣದ ಕಾರಣ ಈ ಪಂದ್ಯದಲ್ಲಿ ಅಬ್ಬರಿಸಬೇಕಿದೆ. ಸಬ್ಬಿನೇನಿ ಮೇಘನಾ, ಜೆಮಿಮಾ ರೋಡ್ರಿಗಸ್ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರಂತಹ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಎಲ್ಲಾ ಒತ್ತಡವು ಉತ್ತಮ ಅನುಭವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೇಲೆ ಬೀಳದಂತೆ ನೋಡಿಕೊಳ್ಳಬೇಕಾಗಿದೆ.
ಎರಡೂ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ಅದ್ಭುತವಾಗಿ ಆಡಿತ್ತು. ಮೊದಲ ಪಂದ್ಯದಲ್ಲಿ ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡಿದರೆ, ನಂತರದ ಪಂದ್ಯದಲ್ಲಿ ಶ್ರೀಲಂಕಾ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ ಬೌಲಿಂಗ್ ಪಡೆ ಪುಟಿದೆದ್ದಿತು.

ಪೂಜಾ ವಸ್ತ್ರಾಕರ್, ರಾಧಾ ಯಾದವ್ ಭಾರತದ ಬೌಲಿಂಗ್ ಅಸ್ತ್ರ
ದೀಪ್ತಿ ಶರ್ಮಾ, ಸಿಮ್ರಾನ್ ಬಹದ್ದೂರ್, ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ಅವರಂತಹ ಬೌಲರ್‌ಗಳು ಕ್ಲೀನ್ ಸ್ವೀಪ್ ಪಡೆಯುವ ಭಾರತದ ಕನಸಿಗೆ ಅತ್ಯಂತ ಪ್ರಮುಖ ಅಸ್ತ್ರವಾಗಿದ್ದಾರೆ. ಮತ್ತೊಂದೆಡೆ ಶ್ರೀಲಂಕಾ ತಂಡವು ಕಲಿತುಕೊಳ್ಳುವುದು ಬಹಳಷ್ಟು ಇದ್ದು, ಸರಣಿಯ ಎರಡೂ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಭಾರೀ ಆತಂಕಕಾರಿಯಾಗಿದೆ.
ಮೊದಲ ಟಿ20 ಪಂದ್ಯದ ಸಮಯದಲ್ಲಿ ಅದು ಸಂಪೂರ್ಣವಾಗಿ ವಿಫಲವಾಯಿತು. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಲೈನ್-ಅಪ್ 87 ರನ್ ಆರಂಭಿಕ ಸ್ಟ್ಯಾಂಡ್ ನಂತರ ಎಡವಿತು. ತ್ವರಿತವಾಗಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಲಂಕನ್ನರು ತಮ್ಮ ಬ್ಯಾಟಿಂಗ್‌ನಲ್ಲಿ ಉದ್ದೇಶ ಮತ್ತು ಹೆಚ್ಚಿನ ಕಾಳಜಿಯನ್ನು ಸಂಯೋಜಿಸುವುದು ಮುಖ್ಯವಾಗಿದೆ.

ಭಾರತ vs ಶ್ರೀಲಂಕಾ ಪಂದ್ಯದ ವಿವರ, ಫ್ಯಾಂಟಸಿ ಡ್ರೀಮ್ ಟೀಮ್
ಶ್ರೀಲಂಕಾ ಮಹಿಳೆಯರು vs ಭಾರತ ಮಹಿಳೆಯರು, 3ನೇ ಟಿ20
ಸ್ಥಳ: ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣ, ದಂಬುಲ್ಲಾ
ದಿನಾಂಕ ಮತ್ತು ಸಮಯ: ಜೂನ್ 28 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ
ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ವಿವರಗಳು: ಫ್ಯಾನ್‌ಕೋಡ್ ಮತ್ತು 27ಸ್ಪೋರ್ಟ್ಸ್
SL-W vs IND-W ಫ್ಯಾಂಟಸಿ ಡ್ರೀಮ್ ಟೀಮ್
ವಿಕೆಟ್ ಕೀಪರ್: ಅನುಷ್ಕಾ ಸಂಜೀವನಿ
ಬ್ಯಾಟರ್ಸ್: ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ವಿಶ್ಮಿ ರಾಜಪಕ್ಷ
ಆಲ್‌ರೌಂಡರ್‌ಗಳು: ಹರ್ಮನ್‌ಪ್ರೀತ್ ಕೌರ್, ಕವಿಶಾ ದಿಲ್ಹಾರಿ, ಚಾಮರಿ ಅಥಾಪತ್ತು, ಪೂಜಾ ವಸ್ತ್ರಾಕರ್
ಬೌಲರ್‌ಗಳು: ರಾಧಾ ಯಾದವ್, ಇನೋಕಾ ರಣವೀರ, ರಾಜೇಶ್ವರಿ ಗಾಯಕ್ವಾಡ್
ನಾಯಕಿ: ಹರ್ಮನ್‌ಪ್ರೀತ್ ಕೌರ್
ಉಪನಾಯಕಿ: ಇನೋಕಾ ರಣವೀರ

ಭಾರತ vs ಶ್ರೀಲಂಕಾ ತಂಡಗಳ ಸಂಭಾವ್ಯ 11ರ ಬಳಗ
ಶ್ರೀಲಂಕಾ ಮಹಿಳೆಯರು: ಚಾಮರಿ ಅಥಾಪತ್ತು (ನಾಯಕಿ), ವಿಶ್ಮಿ ಗುಣರತ್ನೆ, ಹರ್ಷಿತಾ ಮಾದವಿ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಇನೋಕಾ ರಣವೀರ, ಹಾಸಿನಿ ಪೆರೇರಾ, ಓಷಾದಿ ರಣಸಿಂಗ್, ಸುಗಂದಿಕಾ ಕುಮಾರಿ, ಉದೇಶಿಕಾ ಪ್ರಬೋಧನಿ
ಭಾರತ ಮಹಿಳೆಯರು: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್


Click it and Unblock the Notifications












