SMAT 2021 ಫೈನಲ್: ತಮಿಳುನಾಡು ಮುಡಿಗೆ ಟ್ರೋಫಿ, ಕರ್ನಾಟಕಕ್ಕೆ ವಿರೋಚಿತ ಸೋಲು

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲುವನ್ನು ದಕ್ಕಿಸಿಕೊಂಡ ತಮಿಳುನಾಡು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಮೂರನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಕ್ಕಿದೆ. ತಮಿಳುನಾಡು ಪರ ಹೀರೋ ಆಗಿ ಮಿಂಚಿದ ಶಾರೂಖ್ ಖಾನ್ ತಮಿಳುನಾಡಿಗೆ ಗೆಲುವಿನ ಮಾಲೆ ತೊಡಿಸಿದ್ದಾರೆ.

ಕರ್ನಾಟಕ ನೀಡಿದ 152 ರನ್‌ಗಳ ಗುರಿ ಬೆನ್ನತ್ತಿದ ತಮಿಳುನಾಡು ಉತ್ತಮ ಆರಂಭ ಪಡೆಯುತ್ತಿದೆ ಎನ್ನುವಷ್ಟರಲ್ಲಿ ಮೊದಲ ವಿಕೆಟ್ ಪಡೆದುಕೊಂಡಿತು. ವಿದ್ಯಾಧರ ಪಾಟೀಲ ಚುರುಕು ಫೀಲ್ಡಿಂಗ್‌ನಿಂದಾಗಿ 12 ಎಸೆತಗಳಲ್ಲಿ 23 ರನ್ ಕಲೆಹಾಕಿದ್ದ ಹರಿ ನಿಶಾಂತ್ ರನೌಟ್‌ಗೆ ಬಲಿಯಾದ್ರು.

ಸಾಯಿ ಸುದರ್ಶನ್ ವಿಕೆಟ್ ಎಗರಿಸಿದ ಕರುಣ್ ನಾಯರ್

ಸಾಯಿ ಸುದರ್ಶನ್ ವಿಕೆಟ್ ಎಗರಿಸಿದ ಕರುಣ್ ನಾಯರ್

ಎರಡನೇ ವಿಕೆಟ್‌ಗೆ ಓಪನರ್ ಎನ್. ಜಗದೀಶನ್ ಮತ್ತು ಸಾಯಿ ಸುದರ್ಶನ್ ಸೆಟಲ್ ಆಗುವಷ್ಟರಲ್ಲಿ, ಕರ್ನಾಟಕ ಪರ ಪಾರ್ಟ್ ಟೈಮ್ ಸ್ಪಿನ್ನರ್ ಮತ್ತೊಮ್ಮೆ ಎದುರಾಳಿಗೆ ಆಘಾತ ನೀಡಿದರು. ಕರುಣ್ ನಾಯಕ ಎಲ್‌ಬಿಡಬ್ಲ್ಯೂ ಬಲೆಗೆ ಸಾಯಿ ಸುದರ್ಶನ್ ಬಿದ್ದರು. ವಿದರ್ಭ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಕರುಣ್ ವಿಕೆಟ್ ಪಡೆದ ಮಿಂಚಿದ್ರು.

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದ ಕರಿಯಪ್ಪ

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದ ಕರಿಯಪ್ಪ

ಕರ್ನಾಟಕ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತುವಲ್ಲಿ ತಮಿಳುನಾಡು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಎಡವಿದ್ರು. ನಾಯಕ ವಿಜಯ್ ಶಂಕರ್ ಕರಿಯಪ್ಪ ಸ್ಪಿನ್ ದಾಳಿಯಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರೆ, ನಂತರದ ಎಸೆತದಲ್ಲೇ ಉತ್ತಮವಾಗಿ ಆಡಿದ್ದ ಎನ್. ಜಗದೀಶನ್ 41ರನ್‌ಗಳಿಸಿದ್ದಾಗಿ ಕ್ಯಾಚಿತ್ತು ಔಟಾದ್ರು. ಸಂಜಯ್ ಯಾದವ್ ಕೂಡ ತಂಡಕ್ಕೆ ಆಧಾರವಾಗುವಲ್ಲಿ ವಿಫಲಗೊಂಡ್ರೆ, ಮೊಹಮ್ಮದ್ 5ರನ್‌ಗೆ ಔಟಾದ್ರು.

ತಮಿಳುನಾಡು ಪರ ಹೀರೋ ಆಗಿ ಮಿಂಚಿದ ಶಾರೂಕ್ ಖಾನ್

ತಮಿಳುನಾಡು ಪರ ಹೀರೋ ಆಗಿ ಮಿಂಚಿದ ಶಾರೂಕ್ ಖಾನ್

ತಂಡದ ಏಕೈಕ ಭರವಸೆಯಾಗಿದ್ದ ಶಾರೂಕ್ ಖಾನ್‌ ಅಬ್ಬರದ ಆಟಕ್ಕೆ ಕರ್ನಾಟಕ ಕೊನೆಯ ಎಸೆತದಲ್ಲಿ ವಿರೋಚಿತ ಸೋಲು ಅನುಭವಿಸಿದೆ. 15 ಎಸೆತಗಳಲ್ಲಿ 33 ರನ್ ಸಿಡಿಸಿದ ಶಾರೂಕ್ ಖಾನ್ ಕೊನೆಯ ಎಸೆತವನ್ನ ಸಿಕ್ಸರ್‌ಗೆ ಅಟ್ಟಯವ ಮೂಲಕ ತಂಡಕ್ಕೆ ಗೆಲುವನ್ನ ತಂದುಕೊಟ್ರು. ಅಂತಿಮ ಓವರ್‌ನಲ್ಲಿ 16 ರನ್‌ ತಲುಪುವಲ್ಲಿ ತಮಿಳುನಾಡು ಯಶಸ್ವಿಯಾಯಿತು. ಅದ್ರಲ್ಲೂ ಕೊನೆಯ ಎಸೆತದಲ್ಲಿ 5ರನ್‌ಗಳ ಒತ್ತಡವನ್ನ ಮೆಟ್ಟಿ ನಿಂತು ಶಾರೂಕ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ರು. ಜೊತೆಗೆ ತಮಿಳುನಾಡು ಮೂರನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನ ಮುಡಿಗೇರಿಸಿಕೊಂಡಿದೆ.

ತಮಿಳುನಾಡು ಅಬ್ಬರದ ಬ್ಯಾಟಿಂಗ್ ಮಾಡಿದ ಶಾರೂಖ್ ಖಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ್ರು.

Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!

ಆರಂಭದಲ್ಲೇ ಎಡವಿದ ಕರ್ನಾಟಕ

ಆರಂಭದಲ್ಲೇ ಎಡವಿದ ಕರ್ನಾಟಕ

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಕರ್ನಾಟಕ, ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಓಪನರ್ ರೋಹನ್ ಕದಂ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿದ್ರು. ನಂತರ ಮನೀಷ್ ಪಾಂಡೆ ಜೊತೆಗೂಡಿ ಕರುಣ್ ನಾಯರ್ ಉತ್ತಮ ಇನ್ನಿಂಗ್ಸ್‌ ಕಟ್ಟುವ ಭರವಸೆ ಮೂಡಿಸಿದ್ರೆ ಹೊರತು ಕಾರ್ಯರೂಪಕ್ಕೆ ತರುವಲ್ಲಿ ವಿಫಲಗೊಂಡ್ರು.

ಉತ್ತಮವಾಗೇ ಆಡ್ತಿದ್ದ ಕರುಣ್ ನಾಯರ್ 18 ರನ್‌ಗಳಿಸಿದ್ದಾಗ ಸ್ವೀಪ್ ಮಾಡಲು ಹೋಗಿ ಸಂಜಯ್ ಯಾದವ್‌ ಸ್ಪಿನ್ ಮೋಡಿಗೆ ಬಲಿಯಾದ್ರು. ಇದ್ರ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಂದು ಆಘಾತ ಎದುರಾಯಿತು. ನಂತರದ ಎಸೆತದಲ್ಲೇ ಸಾಯಿ ಕಿಶೋರ್ ಸ್ಪಿನ್ ತಂತ್ರ ಅರಿಯದೇ ಮನೀಷ್ ಪಾಂಡೆ ಕೂಡ 13ರನ್‌ಗೆ ಔಟಾದ್ರು.

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
ಅಭಿನವ್ ಮನೋಹರ್, ಪ್ರವಿಣ್ ದುಬೆ ಆಧಾರ

ಅಭಿನವ್ ಮನೋಹರ್, ಪ್ರವಿಣ್ ದುಬೆ ಆಧಾರ

ಮೊದಲು ಮೂರು ವಿಕೆಟ್ ಪತನದ ಬಳಿಕ ಶರತ್ ಬಿ.ಆರ್ 16ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಯುವ ಸ್ಫೋಟಕ ಆಟಗಾರ ಅಭಿನವ್ ಮನೋಹರ್, ಪ್ರವೀಣ್ ದುಬೆ ಕರ್ನಾಟಕವು ಕೊಂಚ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದ್ರು. ಅಭಿನವ್ 37 ಎಸೆತಗಳಲ್ಲಿ 46ರನ್‌ಗಳಿಸಿದ್ದು, ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ದಾಖಲಿಸಿದ್ದಾರೆ. ಪ್ರವೀಣ್ ದುಬೆ 25 ಎಸೆತಗಳಲ್ಲಿ 33ರನ್ ಸಿಡಿಸಿದ್ರು. ಕೊನೆಯಲ್ಲಿ ಜೆ. ಸುಚಿತ್ ಏಳು ಎಸೆತಗಳಲ್ಲಿ 18 ರನ್‌ಗಳ ಕೊಡುಗೆ ನೀಡಿದ್ರು.

ಇದರ ಪರಿಣಾಮ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154ರನ್‌ಗಳಿಸಲು ಶಕ್ತವಾಯಿತು. ತಮಿಳುನಾಡು ಪರ ಸಾಯಿ ಕಿಶೋರ್ 4 ಓವರ್‌ಗಳಿಗೆ ಕೇವಲ 12 ರನ್‌ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ವರಿಯರ್, ಸಂಜಯ್ ಯಾದವ್, ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.

For Quick Alerts
ALLOW NOTIFICATIONS
For Daily Alerts
Story first published: Monday, November 22, 2021, 15:46 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X