SMAT 2021: ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ವಿದರ್ಭ ಸವಾಲು: ಫೈನಲ್ ಪ್ರವೇಶಿಸುತ್ತಾ ಮನೀಶ್ ಪಾಂಡೆ ಪಡೆ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಈ ಬಾರಿಯ ಆವೃತ್ತಿಯಲ್ಲಿ ಕರ್ನಾಟಕ ಅದ್ಭುತ ಪ್ರದರ್ಶನ ನೀಡುತ್ತಾ ಈಗ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಬಂಗಾಳ ತಂಡವನ್ನು ರೋಚಕ ಸೆಣೆಸಾಟದಲ್ಲಿ ಸೂಪರ್ ಓವರ್‌ನಲ್ಲಿ ಮಣಿಸಿರುವ ಕರ್ನಾಟಕ ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈಗ ಸೆಮಿ ಫೈನಲ್‌ನಲ್ಲಿ ಮತ್ತೊಂದು ಕಠಿಣ ಸವಾಲು ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡಕ್ಕೆ ಎದುರಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಈವರೆಗೂ ಅಜೇಯವಾಗಿ ಉಳಿದಿರುವ ವಿದರ್ಭ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಸವಾಲೊಡ್ಡಲಿದೆ.

ಕರ್ನಾಟಕ ಹಾಗೂ ವಿದರ್ಭ ನಡುವಿನ ಸೆಮಿ ಫೈನಲ್ ಪಂದ್ಯ ಶನಿವಾರ ನಡೆಯಲಿದೆ. ಅಕ್ಷಯ್ ವಾಡ್ಕರ್ ನೇತೃತ್ವದ ವಿದರ್ಭ ತಂಡ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನಿಡುತ್ತಾ ಬಂದಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ವಿದರ್ಭ ತಂಡ ರಾಜಸ್ಥಾನ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ರಾಜಸ್ಥಾನ್ ವಿರುದ್ಧ ಭರ್ಜರಿ 9 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಎದುರಾಳಿ ಕರ್ನಾಟಕಕ್ಕೆ ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ವಿದರ್ಭ ತಂಡ ರವಾನಿಸಿದೆ.

ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್

ವಿದರ್ಭ ತಂಡದ ಪರವಾಗಿ ಅಥರ್ವ ತೈದೆ, ಗಣೇಶ್ ಸತೀಶ್ ಹಾಗೂ ನಾಯಕ ಅಕ್ಷಯ್ ವಾಡ್ಕರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಫಾರ್ಮ್‌ಅನ್ನು ಸೆಮಿಫೈನಲ್ ಪಮದ್ಯದಲ್ಲಿಯೂ ಮುಂದುವರಿಸಲು ಈ ಆಟಗಾರರು ಶಕ್ತವಾದರೆ ಕರ್ನಾಟಕಕ್ಕೆ ಹಿನ್ನಡೆಯುವುದು ನಿಶ್ಚಿತ. ಈ ಆಟಗಾರರನ್ನು ಕರ್ನಾಟಕ ಬೌಲಿಂಗ್ ಪಡೆ ಮುಖ್ಯ ಗುರಿಯಾಗಿರಿಸಿಕೊಳ್ಳುವ ಅಗತ್ಯವಿದೆ.

ಇನ್ನು ಕರ್ನಾಟಕ ತಂಡದ ಪರವಾಗಿ ಸೆಮಿಫೈನಲ್‌ನಲ್ಲಿ ವೇಗಿಗಳಾದ ವಿದ್ಯಾಧರ್ ಹಾಗೂ ವೈಶಾಕ್ ನೀಡಿದ ಪ್ರದರ್ಶನ ನಾಯಕ ಮನೀಶ್ ಪಾಂಡೆ ಚಿಂತೆ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ. ಈ ಇಬ್ಬರು ಕೂಡ ರನ್ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದರು. ವಿದರ್ಭ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಕೂಡ ಫಾರ್ಮ್‌ಗೆ ಮರಳಬೇಕಿದೆ. ಉಳಿದಂತೆ ದರ್ಶನ್ ಎಂಬಿ, ಸುಚಿತ್ ಹಾಗೂ ಕೆಸಿ ಕಾರಿಯಪ್ಪ ಪ್ರದರ್ಶನ ಅದ್ಭುತವಾಗಿತ್ತು.

ವಿದರ್ಭ ತಂಡದ ಯಶಸ್ಸಿನಲ್ಲಿ ಬೌಲಿಂಗ್ ವಿಭಾಗದ ಪ್ರದರ್ಶನ ಗಮನಾರ್ಹವಾಗಿದೆ. ಅದರಲ್ಲೂ ಅದರಲ್ಲೂ ಅಕ್ಷಯ್ ಕಾರ್ನೆವಾರ್ ಹಾಗೂ ಅಕ್ಷಯ್ ವಾಖರ್ ಅವರ ಬೌಲಿಂಗ್ ದಾಳಿಯ ವಿರುದ್ಧ ಕರ್ನಾಟಕ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ. ಈ ಇಬ್ಬರು ಕೂಡ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಅಕ್ಷಯ್ ಕಾರ್ನೇವಾರ್ ಬೌಲಿಂಗ್ ಪ್ರದರ್ಶನ ಇಡೀ ಟೂರ್ನಿಯಲ್ಲಿ ಗಮನಸೆಳೆದಿದೆ. ಈ ಇಬ್ಬರು ಬೌಲರ್‌ಗಳನ್ನು ಕರ್ನಾಟಕ ತಂಡ ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ನಾಳಿನ ಫಲಿತಾಂಶ ಬಹುತೇಕ ನಿರ್ದಾರವಾಗಲಿದೆ ಎಂದರೆ ತಪ್ಪಿಲ್ಲ.

ಅಬುಧಾಬಿ ಟಿ10 ಲೀಗ್ 2021: ವೇಳಾಪಟ್ಟಿ, ತಂಡಗಳು, ಸ್ಟಾರ್‌ ಪ್ಲೇಯರ್ಸ್ಅಬುಧಾಬಿ ಟಿ10 ಲೀಗ್ 2021: ವೇಳಾಪಟ್ಟಿ, ತಂಡಗಳು, ಸ್ಟಾರ್‌ ಪ್ಲೇಯರ್ಸ್

ಇನ್ನು ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಫಾರ್ಮ್ ಕಂಡುಕೊಂಡಿರುವುದು ಕರ್ನಾಟಕಕ್ಕೆ ಸಮಾಧಾನಕರ ಸಂಗತಿ. ಅನುಭವಿ ಕರುಣ್ ನಾಯರ್ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ತಂಡದ ಸವಾಲಿನ ಮೊತ್ತಕ್ಕೆ ಕಾರಣವಾಗಿದ್ದರು. ಇನ್ನು ಆರಂಭಿಕರಾದ ರೋಹನ್ ಕದಂ ಹಾಗೂ ಬಿಆರ್ ಶರತ್ ಸೆಮಿಫೈನಲ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಿದೆ. ಅಭಿನವ್ ಮನೋಹರ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು ಅನಿರುದ್ಧ್ ಜೋಶಿ ಕೂಡ ಸಂದರ್ಭಕ್ಕೆ ತಕ್ಕ ಪ್ರದರ್ಶನ ನೀಡುವ ಅಗತ್ಯವಿದೆ.

ವಿದರ್ಭ ಹಾಗೂ ಕರ್ನಾಟಕ ನಡುವಿನ ಪಂದ್ಯ ಶನಿವಾರ ಮಧ್ಯಾಹ್ನ 1:30ಕ್ಕೆ ನಡೆಯಲಿದ್ದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತಮಿಳು ನಾಡು ಹಾಗೂ ಹೈದರಾಬಾದ್ ತಂಡಗಳು ಸೆಣೆಸಾಡಲಿದ್ದು ಈ ಪಂದ್ಯ ಬೆಳಿಗ್ಗೆ 8:30ಕ್ಕೆ ಆರಂಭವಾಗಲಿದೆ.

ಕೊಹ್ಲಿ ನನಗಾಗಿ 3ನೇ ಕ್ರಮಾಂಕ ಬಿಟ್ಟರು; ಕಿವೀಸ್ ವಿರುದ್ಧದ ಉತ್ತಮ ಪ್ರದರ್ಶನದ ನಂತರ ಯಾದವ್ ಪ್ರತಿಕ್ರಿಯೆಕೊಹ್ಲಿ ನನಗಾಗಿ 3ನೇ ಕ್ರಮಾಂಕ ಬಿಟ್ಟರು; ಕಿವೀಸ್ ವಿರುದ್ಧದ ಉತ್ತಮ ಪ್ರದರ್ಶನದ ನಂತರ ಯಾದವ್ ಪ್ರತಿಕ್ರಿಯೆ

ಕರ್ನಾಟಕ ಸ್ಕ್ವಾಡ್: ಮನೀಶ್ ಪಾಂಡೆ (ನಾಯಕ), ಕೆಸಿ ಕರಿಯಪ್ಪ, ದರ್ಶನ್ ಎಂಬಿ, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಪ್ರತೀಕ್ ಜೈನ್, ಅನಿರುದ್ಧ ಜೋಶಿ, ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ, ಶರತ್ ಬಿಆರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಜಗದೇಶ ಸುಚಿತ್, ಜಗದೇಶ್ , ನಿಹಾಲ್ ಉಳ್ಳಾಲ್, ವಿಜಯ್ ಕುಮಾರ್ ವೈಶಾಕ್, ರಿತೇಶ್ ಭಟ್ಕಳ್, ವಿ ಕೌಶಿಕ್, ಆದಿತ್ಯ ಸೋಮಣ್ಣ, ರವಿಕುಮಾರ್ ಸಮರ್ಥ್

ಸಚಿನ್ ಹಾಗು ದ್ರಾವಿಡ್ ಹೆಸರಿನಿಟ್ಟುಕೊಂಡ ನ್ಯೂಜಿಲ್ಯಾಂಡ್ ಆಟಗಾರ ರಚಿನ್ | Oneindia Kannada

ವಿದರ್ಭ ಸ್ಕ್ವಾಡ್: ಅಕ್ಷಯ್ ವಾಡ್ಕರ್ (ನಾಯಕ), ಸಿದ್ಧೇಶ್ ವಾಥ್, ಶುಭಂ ದುಬೆ, ಹರ್ಷ್ ದುಬೆ, ಗಣೇಶ್ ಸತೀಶ್, ಅಕ್ಷಯ್ ಕರ್ನೇವರ್, ದರ್ಶನ್ ನಲ್ಕಂಡೆ, ಸಿದ್ಧೇಶ್ ನೇರಲ್, ಯಶ್ ರಾಥೋಡ್, ಸಂಜಯ್ ರಘುನಾಥ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಥರ್ವ ತೈದೆ, ಆದಿತ್ಯ ಠಾಕರೆ, ಅಕ್ಷಯ್ ವಾಖರೆ, ಅಪೂರ್ವ್ ವಾಂಖಡೆ, ಉಮೇಶ್ ಯಾದವ್, ಯಶ್ ಠಾಕೂರ್, ಪಿ ರೇಖಾಡೆ, ಗಣೇಶ್ ಭೋಸ್ಲೆ, ಸೂರಜ್ ರೈ, ಲಲಿತ್ ಎಂ ಯಾದವ್

For Quick Alerts
ALLOW NOTIFICATIONS
For Daily Alerts
Story first published: Friday, November 19, 2021, 14:13 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X