ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ಯಾಟ್ ಕಮಿನ್ಸ್ ಅತ್ಯಧಿಕ ಬೆಲೆಗೆ ಮಾರಾಟವಾಗಿದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ

ಪ್ಯಾಟ್ ಕಮಿನ್ಸ್ ಗೆ ಅಷ್ಟೊಂದು ಬೇಡಿಕೆ ಬಂದಿದ್ದು ಯಾಕೆ ಗೊತ್ತಾ..? | ONEINDIA KANNADA
Sourav Ganguly reveals reason behind Pat Cummins going for 15.5 cr in auction

ಕೋಲ್ಕತ್ತಾ, ಡಿಸೆಂಬರ್ 20: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು, ಐಪಿಎಲ್ 2020ರ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್‌ ಕಮಿನ್ಸ್ ಯಾಕೆ ದಾಖಲೆ ಮೊತ್ತಕ್ಕೆ ಖರೀದಿಸಲ್ಪಟ್ಟಿದ್ದಾರೆ ಎಂಬುದಕ್ಕೆ ಕಾರಣ ಹೇಳಿದ್ದಾರೆ.

IPL 2020: ಹರಾಜಿನ ಬಳಿಕ ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿIPL 2020: ಹರಾಜಿನ ಬಳಿಕ ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

ಗುರುವಾರ (ಡಿಸೆಂಬರ್ 19) ಕೋಲ್ಕತ್ತಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪ್ಯಾಟ್ ಕಮಿನ್ಸ್ 15.50 ಕೋ.ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದರು. ಇದು ಐಪಿಎಲ್ ಇತಿಹಾಸದಲ್ಲೇ ಆಟಗಾರ ಹರಾಜಾಗಿರುವ 2ನೇ ದೊಡ್ಡ ಮೊತ್ತ. ಇದಕ್ಕೂ ಮುನ್ನ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಫ್ರಾಂಚೈಸಿ 16 ಕೋಟಿ ರೂ.ಗೆ ಖರೀದಿಸಿ ದಾಖಲೆ ಬರೆದಿತ್ತು.

ಐಪಿಎಲ್ ಸುತ್ತಿಕೊಂಡ 6 ಪ್ರಮುಖ ವಿವಾದಗಳು, ನಿಷೇಧಗಳುಐಪಿಎಲ್ ಸುತ್ತಿಕೊಂಡ 6 ಪ್ರಮುಖ ವಿವಾದಗಳು, ನಿಷೇಧಗಳು

ಹರಾಜಿನ ಬಳಿಕ ಮಾತನಾಡಿದ ಗಂಗೂಲಿ, 'ಪ್ಯಾಟ್‌ ಕಮಿನ್ಸ್ ಬೆಲೆ ಇನ್ನೂ ಹೆಚ್ಚಿನದು. ಅವರಿಗೆ ಇನ್ನೂ ಹೆಚ್ಚಿನ ಬೇಡಿಕೆಯಿದೆ. ಮುಖ್ಯವಾಗಿ ಇಂಥ ಸಣ್ಣ ಹರಾಜುಗಳಲ್ಲಿ ಕಮಿನ್ಸ್‌ಗೆ ಹೆಚ್ಚಿನ ಬೇಡಿಕೆ ಬಂದರೆ ಅದರಲ್ಲಿ ಅಚ್ಚರಿಯಿಲ್ಲ. ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್‌ ಕೂಡ ಈ ಸಣ್ಣ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಅದಕ್ಕೇ ಅವರು ಆವತ್ತು 14 ಕೋ.ರೂ. ದೊಡ್ಡ ಮೊತ್ತಕ್ಕೆ ಖರೀದಿಸಲ್ಪಟ್ಟಿದ್ದರು,' ಎಂದಿದ್ದಾರೆ.

ಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿ

ವಿದೇಶಿ ಆಟಗಾರರಲ್ಲಿ ಬೆನ್ ಸ್ಟೋಕ್ಸ್ ಹೆಚ್ಚಿನ ಬೆಲೆಗೆ ಖರೀದಿಸಲ್ಪಟ್ಟು ದಾಖಲೆ ನಿರ್ಮಿಸಿದ್ದರು. 2017ರ ಹರಾಜಿನಲ್ಲಿ ಸ್ಟೋಕ್ಸ್ ಅವರನ್ನು ರೈಸಿಂಗ್ ಪೂಣೆ ವಾರಿಯರ್ಸ್ 14.5ಗೆ ಖರೀದಿಸಿತ್ತು. ವಿದೇಶಿ ಆಟಗಾರರಲ್ಲಿನ ಹರಾಜಿನಲ್ಲಿ ಕಮಿನ್ಸ್, ಸ್ಟೋಕ್ಸ್‌ ಅವರನ್ನು ಈಗ ಮೀರಿಸಿದಂತಾಗಿದೆ. ಆದರೆ ಯುವರಾಜ್‌ ಸಿಂಗ್ ಅವರ 16 ಕೋ.ರೂ. ದಾಖಲೆ ಈಗಲೂ ಮುರಿಯದೆ ಉಳಿದೆ.

Story first published: Saturday, December 21, 2019, 14:32 [IST]
Other articles published on Dec 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X