ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಯೀನ್ ಅಬ್ಬರದಾಟ, ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2 ರನ್‌ ಜಯ

South Africa vs England, 2nd T20I: England won by 2 runs

ಡರ್ಬನ್, ಫೆಬ್ರವರಿ 15: ಡರ್ಬನ್‌ನ ಕಿಂಗ್ಸ್‌ಮೀಡ್‌ ಸ್ಟೇಡಿಯಂನಲ್ಲಿ ಶುಕ್ರವಾರ (ಫೆಬ್ರವರಿ 14) ನಡೆದ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ದ್ವಿತೀಯ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 2 ರನ್ ರೋಚಕ ಜಯ ಗಳಿಸಿದೆ. ಮೊಯೀಸ್ ಅಲಿ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಇಯಾನ್ ಮಾರ್ಗನ್ ಪಡೆ ಪಂದ್ಯ ಗೆದ್ದು ಮೂರು ಪಂದ್ಯಗಳ ಸರಣಿಯನ್ನು 1-1ರಿಂದ ಜೀವಂತವಾಗಿರಿಸಿಕೊಂಡಿದೆ.

ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

ಇತ್ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 1 ರನ್ ರೋಚಕ ಜಯ ಗಳಿಸಿತ್ತು. ಆ ಪಂದ್ಯದಲ್ಲಿ ಆಫ್ರಿಕಾ ಬೌಲರ್ ಲುಂಗಿ ಎನ್‌ ಗಿಡಿ ಹೀರೋ ಆಗಿ ಮಿನುಗಿದ್ದರು. ದ್ವಿತೀಯ ಪಂದ್ಯದಲ್ಲೂ ಲುಂಗಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರಾದರೂ, ಮೊಯೀನ್ ಅಲಿ ಬ್ಯಾಟಿಂಗ್ ಇಂಗ್ಲೆಂಡ್‌ಗೆ ಗೆಲುವು ತಂದು ಕೊಟ್ಟಿದೆ.

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ನಿಂದ ಜೇಸನ್ ರಾಯ್ 40, ಜಾನಿ ಬೈರ್‌ಸ್ಟೋವ್ 35, ನಾಯಕ ಇಯಾನ್ ಮಾರ್ಗನ್ 27, ಬೆನ್ ಸ್ಟೋಕ್ಸ್ 47, ಮೊಯೀನ್ ಅಲಿ 39 (11 ಎಸೆತ) ರನ್‌ ಕೊಡುಗೆಯಿತ್ತರು. ಇಂಗ್ಲೆಂಡ್ 20 ಓವರ್‌ಗೆ 7 ವಿಕೆಟ್ ಕಳೆದು 204 ರನ್ ಮಾಡಿತು.

ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ, ತೆಂಬ ಬವುಮಾ 31, ಕ್ವಿಂಟನ್ ಡಿ ಕಾಕ್ 65, ಡೇವಿಡ್ ಮಿಲ್ಲರ್ 21, ರಾಸ್ಸಿ ವ್ಯಾನ್ ಡೆರ್ ಡುಸೆನ್ 43, ಜೆಜೆ ಸ್ಮಟ್ಸ್ 13, ಡ್ವೇನ್ ಪ್ರಿಟೋರಿಯನ್ 25 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 202 ರನ್ ಪೇರಿಸಿ ಶರಣಾಯಿತು.

ಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿ

ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ 3, ಆಂಡಿಲೆ ಫೆಹ್ಲುಕ್ವಾಯೊ 2, ತಬ್ರೇಜ್ ಶಮ್ಸಿ, ಡ್ವೈನ್ ಪ್ರಿಟೋರಿಯಸ್ ತಲಾ 1 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಟಾಮ್ ಕರನ್ 2, ಕ್ರಿಸ್ ಜೋರ್ಡನ್ 2, ಮಾರ್ಕ್‌ವುಡ್ 2, ಬೆನ್ ಸ್ಟೋಕ್ಸ್‌ 1 ವಿಕೆಟ್‌ ಉರುಳಿಸಿದರು. ಮೊಯೀನ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Saturday, February 15, 2020, 11:00 [IST]
Other articles published on Feb 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X