ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SRH ಇಲ್ಲದಿದ್ದರೆ ವಾರ್ನರ್ ಕ್ರಿಕೆಟ್‍ನಲ್ಲಿಯೇ ಇರುತ್ತಿರಲಿಲ್ಲ; SRH ಮಾಡಿದ್ದ ಸಹಾಯ ಬಿಚ್ಚಿಟ್ಟ ಪಠಾಣ್

SRH supported David Warner when his own country prohibited him says Irfan Pathan

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆದಾಗಲೂ ಮತ್ತು ಯಶಸ್ವಿಯಾಗಿ ಮುಗಿದ ನಂತರವೂ ಕೂಡ ಸಾಕಷ್ಟು ವಿವಾದಗಳಿಗೆ ಸಾಕ್ಷಿಯಾಯಿತು ಮತ್ತು ಸಾಕ್ಷಿಯಾಗುತ್ತಿದೆ. ಮೊದಲಿಗೆ ಭಾರತ ನೆಲದಲ್ಲಿ ಈ ಬಾರಿ ಆರಂಭವಾದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟಿತು. ಹೀಗೆ ಮೊದಲಿಗೆ ಐಪಿಎಲ್ ಬಯೋ ಬಬಲ್ ಒಳಗಡೆ ಕೊರೋನಾವೈರಸ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಕೊರೊನ ವೈರಸ್ ಸೋಂಕು ಕಾಣಿಸಿಕೊಂಡದ್ದು ವಿವಾದವನ್ನು ಹುಟ್ಟುಹಾಕಿತ್ತು.

132 ವರ್ಷಗಳ ಬಳಿಕ ಟೆಸ್ಟ್‌ ಸರಣಿಯಲ್ಲಿ ನಾಲ್ವರು ನಾಯಕರು!132 ವರ್ಷಗಳ ಬಳಿಕ ಟೆಸ್ಟ್‌ ಸರಣಿಯಲ್ಲಿ ನಾಲ್ವರು ನಾಯಕರು!

ಇದಾದ ಬಳಿಕ ಯುಎಇಗೆ ಈ ಬಾರಿಯ ಐಪಿಎಲ್ ಟೂರ್ನಿ ಸ್ಥಳಾಂತರಿಸಲ್ಪಟ್ಟ ನಂತರ ಕೂಡ ಕೆಲ ವಿದೇಶಿ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹಿಂದೆ ಸರಿಯುವುದರ ಮೂಲಕ ಮತ್ತೊಂದು ವಿವಾದಕ್ಕೆ ಕಾರಣರಾದರು. ನಂತರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ವಿವಾದವೆಂದರೆ ಅದು ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಡುವೆ ಉಂಟಾಗಿದ್ದ ಮನಸ್ತಾಪ.

ವೆಸ್ಟ್ ಇಂಡೀಸ್ ವಿರುದ್ಧದ ODI, T20 ಸರಣಿಗೆ ತಂಡ ಪ್ರಕಟಿಸಿದ ಪಾಕಿಸ್ತಾನವೆಸ್ಟ್ ಇಂಡೀಸ್ ವಿರುದ್ಧದ ODI, T20 ಸರಣಿಗೆ ತಂಡ ಪ್ರಕಟಿಸಿದ ಪಾಕಿಸ್ತಾನ

ಹೌದು, ಕಳೆದ ಆವೃತ್ತಿಗಳಲ್ಲಿ ಅನ್ಯೋನ್ಯತೆಯಿಂದ ಇದ್ದ ಡೇವಿಡ್ ವಾರ್ನರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಡುವೆ ಈ ಬಾರಿ ದೊಡ್ಡ ಮಟ್ಟದಲ್ಲಿ ವಿವಾದವನ್ನು ಎಬ್ಬಿಸುವ ಮಟ್ಟಿಗೆ ಮನಸ್ತಾಪ ಹುಟ್ಟಿಕೊಂಡಿತ್ತು. ಮೊದಲಿಗೆ ಟೂರ್ನಿ ಮಧ್ಯದಲ್ಲಿಯೇ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೇನ್ ವಿಲಿಯಮ್ಸನ್ ಅವರನ್ನು ನೂತನ ನಾಯಕನಾಗಿ ನೇಮಿಸಿತು. ತಂಡ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸಾಲು ಸಾಲು ಸೋಲು ಕಂಡಿತು ಎಂಬ ಕಾರಣದಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಈ ಕುರಿತಾಗಿ ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ನಂತರದ ದಿನಗಳಲ್ಲಿ ಡೇವಿಡ್ ವಾರ್ನರ್ ಅವರನ್ನು ಆಡುವ ಬಳಗದಿಂದಲೇ ಕೈಬಿಟ್ಟ ಸನ್ ರೈಸರ್ ಹೈದರಾಬಾದ್ ಫ್ರಾಂಚೈಸಿ ನಂತರ ನಡೆದ ಪಂದ್ಯಗಳಲ್ಲಿ ತಂಡದ ಆಟಗಾರರೊಂದಿಗೆ ಡೇವಿಡ್ ವಾರ್ನರ್ ಅವರಿಗೆ ಪ್ರಯಾಣ ಮಾಡುವ ಅವಕಾಶವನ್ನು ಕೂಡ ನೀಡಿರಲಿಲ್ಲ.

ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಕ್ಕೆ!ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಕ್ಕೆ!

ಹೀಗೆ ಟೂರ್ನಿ ಮುಗಿಯುವಷ್ಟರ ಹೊತ್ತಿಗೆ ಡೇವಿಡ್ ವಾರ್ನರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಡುವೆ ದೊಡ್ಡ ಅಂತರ ನಿರ್ಮಾಣವಾಗಿ ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಮತ್ತೆ ಆಡುವುದಿಲ್ಲ ಎಂದು ಡೇವಿಡ್ ವಾರ್ನರ್ ಹಿಂದೆ ಸರಿದಿದ್ದಾರೆ ಮತ್ತು ಇತ್ತೀಚೆಗೆ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಡೇವಿಡ್ ವಾರ್ನರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಕಡೆಗಣಿಸಿದೆ. ಹೀಗೆ ಡೇವಿಡ್ ವಾರ್ನರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಮೂಲೆಗುಂಪು ಮಾಡಿತು ಎಂಬ ಆರೋಪ ದೊಡ್ಡಮಟ್ಟದಲ್ಲಿ ಕೇಳಿಬರುತ್ತಿದ್ದು ಈ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿದ್ದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಗ್ಗೆ ಮಾತನಾಡುವ ಮುನ್ನ ಅಂದು ನಡೆದಿದ್ದನ್ನು ಯೋಚಿಸಿ

ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಗ್ಗೆ ಮಾತನಾಡುವ ಮುನ್ನ ಅಂದು ನಡೆದಿದ್ದನ್ನು ಯೋಚಿಸಿ

ಫ್ರಾಂಚೈಸಿಯೊಂದು ವಿದೇಶಿ ಆಟಗಾರನನ್ನು ಕಡೆಗಣಿಸಿದ್ದರ ಕುರಿತು ಪ್ರಶ್ನೆ ಹಾಕುತ್ತಿರುವವರು ಈ ಹಿಂದೆ ಅದೇ ಫ್ರಾಂಚೈಸಿ ಆ ವಿದೇಶಿ ಆಟಗಾರನನ್ನು ತನ್ನ ಸ್ವಂತ ದೇಶವೇ ಕ್ರಿಕೆಟ್ ಆಡುವುದರಿಂದ ಬ್ಯಾನ್ ಮಾಡಿದ್ದಾಗ ಸಹಾಯ ಮಾಡಿತ್ತು ಎಂಬುದನ್ನು ಮರೆಯಬಾರದು ಎಂದಿದ್ದಾರೆ. ಹೌದು ಈ ಹಿಂದೆ ಡೇವಿಡ್ ವಾರ್ನರ್ ಅವರನ್ನು ಆಸ್ಟ್ರೇಲಿಯ ಬ್ಯಾನ್ ಮಾಡಿದಾಗ ಸನ್ ರೈಸರ್ಸ್ ಹೈದರಾಬಾದ್ ತಂಡ ಕ್ರಿಕೆಟ್ ಆಡುವ ಅವಕಾಶವನ್ನು ನೀಡಿತ್ತು. ಹೀಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ನೀಡಿ ಮತ್ತೆ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ತಂಡವನ್ನು ಸೇರಿಕೊಂಡರು. ಹೀಗಾಗಿಯೇ ಡೇವಿಡ್ ವಾರ್ನರ್ ಅವರಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂದು ಮಾಡಿದ ಸಹಾಯವನ್ನು ಮರೆಯಬೇಡಿ ಎಂದು ಇರ್ಫಾನ್ ಪಠಾಣ್ ನೆನಪಿಸಿದ್ದಾರೆ.

2018ರಲ್ಲಿ ಬ್ಯಾನ್ ಆಗಿದ್ದ ಡೇವಿಡ್ ವಾರ್ನರ್

2018ರಲ್ಲಿ ಬ್ಯಾನ್ ಆಗಿದ್ದ ಡೇವಿಡ್ ವಾರ್ನರ್

2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ಸ್ಟೀವ್ ಸ್ಮಿತ್ ನಾಯಕತ್ವದ ಮತ್ತು ಡೇವಿಡ್ ವಾರ್ನರ್ ಉಪ ನಾಯಕತ್ವದ ಆಸ್ಟ್ರೇಲಿಯ ತಂಡ ದೊಡ್ಡ ವಿವಾದಕ್ಕೆ ಸಿಲುಕಿಕೊಂಡಿತ್ತು. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿದ್ದ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಚೆಂಡನ್ನು ಟ್ಯಾಂಪರಿಂಗ್ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು.

ಡೇವಿಡ್ ವಾರ್ನರ್ ಐಪಿಎಲ್ ಅಂಕಿ ಅಂಶ

ಡೇವಿಡ್ ವಾರ್ನರ್ ಐಪಿಎಲ್ ಅಂಕಿ ಅಂಶ

ಇಲ್ಲಿಯವರೆಗೂ ಒಟ್ಟು 150 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಡೇವಿಡ್ ವಾರ್ನರ್ 5449 ರನ್ ಕಲೆಹಾಕಿದ್ದಾರೆ ಹಾಗೂ 4 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಒಟ್ಟು 3 ಬಾರಿ ಆರೆಂಜ್ ಕ್ಯಾಪ್ ವಿಜೇತನಾಗಿ ಡೇವಿಡ್ ವಾರ್ನರ್ ಹೊರಹೊಮ್ಮಿದ್ದು 2016ರಲ್ಲಿ ತನ್ನ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.

Story first published: Friday, December 3, 2021, 17:49 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X