ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆಂಡು ವಿರೂಪವನ್ನು ನಾನು ತಡೆಯಬಹುದಿತ್ತು, ಆದರೆ ತಡೆದಿರಲಿಲ್ಲ: ಸ್ಮಿತ್

Steve Smith says he had opportunity to stop ball-tampering scandal

ಸಿಡ್ನಿ, ಡಿಸೆಂಬರ್ 21: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಚೆಂಡು ವಿರೂಪ ಪ್ರಕರಣದ ಬಗ್ಗೆ ಮಾತನಾಡಿದ್ದರೆ. ಪ್ರಕರಣವನ್ನು ನಾನು ತಡೆಯಲು ಅವಕಾಶವಿತ್ತು. ಆದರೆ ನಾನು ನಡೆದಿರಲಿಲ್ಲ. ಅದು ನನ್ನ ನಾಯಕತ್ವದ ಸೋಲಾಗಿತ್ತು ಎಂದು ಹೇಳಿದ್ದಾರೆ.

ಯುವರಾಜ್ ಮುಂಬೈ ಸೇರಿಕೊಂಡ ಬಗ್ಗೆ ನಂಗೊಂದ್ ಹೇಳ್ಳಿಕ್ಕಿದೆ: ಗಂಗೂಲಿಯುವರಾಜ್ ಮುಂಬೈ ಸೇರಿಕೊಂಡ ಬಗ್ಗೆ ನಂಗೊಂದ್ ಹೇಳ್ಳಿಕ್ಕಿದೆ: ಗಂಗೂಲಿ

ಶುಕ್ರವಾರ (ಡಿಸೆಂಬರ್ 21) ಪ್ರಕರಣದ ಕುರಿತು ತುಟಿ ಬಿಚ್ಚಿದ ಸ್ಮಿತ್, 'ನಮ್ಮ ತಂಡ ಮತ್ತೆ ಹಿಂದಿನ ಆಟದ ಲಯಕ್ಕೆ ಮರಳಲು ಹರಸಾಹಸ ಪಡುವುದನ್ನು ನೋಡಲು ಬೇಸರವಾಗುತ್ತಿದೆ. ತಂಡದ ಹಿನ್ನಡೆಗೆ ಒಂದರ್ಥದಲ್ಲಿ ನಾನು ಕಾರಣ. ಬಾಲ್ ಟ್ಯಾಂಪರಿಂಗ್ ಪ್ರಕರಣ ನಡೆಯದಿದ್ದರೆ ಇಂದಿಗೂ ಬಲಿಷ್ಠ ತಂಡವಾಗೇ ಆಸೀಸ್ ಗುರುತಿಸಿಕೊಳ್ಳುತ್ತಿತ್ತು' ಎಂದರು.

ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪದಲ್ಲಿ ಪಾಲ್ಗೊಂಡು ಆಸ್ಟ್ರೇಲಿಯಾದ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲ್ಪಟ್ಟಿದ್ದರು. ಮೋಸದಾಟವನ್ನು ತಡೆಯದಿದ್ದಿದ್ದೇ ನನ್ನ ದೊಡ್ಡ ತಪ್ಪಾಗಿತ್ತು ಎಂದು ಸ್ಮಿತ್ ತಿಳಿಸಿದ್ದಾರೆ.

ಕನ್ನಡ ನೆಲ, ಕನ್ನಡ ಪ್ರತಿಭೆಗಳ ಸಮ್ಮುಖದಲ್ಲಿ ಲಕ್ಷ್ಮಣ್ ಕೃತಿ ಅನಾವರಣಕನ್ನಡ ನೆಲ, ಕನ್ನಡ ಪ್ರತಿಭೆಗಳ ಸಮ್ಮುಖದಲ್ಲಿ ಲಕ್ಷ್ಮಣ್ ಕೃತಿ ಅನಾವರಣ

ಚೆಂಡು ವಿರೂಪಕ್ಕಿಂತ ಮುನ್ನ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಏನ್ ನಡೀತು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸ್ಟೀವ್, 'ಆ ಸಂದರ್ಭ ನಂಗದರ ಬಗ್ಗೆ ಏನೂ ಗೊತ್ತಿಲ್ಲ ಎಂದು ಅಸಹಾಯಕತೆ ತೋರಿಕೊಳ್ಳುವ ಬದಲು ನಾನು ಆ ವಂಚನೆಯ ಯತ್ನವನ್ನು ತಡೆಯಬಹುದಿತ್ತು. ನಾಯಕನಾಗಿದ್ದೂ ನಾನವತ್ತು ಎಡವಿದ್ದೆ' ಎಂದು ಹೇಳಿದರು.

Story first published: Friday, December 21, 2018, 18:52 [IST]
Other articles published on Dec 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X