ವಿಶಾಖಪಟ್ಟಣಂ, ಜನವರಿ 14: ಹೈದರಾಬಾದ್ ವಿರುದ್ಧ ರೋಚಕ ಜಯ ದಾಖಲಿಸಿದ್ದ ಕರ್ನಾಟಕ ತಂಡ, ಭಾನುವಾರದಂದು ಕೇರಳ ವಿರುದ್ಧ ಭರ್ಜರಿ ದಾಖಲಿಸಿದೆ.ಈ ಗೆಲುವಿನ ಮೂಲಕ ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನ ದಕ್ಷಿಣ ವಲಯದ ಟಾಪರ್ ಆಗಿ ಮುಂದಿನ ಹಂತಕ್ಕೆ ವಿನಯ್ ಕುಮಾರ್ ಪಡೆ ಅರ್ಹತೆ ಪಡೆದುಕೊಂಡಿದೆ.
ಕೇರಳ ಚೇಸ್ : 182ರನ್ ಗಳ ಗುರಿ ಬೆನ್ನು ಹತ್ತಿದ ಕೇರಳ ಆರಂಭದಲ್ಲೇ ವಾರಿಯರ್ ವಿಕೆಟ್ ಕಳೆದುಕೊಂಡರೂ ಉತ್ತಮ ವೇಗದಲ್ಲಿ ರನ್ ಗಳಿಸಿತು. ನಾಯಕ ಸಂಜು ಸಾಮ್ಸನ್ 41 ಎಸೆತಗಳಲ್ಲಿ 71 ರನ್ (8 ಬೌಂಡರಿ, 3 ಸಿಕ್ಸರ್), ವಿಷ್ಣು ವಿನೋದ್ 26 ಎಸೆತಗಳಲ್ಲಿ 46 ರನ್ (7 ಬೌಂಡರಿ, 1 ಸಿಕ್ಸರ್) ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.
ಆದರೆ, ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ 19.2 ಓವರ್ ಗಳಲ್ಲಿ 161 ಸ್ಕೋರಿಗೆ ಆಲೌಟ್ ಆಯಿತು. ಕರ್ನಾಟಕ ಪರ ವಿನಯ್ 3 ಓವರ್ ಗಳಲ್ಲಿ 22 ರನ್ನಿತ್ತು 2ವಿಕೆಟ್ ಗಳಿಸಿದರೆ, ಪ್ರವೀಣ್ ದುಬೇ 35 ರನ್ನಿತ್ತು 3 ವಿಕೆಟ್ ಕಿತ್ತರು. ಅರವಿಂದ್ ಎಸ್, ಅಭಿಮನ್ಯು ಮಿಥುನ್, ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಗಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಭರ್ಜರಿ ಆರಂಭ ಒದಗಿಸಿದರು. 85 ಎಸೆತಗಳಲ್ಲಿ 86ರನ್ (9 ಬೌಂಡರಿ, 3 ಸಿಕ್ಸರ್) ಚೆಚ್ಚಿದರು. ಆರ್ ಸಮರ್ಥ್ 23 ಎಸೆತಗಳಲ್ಲಿ 27ರನ್. ಕೆ ಗೌತಮ್ 12 ಎಸೆತಗಳಲ್ಲಿ 21ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.
20 ಓವರ್ ಗಳಲ್ಲಿ ವಿನಯ್ ಕುಮಾರ್ ಪಡೆ 6ವಿಕೆಟ್ ನಷ್ಟಕ್ಕೆ 181 ಸ್ಕೋರ್ ಮಾಡಿತು. ಕೇರಳ ಪರ ಆಸೀಫ್ ಕೆ.ಎಂ 34 ರನ್ನಿತ್ತು 2 ವಿಕೆಟ್ ಗಳಿಸಿದರು.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ. Subscribe to Kannada MyKhel.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ