ಟಿ20 ಪಂದ್ಯದಲ್ಲಿ ಹೈಡ್ರಾಮಾ, ರಾಯುಡು ಪಡೆ ಮಣಿಸಿದ ವಿನಯ್ ಪಡೆ

Posted By:

ವಿಶಾಖಪಟ್ಟಣಂ, ಜನವರಿ 12: ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ 2 ರನ್ ಗಳ ರೋಚಕ ಜಯ ಲಭಿಸಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ 20 ಪಂದ್ಯದಲ್ಲಿ ಕರುಣ್ ನಾಯರ್, ಕೆ.ಗೌತಮ್‌ ಹಾಗೂ ಸ್ಟುವರ್ಟ್ ಬಿನ್ನಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 205 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್‌ ಗೆಲುವಿನ ಹೊಸ್ತಿಲಲ್ಲಿ ಎಡವಿತು. 203 ರನ್‌ ಗಳಿಸಿ, 2 ರನ್ ಗಳಿಂದ ಪಂದ್ಯ ಕಳೆದುಕೊಂಡಿತು.

ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಎಗರಾಡಿದ ರಾಯುಡುಗೆ ನಿಷೇಧ

ಆದರೆ, ಹೈದರಾಬಾದಿನ ನಾಯಕ ಅಂಬಟಿ ರಾಯುಡು ಅವರು ಅಂಪೈರ್ ಗಳ ವಿರುದ್ಧ ಕಿಡಿಕಾರಿದರು. ಇದರಿಂದ ಮುಂದೆ ನಡೆಯಬೇಕಿದ್ದ ಆಂಧ್ರ ಹಾಗೂ ಕೇರಳ ಪಂದ್ಯವನ್ನು 13 ಓವರ್ ಗಳಿಗೆ ಸೀಮಿತಗೊಳಿಸಬೇಕಾಯಿತು. ಸ್ಟುವರ್ಟ್ ಬಿನ್ನಿ ಎಸೆದ ಕೊನೆ ಓವರ್ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿದೆ. ರಾಯುಡು ಅನಗತ್ಯವಾಗಿ ಪ್ರತಿಭಟಿಸಿದ್ದನ್ನು ಅನೇಕ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್

ಪಂದ್ಯದ ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 (ಕರುಣ್ ನಾಯರ್‌ 77, ಕೆ.ಗೌತಮ್‌ 57; ರವಿಕಿರಣ್‌ 33ಕ್ಕೆ2)

ಹೈದರಾ ಬಾದ್‌ :30 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 203 (ತನ್ಮಯ್ ಅಗರವಾಲ್‌ 38ರನ್, ಅಕ್ಷತ್ ರೆಡ್ಡಿ 70, ಬಿ.ಸಂದೀಪ್‌ 34; ಸ್ಟುವರ್ಟ್ ಬಿನ್ನಿ 29ಕ್ಕೆ3 ಕೊನೆ ಓವರ್ ನಲ್ಲಿ 2 ವಿಕೆಟ್ )

ಪಂದ್ಯದ ರೋಚಕ ಕೊನೆ ಓವರ್

ಪಂದ್ಯದ ಕೊನೆ ಓವರ್ ನಲ್ಲಿ ಹೈದರಾಬಾದಿಗೆ ಗೆಲ್ಲಲು 6 ಎಸೆತಗಳಲ್ಲಿ 8 ರನ್ ಬೇಕಿತ್ತು. ನೋಬಾಲ್ ನಲ್ಲಿ ವಿಕೆಟ್ ಬಿತ್ತು. ಕರ್ನಾಟಕದ ವಿಕೆಟ್ ಕೀಪರ್ ಸಿಎಂ ಗೌತಮ್ ಎರಡು ಅದ್ಭುತ ಗೌತಮ್ ಕ್ಯಾಚ್ ಹಿಡಿದರು, ಬಿನ್ನಿ ಬೌಲಿಂಗ್ ಮೆಚ್ಚುಗೆ ಪಡೆಯಿತು.

ಕರುಣ್ ನಾಯರ್ ಟ್ವೀಟ್

ಕರುಣ್‌ ನಾಯರ್ ಮತ್ತು ಕೆ.ಗೌತಮ್‌ 131 ರನ್‌ಗಳ ಜೊತೆಯಾಟ ಆಡಿದರು.ಕರುಣ್ ನಾಯರ್‌ 42 ಎಸೆತಗಳಲ್ಲಿ 77 ರನ್ ಗಳಿಸಿದರು. ಒಂದು ಸಿಕ್ಸರ್ ಮತ್ತು 10 ಬೌಂಡರಿ ಬಾರಿಸಿದರೆ, ಗೌತಮ್‌ 31 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಮತ್ತು ಬೌಂಡರಿ ಒಳಗೊಂಡ 57 ರನ್‌ ಗಳಿಸಿದರು

ರಾಯುಡು ಪ್ರತಿಭಟನೆ ಬಗ್ಗೆ ಚರ್ಚೆ

ಕರ್ನಾಟಕದ ಇನ್ನಿಂಗ್ಸ್ ವೇಳೆಯಲ್ಲಿ ಹೈದರಾಬಾದಿನ ಫೀಲ್ಡರ್ ರೊಬ್ಬರು ಬೌಂಡರಿ ಗೆರೆ ತುಳಿದು ಫೀಲ್ಡ್ ಮಾಡಿದ್ದರು. ಆದರೆ, ಇದು ಅಂಪೈರ್ ಗಳ ಗಮನಕ್ಕೆ ಬಂದಿರಲಿಲ್ಲ. 2 ರನ್ ಮಾತ್ರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ ವಿನಯ್ ಕುಮಾರ್, ಹೈದರಾಬಾದ್ ಚೇಸ್ ಶುರುವಾಗುವುದರೊಳಗೆ 2ರನ್ ಸೇರಿಸುವಂತೆ ಅಂಪೈರ್ ಗಳನ್ನು ಕೇಳಿಕೊಂಡರು. ನ್ಯಾಯಯುತವಾದ ಬೇಡಿಕೆಯನ್ನು ಮನ್ನಿಸಿದರು, ಹೀಗಾಗಿ 205ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಪಂದ್ಯ ಸೋತಿದ್ದರಿಂದ ರಾಯುಡು ಈ ಬಗ್ಗೆ ಮತ್ತೆ ಕಿತ್ತಾಟ ಶುರು ಮಾಡಿದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 12, 2018, 13:27 [IST]
Other articles published on Jan 12, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ