ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: ಈ ಭಾರತೀಯನೊಂದಿಗೆ ಜೋಸ್ ಬಟ್ಲರ್‌ನನ್ನು ಹೋಲಿಕೆ ಮಾಡಿದ ವಾನ್!

T20 World Cup 2022: Michael Vaughan Compares Jos Buttler With Former Indian Captain MS Dhoni

ಭಾನುವಾರ, ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್‌ನಿಂದ ಯಾರೂ ನಿರೀಕ್ಷಿಸದ ಉತ್ತರ ಪಡೆದ ಸೂರ್ಯಕುಮಾರ್; ಪೋಸ್ಟ್ ವೈರಲ್ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್‌ನಿಂದ ಯಾರೂ ನಿರೀಕ್ಷಿಸದ ಉತ್ತರ ಪಡೆದ ಸೂರ್ಯಕುಮಾರ್; ಪೋಸ್ಟ್ ವೈರಲ್

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು ಇದೀಗ ಜೋಸ್ ಬಟ್ಲರ್ ಅವರನ್ನು ಶ್ಲಾಘಿಸಿದ್ದು, ಭಾರತದ ಮಾಜಿ ನಾಯಕ ಎಂಎಸ್ ಧೋನಿಯೊಂದಿಗೆ ಹೋಲಿಕೆ ಮಾಡಿದ್ದಾರೆ. ಟಿ20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ಎಂಎಸ್ ಧೋನಿ ರೀತಿ ತಂಡವನ್ನು ಸುದೀರ್ಘ ದಿನಗಳ ಕಾಲ ಇಂಗ್ಲೆಂಡ್ ತಂಡವನ್ನು ಮುನ್ನಡೆಸಬಹುದು ಎಂದು ಅಂದಾಜಿಸಿದ್ದಾರೆ.

ಇಯಾನ್ ಮಾರ್ಗನ್ ನಂತರ ಜೋಸ್ ಬಟ್ಲರ್ ನಾಯಕ

ಇಯಾನ್ ಮಾರ್ಗನ್ ನಂತರ ಜೋಸ್ ಬಟ್ಲರ್ ನಾಯಕ

ಬಲಗೈ ಓಪನಿಂಗ್ ಬ್ಯಾಟ್ಸ್‌ಮನ್ ಆಗಿರುವ ಜೋಸ್ ಬಟ್ಲರ್ ಅವರು ಹಿಂದಿನ ನಾಯಕ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಇಂಗ್ಲೆಂಡ್‌ನ ವೈಟ್-ಬಾಲ್ ತಂಡಕ್ಕೆ ನಾಯಕರಾಗಿ ನೇಮಕಗೊಂಡರು.

ಜೋಸ್ ಬಟ್ಲರ್ ನಾಯಕನಾಗಿ ಆಯ್ಕೆಯಾದ ನಂತರ ಭಾರತದ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಸೋಲು, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಸೋಲಿನಿಂದ ನಾಯಕನಾಗಿ ಉತ್ತಮ ಶುಭಾರಂಭ ಮಾಡಲಿಲ್ಲ. ಇದಲ್ಲದೆ ದಿ ಹಂಡ್ರೆಡ್ ಸರಣಿ ವೇಳೆ ಕರುಳು ಗಾಯದಿಂದ ಬಳಲುತ್ತಿದ್ದರಿಂದ ಪಾಕಿಸ್ತಾನ ವಿರುದ್ಧ ಏಳು ಪಂದ್ಯಗಳ ಟಿ20 ಸರಣಿಯ ಪ್ರವಾಸದ ಭಾಗವಾಗಿರಲಿಲ್ಲ. ಆಗ ತಂಡವನ್ನು ಮೊಯಿನ್ ಅಲಿ ಮುನ್ನಡೆಸಿದರು.

ಮೊದಲ ಬಾರಿಗೆ ಟಿ20 ವಿಶ್ವಕಪ್‌ ನಾಯಕತ್ವದ ವಹಿಸಿದ ಜೋಸ್ ಬಟ್ಲರ್

ಮೊದಲ ಬಾರಿಗೆ ಟಿ20 ವಿಶ್ವಕಪ್‌ ನಾಯಕತ್ವದ ವಹಿಸಿದ ಜೋಸ್ ಬಟ್ಲರ್

ಮೊದಲ ಬಾರಿಗೆ ಟಿ20 ವಿಶ್ವಕಪ್‌ನಂತಹ ಐಸಿಸಿ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವದ ವಹಿಸಿದ ಜೋಸ್ ಬಟ್ಲರ್, ತಮ್ಮ ಚಾಣಾಕ್ಷ ನಿರ್ಧಾರಗಳು, ಯುದ್ಧತಂತ್ರ ಮತ್ತು ತಂಡದ ಸದಸ್ಯರ ಮನೋಭಲ ಹೆಚ್ಚಿಸುವಲ್ಲಿ ಸಫಲರಾದರು. ಇದರಿಂದ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸುವಂತಾಯಿತು.

ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡವನ್ನು ಮುನ್ನಡೆಸಿದ 32 ವಯಸ್ಸಿನ ಜೋಸ್ ಬಟ್ಲರ್ ಇದೀಗ ಭವಿಷ್ಯದಲ್ಲಿ ಉತ್ತಮ ಅವಕಾಶ ಹೊಂದಿದ್ದಾರೆ. ಎಂಎಸ್ ಧೋನಿ ಭಾರತ ತಂಡದ ನಾಯಕರಾಗಿ ಸುದೀರ್ಘ ವರ್ಷಗಳ ಕಾಲ ಮುನ್ನಡೆಸಿದರು. ಒಂದು ವೇಳೆ ಜೋಸ್ ಬಟ್ಲರ್‌ ಟಿ20 ಸ್ವರೂಪದ ಕ್ರಿಕೆಟ್ ಮೇಲೆ ಕೇಂದ್ರೀಕರಿಸಿಸಿದರೆ ಅದೇ ರೀತಿ ಮಾಡುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ತಿಳಿಸಿದರು.

ಪ್ರತಿಯೊಂದು ಸವಾಲಿಗೂ ಜೋಸ್ ಬಟ್ಲರ್ ಬಳಿ ಉತ್ತರವಿತ್ತು

ಪ್ರತಿಯೊಂದು ಸವಾಲಿಗೂ ಜೋಸ್ ಬಟ್ಲರ್ ಬಳಿ ಉತ್ತರವಿತ್ತು

ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಎಸೆದ ಪ್ರತಿಯೊಂದು ಸವಾಲಿಗೂ ಜೋಸ್ ಬಟ್ಲರ್ ಬಳಿ ಉತ್ತರವಿತ್ತು. ಇದು ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅಗ್ರಕ್ರಮಾಂಕದಿಂದ ಕೆಳಗಿನ ಕ್ರಮಾಂಕದವರೆಗೆ ಪಂದ್ಯ ವಿಜೇತ ಆಟಗಾರರನ್ನು ಹೊಂದಲು ಸಾಧ್ಯವಾಯಿತು ಎಂದು ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಪ್ರಶಂಸೆ ವ್ಯಕ್ತಪಡಿಸಿದರು.

ಟಿ20 ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿರುವ ಭಾರತವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ ಇಂಗ್ಲೆಂಡ್ ಇದೀಗ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಸಾಧಾರಣ ತಂಡವಾಗಿದೆ. ನಾವು ಕ್ರಿಕೆಟ್ ಟ್ರೆಂಡ್‌ಸೆಟ್ಟಿಂಗ್ ತಂಡವನ್ನು ಹೊಂದಿದ್ದು, ಪ್ರಪಂಚದ ಉಳಿದ ತಂಡಗಳು ತಮ್ಮನ್ನು ಅನುಕರಿಸಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದರು.

Story first published: Monday, November 14, 2022, 20:14 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X