ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಆಸ್ಟ್ರೇಲಿಯಾಗೆ ಫೈನಲ್‌ಗೇರಲು 177 ರನ್‌ಗಳ ಗುರಿ ನೀಡಿದ ಪಾಕಿಸ್ತಾನ

T20 world cup: 2nd Semi Final Australia need 177 runs to win against Pakistan

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ ರೋಚಕ ಹಣಾಹಣಿ ನಡೆಯುತ್ತಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆಸ್ಟ್ರೇಲಿಯಾಗೆ ದೊಡ್ಡ ಮೊತ್ತದ ಗುರಿಯನ್ನು ನಿಗದಿ ಪಡಿಸಿದೆ. ಮೊಹಮ್ಮದ್ ರಿಜ್ವಾನ್, ಫಕಾರ್ ಜಮಾನ್ ಹಾಗೂ ನಾಯಕ ಬಾಬರ್ ಅಜಂ ನೀಡಿದ ಉತ್ತಮ ಪ್ರದರ್ಶನದಿಂದಾಗಿ ಈ ಪಂದ್ಯದಲ್ಲಿಯೂ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಎದುರಾಳಿ ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಈ ಸವಾಲು ಸ್ವೀಕರಿಸಿದ ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿಯೂ ಉತ್ತಮ ಆರಂಭ ದೊರೆಯಿತು. ಪಾಕಿಸ್ತಾನ ತಂಡದ ಆರಂಭಿಕ ಆಟಗಾರರಾದ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಜೋಡಿ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನು ನೀಡಿದರು. ಜವಾಬ್ಧಾರಿಯುತ ಪ್ರದರ್ಶನ ನಿಡಿದ ಈ ಜೋಡಿಯನ್ನು ಆಡಂ ಜಂಪಾ ಬೇರ್ಪಡಿಸಿದರು. 34 ಎಸೆತಗಳಲ್ಲಿ 39 ರನ್‌ಗಳಿಸಿದ್ದ ಬಾಬರ್ ಅಜಂ ಜಂಪಾಗೆ ಔಟಾಗಿ ಫೆವಿಲಿಯನ್ ಸೇರಿಕೊಂಡರು.

ಬಾಬರ್ ಹಾಗೂ ಕೊಹ್ಲಿ ನಡುವಿನ ಹೋಲಿಕೆ ಸಲ್ಲದು: ಬಾಬರ್ ಅಜಮ್ ವ್ಯಕ್ತಿತ್ವ ಕೊಹ್ಲಿಗೆ ವಿರುದ್ಧವಾಗಿದೆ!ಬಾಬರ್ ಹಾಗೂ ಕೊಹ್ಲಿ ನಡುವಿನ ಹೋಲಿಕೆ ಸಲ್ಲದು: ಬಾಬರ್ ಅಜಮ್ ವ್ಯಕ್ತಿತ್ವ ಕೊಹ್ಲಿಗೆ ವಿರುದ್ಧವಾಗಿದೆ!

ಅದಾದ ಬಳಿಕ ಜೊತೆಯಾದ ರಿಜ್ವಾನ್ ಹಾಗೂ ಫಾಕರ್ ಜಮಾನ್ ಜೋಡಿ ಮತ್ತೊಂದು ಉತ್ತಮ ಜೊತೆಯಾಟದಲ್ಲಿ ಭಾಗಿಯಾಯಿತು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಆಟಗಾರರು 72 ರನ್‌ಗಳ ಜೊತೆಯಾಟವನ್ನು ನೀಡಿದರು. ಈ ಸಂದರ್ಭದಲ್ಲಿ 52 ಎಸೆತಗಳಲ್ಲಿ 67 ರನ್‌ ಬಾರಿಸಿದ್ದ ರಿಜ್ವಾನ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.

ರಿಜ್ವಾನ್ ವಿಕೆಟ್ ಕಳೆದುಕೊಂಡ ನಂತರ ಆಸಿಫ್ ಅಲಿ ಹಾಗೂ ಶೋಯೆಬ್ ಮಲಿಕ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲವಾದರು. ಆದರೆ ಮತ್ತೊಂದು ತುದಿಯಲ್ಲಿ ಫಾಕರ್ ಜಮಾನ್ ಅಬ್ಬರ ಮುಂದುವರಿದಿತ್ತು. ಕೇವಲ 32 ಎಸೆತಗಳಲ್ಲಿ ಜಮಾನ್ 55 ರನ್ ಬಾರಿಸಿ ಮಿಂಚಿದರು.

ಆಸ್ಟ್ರೇಲಿಯಾ ಪರವಾಗಿ ಸ್ಟಾರ್ಕ್ 2 ವಿಕೆಟ್ ಪಡೆದರೆ ಪ್ಯಾಟ್ ಕಮಿನ್ಸ್ ಹಾಗೂ ಆಡಂ ಜಂಪಾ ತಲಾ ಒಂದು ವಿಕೆಟ್ ಕಬಳಿಸಿದರು. ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದರು. ಸ್ಟಾರ್ಕ್ ಕೂಡ ರನ್ ನಿಯಂತ್ರಣ ಮಾಡುವಲ್ಲಿ ವಿಫಲವಾದರು. ಅಂತಿಮವಾಗಿ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್‌ಗಳಿಸಿತು

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸೆಮಿಫೈನಲ್‌ನ 5 ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸೆಮಿಫೈನಲ್‌ನ 5 ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ

ಪಾಕಿಸ್ತಾನ ಪ್ಲೇಯಿಂಗ್ XI : ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

ಬೆಂಚ್: ಮೊಹಮ್ಮದ್ ನವಾಜ್, ಹೈದರ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಸರ್ಫರಾಜ್ ಅಹ್ಮದ್

ಆಸ್ಟ್ರೇಲಿಯಾ ಪ್ಲೇಯಿಂಗ್ XI : ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್

David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada

Story first published: Friday, November 12, 2021, 9:51 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X