ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಅವರಿಬ್ಬರ ಗುರಿ ವಿಕೆಟ್ ವಿಕೆಟ್ ಪಡೆಯುವುದಲ್ಲ": ಅಶ್ವಿನ್, ಜಡೇಜಾ ಬಗ್ಗೆ ಮಂಜ್ರೇಕರ್ ಕಿಡಿ

T20 World Cup: Ashwin and Jadeja are more concerned with economy than wickets: Sanjay Manjrekar

ಈ ಬಾರಿಯ ಟಿ20 ವಿಶ್ವಕಪ್‌ಗೆ ಫೆವರೀಟ್ ತಂಡವಾಗಿ ಕಾಲಿಟ್ಟಿರುವ ಭಾರತ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಸೋಲು ಕಂಡು ಆಘಾತ ಅನುಭವಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿ ಪಾಕಿಸ್ತಾನ ತಂಡದ ಒಂದು ವಿಕೆಟ್ ಪಡೆಯುವುದಕ್ಕೂ ಸಾಧ್ಯವಾಗಿರಲಿಲ್ಲ. ಇದೀಗ ಭಾರತ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಭಾರತ ಇಬ್ಬರು ಅನುಭವಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ವಿರುದ್ಧ ಹರಿಹಾಯ್ದಿದ್ದಾರೆ. ಇಬ್ಬರು ಕೂಡ ವಿಕೆಟ್ ಪಡೆಯುವುದರ ಮೇಲೆ ಗಮನ ಹರಿಸುತ್ತಿಲ್ಲ ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆರ್ ಅಶ್ವಿನ್ ಆಡಿರಲಿಲ್ಲ. ಆದರೆ ರವೀಂದ್ರ ಜಡೇಜಾ ಹಾಗೂ ವರುಣ್ ಚಕ್ರವರ್ತಿ ಕಣಕ್ಕಿಳಿದಿದ್ದರು. ಬೌಲಿಂಗ್‌ಗೆ ಸಹಕಾರಿಯೆನಿಸುವ ಯುಎಇನ ಪಿಚ್‌ನಲ್ಲಿ ಈ ಇಬ್ಬರು ಸ್ಪಿನ್ನರ್‌ಗಳ ಸಹಿತ ಟೀಮ್ ಇಂಡಿಯಾದ ಎಲ್ಲಾ ಬೌಲರ್‌ಗಳು ಕೂಡ ವೈಫಲ್ಯವನ್ನು ಅನುಭವಿಸಿದ್ದರು. ಇದು ಭಾರತದ ಸೋಲಿಗೆ ಕಾರಣವಾಗಿತ್ತು.

ಅಂಕಿಅಂಶಗಳೆಲ್ಲಾ ಭಾರತಕ್ಕೆ ವಿರುದ್ಧ: ಶಾಹೀನ್ ಅಫ್ರಿದಿ ನಂತರ ಭಾರತಕ್ಕೆ ಕಾಡಲು ಸಜ್ಜಾದ ಮಾರಕ ವೇಗಿ!ಅಂಕಿಅಂಶಗಳೆಲ್ಲಾ ಭಾರತಕ್ಕೆ ವಿರುದ್ಧ: ಶಾಹೀನ್ ಅಫ್ರಿದಿ ನಂತರ ಭಾರತಕ್ಕೆ ಕಾಡಲು ಸಜ್ಜಾದ ಮಾರಕ ವೇಗಿ!

ಅವರ ಉದ್ದೇಶ ವಿಕೆಟ್ ಪಡೆಯುವುದಲ್ಲ ಎಕಾನಮಿ ಕಾಯ್ದುಕೊಳ್ಳುವುದು!

ಅವರ ಉದ್ದೇಶ ವಿಕೆಟ್ ಪಡೆಯುವುದಲ್ಲ ಎಕಾನಮಿ ಕಾಯ್ದುಕೊಳ್ಳುವುದು!

ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ವಿಕೆಟ್ ಟೇಕರ್‌ಗಳಲ್ಲ ಎಂದಿದ್ದಾರೆ ಸಂಜಯ್ ಮಂಜ್ರೇಕರ್. ಟೀಮ್ ಇಂಡಿಯಾದ ಈ ಇಬ್ಬರು ಬೌಲರ್‌ಗಳು ಕೂಡ ವಿಕೆಟ್ ಪಡೆಯುವ ಬದಲಾಗಿ ಎಕಾನಮಿ ಕಾಪಾಡಿಕೊಳ್ಳುವತ್ತಲೇ ಗಮನಹರಿಸಿದ್ದಾರೆ ಎಂದು ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್‌ಗಳತ್ತ ಟೀಕೆಯ ಪ್ರಜಾರ ನಡೆಸಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್.

ಟಿ20ಯಲ್ಲಿ ವಿಕೆಟ್ ಕಬಳಿಸುವುದೇ ಮುಖ್ಯ

ಟಿ20ಯಲ್ಲಿ ವಿಕೆಟ್ ಕಬಳಿಸುವುದೇ ಮುಖ್ಯ

ಮುಂದುವರಿದು ಮಾತನಾಡಿದ ಸಂಜಯ್ ಮಂಜ್ರೇಕರ್ ಟಿ20 ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಕೆಲಸ ವಿಕೆಟ್ ಕಬಳಿಸುವುದೇ ಆಗಿದೆ. ಈ ಮೂಲಕ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಗೇಮ್‌ ಚೇಂಜರ್‌ಗಳಾಗಿ ನೆರವಾಗಬೇಕು. ಅದು ಅವರ ಮೇಲಿರುವ ಜವಾಬ್ಧಾರಿಯಾಗಿದೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ತಂಡ ಸೋತಾಗ ಬೆಂಬಲಿಸಬೇಕು ನಿಜ ಆದರೆ..

ತಂಡ ಸೋತಾಗ ಬೆಂಬಲಿಸಬೇಕು ನಿಜ ಆದರೆ..

ಭಾರತದ ಬೌಲಿಂಗ್ ಪಡೆಯ ಬಗ್ಗೆ ಸಂಜಯ್ ಮಂಜ್ರೇಕರ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ನನಗಿರುವ ಅತೊ ದೊಡ್ಡ ಕಳವಳವೇ ಭಾರತದ ಬೌಲಿಂಗ್ ಬಗ್ಗೆ. ನಮ್ಮ ಆಟಗಾರರು ವೈಫಲ್ಯವನ್ನು ಕಂಡ ನಂತರ ಅವರಿಗೆ ಬೆಂಬಲವನ್ನು ನೀಡಬೇಕು ಎಂಬುದು ನನಗೂ ತಿಳಿದಿದೆ. ಆದರೆ ಐಪಿಎಲ್‌ನ ಸುದೀರ್ಘ ಸರಣಿಯಲ್ಲಿ ನೀವು ಇಂತವುಗಳನ್ನು ಸುಲಭವಾಗಿ ಮಾಡಬಹುದು. ಆದರೆ ವಿಶ್ವಕಪ್‌ನಂತಾ ಟೂರ್ನಿಗಳಲ್ಲಿ ಒಂದೆರಡು ಸೋಲುಗಳು ವಿಶ್ವಕಪ್ ಗೆಲುವಿನ ಸಾಧ್ಯತೆಯನ್ನೇ ತಳ್ಳಿ ಹಾಕುತ್ತದೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಯಾರೂ ವಿಕೆಟ್ ತೆಗೆಯಬಲ್ಲರು ಎನಿಸಲಿಲ್ಲ

ಯಾರೂ ವಿಕೆಟ್ ತೆಗೆಯಬಲ್ಲರು ಎನಿಸಲಿಲ್ಲ

ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳಲ್ಲಿ ಯಾರು ಕೂಡ ವಿಕೆಟ್ ತೆಗೆಯಬಲ್ಲರು ಎನಿಸಲಿಲ್ಲ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. "ಅವರ್ಯಾರು ಕುಡ ವಿಕೆಟ್ ತೆಗೆಯುತ್ತಾರೆ ಎಂಬ ಭಾವನೆ ಮೂಡಿಸಲಿಲ್ಲ. ಭಾರತ ಗೆಲ್ಲಬೇಕಿದ್ದರೆ ಇದ್ದ ಅವಕಾಶ ಒಂದೇ. ಭಾರತ ಸ್ಥಿರವಾಗಿ ವಿಕೆಟ್ ಪಡೆಯುತ್ತಾ ಸಾಗಬೇಕಿತ್ತು" ಎಂದಿದ್ದಾರೆ. ಇನ್ನು ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಲು ಸೂಕ್ತವಾದ ಆಟಗಾರನಲ್ಲ ಎಂದಿದ್ದಾರೆ. ರವೀಂದ್ರ ಜಡೇಜಾ ಅವರನ್ನು ಕೇವಲ ಮೂರನೇ ಸ್ಪಿನ್ ಬೌಲರ್ ಆಗಿ ಕಣಕ್ಕಿಳಿಸಬೇಕು. ಆದರೆ ನಿಮ್ಮ ಐವರು ಬೌಲರ್‌ಗಳ ಪಟ್ಟಿಯಲ್ಲಿ ಅವರನ್ನು ಸೇರಿಸಿಕೊಳ್ಳುವುದು ಅಸಾಧ್ಯ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

Story first published: Friday, October 29, 2021, 19:05 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X