ಟಿ20 ವಿಶ್ವಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಡ್ಯಾರೆನ್ ಸಮಿ

ಟಿ20 ವಿಶ್ವಕಪ್‌ಗೆ ಇನ್ನು ಎರಡು ತಿಂಗಳಿಗಿಂತಲೂ ಕಡಿಮೆ ಸಮಯವಿದೆ. ಹೀಗಾಗಿ ಎಲ್ಲಾ ತಂಡಗಳು ಕೂಡ ಈ ಪ್ರತಿಷ್ಟಿತ ಟೂರ್ನಿಯನ್ನು ಗೆಲ್ಲುವ ನಿಟ್ಟಿನಲ್ಲಿ ಪೂರಕ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಯಾವ ತಂಡ ಈ ಬಾರಿಯ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಈ ಪ್ರಶ್ನೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಪ್ರತಿಕ್ರಿಯಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ತಂಡ ಯಾವುದು ಎಂದು ಹೆಸರಿಸಲು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಅದು ನನಗೆ ತುಂಬಾ ಸುಲಭ ಎಂದಿದ್ದಾರೆ ಡ್ಯಾರೆನ್ ಸಮಿ.

ಡ್ಯಾರೆನ್ ಸಮಿ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಈ ಹಿಂದಿನ ಟಿ20 ವಿಶ್ವಕಪ್‌ಅನ್ನು ಗೆದ್ದುಕೊಂಡಿತ್ತು. 2012 ಹಾಗೂ 2016ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡಿಸ್ ತಂಡವನ್ನು ನಾಯಕನಾಗಿ ಡ್ಯಾರೆನ್ ಸಮಿ ಮುನ್ನಡೆಸಿದ್ದರು. ಇದೇ ಹಿನ್ನೆಲೆಯಲ್ಲಿ ಡ್ಯಾರೆನ್ ಸಮಿ ಈ ಬಾರಿಯ ವಿಶ್ವಕಪ್ ವಿಜೇತ ತಂಡವನ್ನು ಊಹಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ಮತ್ತೆ ವಿಂಡೀಸ್ ಪಾಲಿಗೆ ಟಿ20 ವಿಶ್ವಕಪ್

ಮತ್ತೆ ವಿಂಡೀಸ್ ಪಾಲಿಗೆ ಟಿ20 ವಿಶ್ವಕಪ್

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಈ ಬಾರಿಯ ಟಿ20 ವಿಶ್ವಕಪ್ ಟ್ರೋಫಿಯನ್ನು ಕೂಡ ವೆಸ್ಟ್ ಇಂಡೀಸ್ ತಂಡವೇ ಗೆಲ್ಲಲಿದೆ. ಈ ಮೂಲಕ ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಡ್ಯಾರನ್ ಸಮಿ ಹೇಳಿದ್ದಾರೆ. ಇದರಲ್ಲಿ ನನಗೆ ಹೆಚ್ಚು ಯೋಚಿಸುವ ಅಗತ್ಯವೇ ಇಲ್ಲ ಎಂದು ಡ್ಯಾರನ್ ಸಮಿ ವಿವರಿಸಿದ್ದಾರೆ. ಇದಕ್ಕೆ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕಾರಣವನ್ನೂ ಕೂಡ ನೀಡಿದ್ದಾರೆ.

ತಂಡದ ಪ್ರದರ್ಶನ ನೋಡಿ ಅಭಿಪ್ರಾಯ

ತಂಡದ ಪ್ರದರ್ಶನ ನೋಡಿ ಅಭಿಪ್ರಾಯ

ಇನ್ನು ತನ್ನ ಈ ಅಭಿಪ್ರಾಯಕ್ಕೆ ಡ್ಯಾರೆನ್ ಸಮಿ ಕಾರಣವನ್ನು ನೀಡಿದ್ದಾರೆ. "ನಾನು ಈ ಮಾತು ನಿಮಗೆ ಪಕ್ಷಪಾತದಿಂದ ಕೂಡಿದ ಮಾತಿನಂತೆ ಅನಿಸಬಹುದು. ಆದರೆ ನೀವು ತಂಡದ ಪ್ರದರ್ಶನವನ್ನು ನೋಡಿ. ಕಳೆದ ಮೂರ್ನಾಲ್ಕು ಟೂರ್ನಮೆಂಟ್‌ಗಳಲ್ಲಿ ನಾವು ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅದರಲ್ಲಿ ಎರಡನ್ನು ನಾವು ಗೆದ್ದುಕೊಂಡಿದ್ದೇವೆ" ಎಂದಿದ್ದಾರೆ. ಐಸಿಸಿ ಡಿಜಿಟಲ್ ಶೋಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ಡ್ಯಾರೆನ್ ಸಮಿ ವ್ಯಕ್ತಪಡಿಸಿದರು.

ಬಲಿಷ್ಠ ಆಟಗಾರರ ತಂಡ ವೆಸ್ಟ್ ಇಂಡೀಸ್

ಬಲಿಷ್ಠ ಆಟಗಾರರ ತಂಡ ವೆಸ್ಟ್ ಇಂಡೀಸ್

"ನಮ್ಮ ತಂಡದ ಆಟಗಾರರು, ಅವರಲ್ಲಿರುವ ಸಾಮರ್ಥ್ಯ ಅಗಾಧವಾಗಿದೆ. ನಾಯಕ ಪೊಲಾರ್ಡ್ ತಂಡಕ್ಕೆ ಮರಳಿದ್ದಾರೆ. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಫಾಬಿಯನ್ ಅಲೆನ್, ಎವಿನ್ ಲಿವೀಸ್ ಹೀಗೆ ಎದುರಾಳಿಗಳ ಮೇಲೆ ಮುಗಿಬೀಳಬಲ್ಲ ಪ್ರತಿಭಾವಂತ ಆಟಗಾರರ ಪಟ್ಟಿಯೇ ಬೆಳೆಯುತ್ತಾ ಸಾಗುತ್ತದೆ ಎಂದಿದ್ದಾರೆ 37ರ ಹರೆಯದ ಡ್ಯಾರೆನ್ ಸಮಿ. ಇನ್ನು ಇದೇ ಸಂದರ್ಭದಲ್ಲಿ ಅವರು ಹಾರ್ಡ್ ಹಿಟ್ಟರ್ ಆಂಡ್ರೆ ರಸೆಲ್ ಈ ಬಾರಿಯ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನಾಗಬಲ್ಲರು ಎಂದು ಊಹಿಸಿದ್ದಾರೆ.

ರನ್‌ಗಳಿಸಿದವರು ಟೂರ್ನಿ ಗೆಲ್ಲಿಸಲಾರರು

ರನ್‌ಗಳಿಸಿದವರು ಟೂರ್ನಿ ಗೆಲ್ಲಿಸಲಾರರು

ಬ್ಯಾಟಿಂಗ್‌ನಲ್ಲಿ ಅಗ್ರ ಮೂರು ಕ್ರಮಾಂಕದಲ್ಲಿ ಇಳಿಯುವ ಆಟಗಾರರು ಹೆಚ್ಚಿನ ರನ್‌ಗಳಿಸುತ್ತಾರೆ. ವಿರಾಟ್ ಕೊಹ್ಲಿಯಂತಾ ಆಟಗಾರರನ್ನು ನೀವು ಪರಿಗಣಿಸಬಹುದು. ಆದರೆ ಅತಿ ಹೆಚ್ಚು ರನ್‌ಗಳಿಸುವ ಆಟಗಾರರ ತಂಡ ಟೂರ್ನಿಯನ್ನು ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ. ನನಗೆ ಯಾರು ಸರಣಿ ಶ್ರೇಷ್ಠ ಆಟಗಾರನಾಗುತ್ತಾನೆ ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಮಾಡಬಲ್ಲ ಆಂಡ್ರೆ ರಸೆಲ್ ಅವರಂತಾ ಆಟಗಾರರು ಈ ಪ್ರಶಸ್ತಿಯನ್ನು ಗೆಲ್ಲಲಿದ್ದಾರೆ" ಎಂದು ಡ್ಯಾರೆನ್ ಸಮಿ ಭವಿಷ್ಯ ನುಡಿದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 22, 2021, 19:36 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X