ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಈ ಬದಲಾವಣೆ ಮಾಡಿದರೆ ಟೀಂ ಇಂಡಿಯಾ ಗೆಲ್ಲಲು ಸಾಧ್ಯ ಎಂದ ಹರ್ಭಜನ್ ಸಿಂಗ್

T20 World Cup: Harbhajan Singh Suggest These Changes Should Made In Team India

ಭಾನುವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿತು. 2022 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ ತಲುಪಲು ಭಾರತ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಲುಂಗಿ ಎನ್‌ಗಿಡಿ ಮತ್ತು ದಕ್ಷಿಣ ಆಫ್ರಿಕಾದ ವೇಗಿಗಳು ಮೊದಲ 10 ಓವರ್‌ಗಳಲ್ಲಿ ಭಾರತದ ಅಗ್ರ ಐದು ಆಟಗಾರರನ್ನು ಔಟ್ ಮಾಡಿದ ನಂತರ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 68 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು.

IND Vs BAN: ಬಾಂಗ್ಲಾ ವಿರುದ್ಧ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಆಡುವುದು ಪಕ್ಕಾ!IND Vs BAN: ಬಾಂಗ್ಲಾ ವಿರುದ್ಧ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಆಡುವುದು ಪಕ್ಕಾ!

ನಂತರ ಭಾರತದ ಬೌಲರ್ ಗಳು ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಅಗ್ರ ಮೂವರು ಆಟಗಾರರನ್ನು ಔಟ್ ಮಾಡುವ ಮೂಲಕ ಒತ್ತಡ ಹೇರಿದರು. ಆದರೆ, ಐಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಅರ್ಧಶತಕ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವನ್ನು ಸುಲಭಗೊಳಿಸಿದರು. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಗ್ರೂಪ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ಏರಿತು. ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರಮುಖ ಬದಲಾವಣೆಗಳನ್ನು ಮಾಡಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.

ರಾಹುಲ್ ಬದಲಿಗೆ ಪಂತ್ ಇನ್ನಿಂಗ್ಸ್ ಆರಂಭಿಸಲಿ

ರಾಹುಲ್ ಬದಲಿಗೆ ಪಂತ್ ಇನ್ನಿಂಗ್ಸ್ ಆರಂಭಿಸಲಿ

ಆರಂಭಿಕರಾಗಿರುವ ಕೆಎಲ್‌ ರಾಹುಲ್ ರನ್ ಗಳಿಸಲು ಪರದಾಡುತ್ತಿರುವ ಕಾರಣ ಆರಂಭಿಕ ಸಂಯೋಜನೆಯನ್ನು ಬದಲಾಯಿಸುವ ಬಗ್ಗೆ ತಂಡ ಚಿಂತಿಸಬೇಕು ಎಂದು ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ. ರಾಹುಲ್ ಕಳೆದ ಮೂರು ಪಂದ್ಯಗಳಲ್ಲಿ ಕೇವಲ ಒಂದಂಕಿ ರನ್ ಗಳಿಸಲು ಮಾತ್ರ ಸಫಲರಾಗಿದ್ದಾರೆ.

"ಟೀಂ ಇಂಡಿಯಾ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು, ತಂಡವು ಮುಂದೆ ಹೋಗುವ ಬಗ್ಗೆ ಯೋಚಿಸಬೇಕು. ಕೆಎಲ್ ರಾಹುಲ್ ಒಬ್ಬ ಶ್ರೇಷ್ಠ ಆಟಗಾರ, ಅದು ನಮಗೆಲ್ಲರಿಗೂ ತಿಳಿದಿದೆ, ಅವರು ಮ್ಯಾಚ್ ವಿನ್ನರ್. ಆದರೆ ಅವರು ಈ ರೀತಿ ತಮ್ಮ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದರೆ, ರಿಷಬ್ ಪಂತ್ ಅವರನ್ನು ಕರೆತರಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಹರ್ಭಜನ್ ಹೇಳಿದ್ದಾರೆ.

'ಖಾಸಗಿತನಕ್ಕೆ ಆಕ್ರಮಣ': ಹೋಟೆಲ್ ಕೋಣೆಯ ವಿಡಿಯೋ ಲೀಕ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ ಗರಂ

ದೀಪಕ್ ಹೂಡಾಗೆ ಅವಕಾಶ ನೀಡಬೇಕು

ದೀಪಕ್ ಹೂಡಾಗೆ ಅವಕಾಶ ನೀಡಬೇಕು

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಗಾಯಗೊಂಡರು ಮತ್ತು ಪಂತ್ ವಿಕೆಟ್ ಕೀಪಿಂಗ್ ಮುಂದುವರೆಸಿದರು. ಪಂತ್ ವಿಕೆಟ್‌ಕೀಪರ್ ಆಗಿ ಮುಂದುವರಿಯಬಹುದಾದರೂ, ಕೆಳ ಮಧ್ಯಮ ಕ್ರಮಾಂಕದಲ್ಲಿ ಕಾರ್ತಿಕ್ ಸ್ಥಾನವನ್ನು ತುಂಬಲು ಭಾರತವು ದೀಪಕ್ ಹೂಡಾ ಅವರಿಗೆ ಅವಕಾಶ ನೀಡಬೇಕು, ಇದು ತಂಡಕ್ಕೆ ಹೆಚ್ಚುವರಿ ಸ್ಪಿನ್ ಆಯ್ಕೆಯನ್ನು ಒದಗಿಸುತ್ತದೆ ಎಂದು ಹರ್ಭಜನ್ ಹೇಳಿದರು.

"ಕಾರ್ತಿಕ್ ಗಾಯಗೊಂಡಿರುವಂತೆ ತೋರುತ್ತಿದೆ, ಅವರ ಸ್ಥಿತಿ ಏನೆಂದು ನನಗೆ ತಿಳಿದಿಲ್ಲ. ಅವರು ಆಡದಿದ್ದರೆ, ರಿಷಬ್ ಪಂತ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ತೆರೆಯಬಹುದು. ಆಗ ಎಡ-ಬಲ ಸಂಯೋಜನೆಯನ್ನು ಪಡೆಯಬಹುದು" ಎಂದು ಅವರು ಹೇಳಿದರು.

ಅಶ್ವಿನ್ ಬದಲಿಗೆ ಚಹಾಲ್ ಆಡಲಿ

ಅಶ್ವಿನ್ ಬದಲಿಗೆ ಚಹಾಲ್ ಆಡಲಿ

ರವಿಚಂದ್ರನ್ ಅಶ್ವಿನ್ ಬದಲಿಗೆ ಭಾರತ ತಂಡ ಯುಜುವೇಂದ್ರ ಚಹಾಲ್ ಅವರನ್ನು ಆಡಿಸುವ ಅಗತ್ಯವಿದೆ ಎಂದು ಹರ್ಭಜನ್ ಹೇಳಿದರು. ಆತನನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳದಿರುವುದು ತಪ್ಪು ಎಂದು ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧ ಅಶ್ವಿನ್ ತಮ್ಮ ನಾಲ್ಕು ಓವರ್‌ಗಳಲ್ಲಿ 43 ರನ್‌ಗಳನ್ನು ಬಿಟ್ಟುಕೊಟ್ಟರು.

"ಅಶ್ವಿನ್ ಬದಲಿಗೆ ಯುಜುವೇಂದ್ರ ಚಹಾಲ್ ಅವರನ್ನು ಕರೆತರಬೇಕು ಎಂದು ನಾನು ಭಾವಿಸುತ್ತೇನೆ. ಅವರು ವಿಕೆಟ್ ಪಡೆಯುವ ಬೌಲರ್. ಚಹಾಲ್ ದೊಡ್ಡ ಮ್ಯಾಚ್ ವಿನ್ನರ್ ಮತ್ತು ಅವರು ವಿಶ್ವದ ಅತ್ಯುನ್ನತ ಟಿ20 ಬೌಲರ್‌ಗಳಲ್ಲಿ ಒಬ್ಬರು," ಎಂದು ಅವರು ಹೇಳಿದರು.

Story first published: Monday, October 31, 2022, 15:11 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X