ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾಕ್ಕೆ ಇದು ಒಳ್ಳೆ ಸುದ್ದಿಯಲ್ಲ: ಹರ್ಭಜನ್ ಸಿಂಗ್‌ ಆತಂಕಕ್ಕೆ ಕಾರಣವೇನು?

T20 World Cup: Harbhajan Singh Warn Team India About Ben Stokes In Semi Final

ಗೆಲ್ಲಲೇಬೇಕಾದ ಪಂದ್ಯದಲ್ಲಿ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಜಯ ಸಾಧಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದೆ. ಆದರೆ, ಶ್ರೀಲಂಕಾ ವಿರುದ್ಧ ಬೆನ್‌ಸ್ಟೋಕ್ಸ್ ಆಡಿದ ಜವಾಬ್ದಾರಿಯುತ ಇನ್ನಿಂಗ್ಸ್‌ ಭಾರತ ತಂಡಕ್ಕೆ ಒಳ್ಳೆಯ ಸುದ್ದಿಯಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಬೆನ್ ಸ್ಟೋಕ್ಸ್ 36 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ, ತಮ್ಮ ಅಂತಿಮ ಟಿ20 ವಿಶ್ವಕಪ್ 2022 ಗ್ರೂಪ್ 1 ಸೂಪರ್ 12 ಪಂದ್ಯದಲ್ಲಿ 142 ರನ್ ಗುರಿಯನ್ನು ಬೆನ್ನಟ್ಟಲು ಇಂಗ್ಲೆಂಡ್‌ಗೆ ಸಹಾಯ ಮಾಡಿದರು. ಈ ಗೆಲುವು ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್‌ಗೆ ಅರ್ಹತೆ ಪಡೆಯುವಂತೆ ಮಾಡಿತು.

ಭಾರತ Vs ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಸೆಮಿಫೈನಲ್ ಲೆಕ್ಕಾಚಾರ ಹೀಗಿರುತ್ತೆಭಾರತ Vs ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಸೆಮಿಫೈನಲ್ ಲೆಕ್ಕಾಚಾರ ಹೀಗಿರುತ್ತೆ

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಹರ್ಭಜನ್‌ ಸಿಂಗ್‌ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದಾರೆ. "ಇಂತಹ ಹೊಡೆತಗಳು ಆಟಗಾರನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ, ನಿಮ್ಮದು ಮಾತ್ರವಲ್ಲ, ಅಂತಹ ಪಂದ್ಯಗಳು ಖಂಡಿತವಾಗಿಯೂ ನಿಮ್ಮನ್ನು ತಂಡವಾಗಿ ಮೇಲಕ್ಕೆತ್ತುತ್ತವೆ. ಇಂಗ್ಲೆಂಡ್‌ಗೆ ಆತ ಫಾರ್ಮ್‌ಗೆ ಮರಳುವುದು ಅಗತ್ಯವಾಗಿತ್ತು, ಅದರಲ್ಲೂ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಆತ ಲಯಕಂಡುಕೊಂಡಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ" ಎಂದು ಹೇಳಿದರು.

T20 World Cup: Harbhajan Singh Warn Team India About Ben Stokes In Semi Final

ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ!

ಬೆನ್‌ಸ್ಟೋಕ್ಸ್ ಫಾರ್ಮ್‌ಗೆ ಮರಳಿರುವುದು ಇಂಗ್ಲೆಂಡ್‌ಗೆ ಒಳ್ಳೆಯ ಸುದ್ದಿ ಆದರೆ ಭಾರತಕ್ಕೆ ಇದು ಒಳ್ಳೆಯ ಸುದ್ದಿ ಅಲ್ಲ ಎಂದು ಅವರು ಹೇಳಿದ್ದಾರೆ. ಭಾರತ ತನ್ನ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಜಯಗಳಿಸಿದರೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದು, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಾಗುತ್ತದೆ. ಇದು ಹರ್ಭಜನ್ ಸಿಂಗ್ ಆತಂಕಕ್ಕೆ ಕಾರಣವಾಗಿದೆ.

ಶ್ರೀಲಂಕಾ ವಿರುದ್ಧ ಬೆನ್‌ಸ್ಟೋಕ್ಸ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ತಮ್ಮ ವಿಕೆಟ್‌ನ ಮಹತ್ವವನ್ನು ಅರ್ಥಮಾಡಿಕೊಂಡರು. ಇದು ನಿಧಾನಗತಿಯ ವಿಕೆಟ್ ಮತ್ತು ಅವರು ಒಂದು ಮತ್ತು ಎರಡು ರನ್ ಓಡುವ ಮೂಲಕ ತಂಡವನ್ನು ಗೆಲುವಿನ ಕಡೆ ಮುನ್ನಡೆಸಿದರು. ಸಿಕ್ಸರ್ ಬಾರಿಸುವ ವಿಷಯದಲ್ಲಿ ಅವರು ಯಾರಿಗಿಂತ ಕಡಿಮೆಯಿಲ್ಲ ಆದರೆ ಅವರು ಸಿಕ್ಸರ್ ಹೊಡೆಯಲು ಪ್ರಯತ್ನಿಸಲಿಲ್ಲ, ನೆಲದ ಉದ್ದಕ್ಕೂ ಆಡಿದರು ಮತ್ತು ಎರಡು-ಎರಡು ರನ್ ಗಳಿಸಿದರು.

T20 World Cup: Harbhajan Singh Warn Team India About Ben Stokes In Semi Final

ಒಂದು ವೇಳೆ ಬೆನ್‌ಸ್ಟೋಕ್ಸ್ ಇಲ್ಲದಿದ್ದರೆ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

"ನಾವು ಅದನ್ನು ಕೊನೆಯ ಎರಡು ಓವರ್‌ಗಳಲ್ಲಿಯೂ ನೋಡಿದ್ದೇವೆ. ಇದು ಅತ್ಯಂತ ಪ್ರಬುದ್ಧ ನಾಕ್ ಆಗಿತ್ತು. ಬೆನ್ ಸ್ಟೋಕ್ಸ್ ಕ್ರೀಸ್‌ನಲ್ಲಿ ಉಳಿಯುವುದು ಮುಖ್ಯವಾಗಿತ್ತು. ಬೇರೆ ಯಾವುದೇ ಆಟಗಾರರು ಅಲ್ಲಿದ್ದರೆ ಇಂಗ್ಲೆಂಡ್‌ನ ಕಥೆ ಕೊನೆಗೊಳ್ಳಬಹುದು." ಎಂದು ಹೇಳಿದರು.

ಬೆನ್ ಸ್ಟೋಕ್ಸ್ ಇದ್ದುದರಿಂದ ಇಂಗ್ಲೆಂಡ್ ಜಯಗಳಿಸಿದೆ, ಸ್ಟೋಕ್ಸ್ ವಿಕೆಟ್ ಸಹ ಪಡೆದರು. ಅವರನ್ನೇ ಪಂದ್ಯದ ಆಟಗಾರನಾಗಿ ಆಯ್ಕೆಯಾಗಬೇಕಿತ್ತು, ಆದರೆ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.

Story first published: Saturday, November 5, 2022, 21:09 [IST]
Other articles published on Nov 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X