ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈವರೆಗೆ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಬೌಲರ್‌ಗಳು ಇವರು

T20 World Cup: Know About The Bowlers Who hold the record for the hat-tricks in T20 World Cup history

ಟಿ20 ವಿಶ್ವಕಪ್ 2022 ಈಗಾಗಲೇ ರೋಚಕ ಪಂದ್ಯಗಳಿಂದ, ಅಚ್ಚರಿಯ ಫಲಿತಾಂಶಗಳಿಂದ ಸಾಕಷ್ಟು ಗಮನ ಸೆಳೆಯುತ್ತಿದೆ. ಇನ್ನು ಅರ್ಹತಾ ಸುತ್ತಿನ ಪಂದ್ಯದಲ್ಲೇ ಈ ಬಾರಿ ಹ್ಯಾಟ್ರಿಕ್ ವಿಕೆಟ್ ದಾಖಲಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯುಎಇ ತಂಡದ ಕಾರ್ತಿಕ್ ಮೇಯಪ್ಪನ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.

ಟಿ20 ಕ್ರಿಕೆಟ್ ಬ್ಯಾಟರ್‌ಗಳ ಆಟ ಎಂದು ಹೇಳಲಾಗುತ್ತದೆ ಆದರೂ ಕೂಡ ಕೆಲವೊಮ್ಮೆ ಬೌಲರ್‌ಗಳು ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ. ಮಂಗಳವಾರ ಗೀಲಾಂಗ್‌ನಲ್ಲಿ ನಡೆದ ಶ್ರೀಲಂಕಾ ಮತ್ತು ಯುಎಇ ನಡುವಿನ ಟಿ20 ಮೊದಲನೇ ಸುತ್ತಿನ ಪಂದ್ಯದ ವೇಳೆ, ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಹ್ಯಾಟ್ರಿಕ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು.

Asia Cup 2023: ಪಾಕಿಸ್ತಾನಕ್ಕೆ ಭಾರತ ತಂಡ ಬರಲ್ಲ ಅಂದಿದ್ದಕ್ಕೆ ಕೋಪಗೊಂಡ ಪಿಸಿಬಿ ಹೇಳಿದ್ದೇನು ಗೊತ್ತಾ?Asia Cup 2023: ಪಾಕಿಸ್ತಾನಕ್ಕೆ ಭಾರತ ತಂಡ ಬರಲ್ಲ ಅಂದಿದ್ದಕ್ಕೆ ಕೋಪಗೊಂಡ ಪಿಸಿಬಿ ಹೇಳಿದ್ದೇನು ಗೊತ್ತಾ?

ಮೇಯಪ್ಪನ್ 15ನೇ ಓವರ್‌ನ 4, 5 ಮತ್ತು 6ನೇ ಎಸೆತದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದರು. 15ನೇ ಓವರ್‌ನ 4ನೇ ಎಸೆತದಲ್ಲಿ ಭಾನುಕಾ ರಾಜಪಕ್ಸೆಯವರನ್ನು ಔಟ್ ಮಾಡಿದರು. ಚರಿತ್ ಅಸಲಂಕಾ ಅವರು ಗೋಲ್ಡನ್ ಡಕ್‌ಗೆ ವಿಕೆಟ್‌ ಕೀಪರ್‌ಗೆ ಕ್ಯಾಚ್ ನೀಡಿದರು. ನಂತರ ಲೆಗ್ ಸ್ಪಿನ್ನರ್ ದಸುನ್ ಶಂಕಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದರು.

ಇದುವರೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೌಲರ್ ಗಳಿಂದ 20 ಹ್ಯಾಟ್ರಿಕ್ ಗಳು ಮಾತ್ರ ದಾಖಲಾಗಿವೆ. ಈವರೆಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಕೇವಲ ನಾಲ್ಕು ಬೌಲರ್ ಗಳು ಮಾತ್ರ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಬೌಲರ್ ಒಂದಕ್ಕಿಂತ ಹೆಚ್ಚು ಹ್ಯಾಟ್ರಿಕ್ ದಾಖಲಿಸಲು ಸಾಧ್ಯವಾಗಿಲ್ಲ. 2009 ಮತ್ತು 2016ರ ಟಿ20 ವಿಶ್ವಕಪ್‌ನ ನಡುವೆ ಒಂದೇ ಒಂದು ಹ್ಯಾಟ್ರಿಕ್ ವಿಕೆಟ್ ಪಡೆದಿರಲಿಲ್ಲ. ಆದಾಗ್ಯೂ, 2021 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮೂರು ಹ್ಯಾಟ್ರಿಕ್‌ಗಳು ದಾಖಲಾದವು.

 ಬಾಂಗ್ಲಾದೇಶವನ್ನು ಕಾಡಿದ್ದ ಬ್ರೆಟ್ ಲೀ

ಬಾಂಗ್ಲಾದೇಶವನ್ನು ಕಾಡಿದ್ದ ಬ್ರೆಟ್ ಲೀ

ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಂತಕಥೆ ಬ್ರೆಟ್ ಲೀ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲಿಗರಾಗಿದ್ದರೆ. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಅವರು ಈ ಸಾಧನೆ ಮಾಡಿದರು.

ಟೂರ್ನಿಯ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯ ಬಾಂಗ್ಲಾದೇಶವನ್ನು ಎದುರಿಸಿತ್ತು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಬ್ರೆಟ್ ಲೀ 17 ನೇ ಓವರ್ ನಲ್ಲಿ ಪಂದ್ಯದ ಗತಿಯನ್ನು ಬದಲಾಯಿಸಿದರು.

ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ನಿರ್ಮಿಸಿದರು. ಆ ಆಟದಲ್ಲಿ ಶಕೀಬ್ ಅಲ್ ಹಸನ್, ಮಶ್ರಫೆ ಮೊರ್ತಾಜಾ ಮತ್ತು ಅಲೋಕ್ ಕಪಾಲಿ ಬಲಿಯಾದರು. ಬ್ರೆಟ್‌ ಲೀ 17ನೇ ಓವರ್ ನ ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ವಿಕೆಟ್‌ಗಳನ್ನು ಪಡೆದರು.

ಬಾಂಗ್ಲಾದೇಶ ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು. ಆಸ್ಟ್ರೇಲಿಯಾ 14 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟುವ ಮೂಲಕ ವಿಜಯ ಸಾಧಿಸಿತು.

ಬಿಸಿಸಿಐ ಅಧ್ಯಕ್ಷ ಹುದ್ದೆಗೆ ರೋಜರ್ ಬಿನ್ನಿ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ

ನೆದರ್ಲ್ಯಾಂಡ್ಸ್ ವಿರುದ್ಧ ಮಿಂಚಿದ್ದ ಕರ್ಟಿಸ್ ಕ್ಯಾಂಫರ್

ನೆದರ್ಲ್ಯಾಂಡ್ಸ್ ವಿರುದ್ಧ ಮಿಂಚಿದ್ದ ಕರ್ಟಿಸ್ ಕ್ಯಾಂಫರ್

ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಬ್ರೆಟ್ ಲೀ ಹ್ಯಾಟ್ರಿಕ್ ಸಾಧನೆ ಮಾಡಿದ 14 ವರ್ಷಗಳ ನಂತರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಹ್ಯಾಟ್ರಿಕ್ ಬಂದಿತು. 2021 ರಲ್ಲಿ ಟಿ 20 ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ, ಐರ್ಲೆಂಡ್ ಅಬುಧಾಬಿಯಲ್ಲಿ ನೆದರ್ಲ್ಯಾಂಡ್ಸ್ ಅನ್ನು ಎದುರಿಸಿತು.

ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಮೊದಲು ಬ್ಯಾಟಿಂಗ್ ಆರಂಬಿಸಿತು. ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲಿಸಿದ ಕರ್ಟಿಸ್ ಕ್ಯಾಂಫರ್ ನೆದರ್ಲ್ಯಾಂಡ್ಸ್ ತಂಡಕ್ಕೆ ಶಾಕ್ ನೀಡಿದರು. ಕ್ಯಾಂಫರ್ 10 ನೇ ಓವರ್ ಬೌಲಿಂಗ್ ಮಾಡುವಾಗ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದರು.

ಕಾಲಿನ್ ಅಕರ್ಮನ್, ರಿಯಾನ್ ಟೆನ್ ಡೋಸ್ಚೇಟ್, ಸ್ಕಾಟ್ ಎಡ್ವರ್ಡ್ಸ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ಅವರು ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಔಟ್ ಆದರು. ನಂತರ ಐರ್ಲೆಂಡ್ 15.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಬೆನ್ನಟ್ಟಿ ಪಂದ್ಯವನ್ನು ಗೆದ್ದುಕೊಂಡಿತು.

ಹರಿಣಗಳನ್ನು ಕಟ್ಟಿಹಾಕಿದ್ದ ಹಸರಂಗ

ಹರಿಣಗಳನ್ನು ಕಟ್ಟಿಹಾಕಿದ್ದ ಹಸರಂಗ

ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ವನಿಂದು ಹಸರಂಗಾ ಅವರ ಸ್ಥಿರ ಪ್ರದರ್ಶನಕ್ಕಾಗಿ ಐಸಿಸಿ ಟಿ20 ವಿಶ್ವಕಪ್ 2021 ರ ಅತ್ಯಂತ ಮೌಲ್ಯಯುತ ಆಟಗಾರರಾಗಿ ಆಯ್ಕೆಯಾದರು. ಹಸರಂಗ ಕಳೆದ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಶಾರ್ಜಾದಲ್ಲಿ ನಡೆದ ಟಿ20 ವಿಶ್ವಕಪ್‌ನ 25 ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಪಡೆದು ಸಾಧನೆ ಮಾಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 142 ರನ್‌ಗಳಿಗೆ ಆಲೌಟ್ ಆಯಿತು, ಪಾಥುಮ್ ನಿಸ್ಸಾಂಕ 72 ರನ್ ಗಳಿಸಿದರು. ಕಡಿಮೆ ಮೊತ್ತವನ್ನು ರಕ್ಷಿಸಿಕೊಳ್ಳಲು ಶ್ರೀಲಂಕಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಬೇಕಿತ್ತು.

ಸ್ಪಿನ್-ಬೌಲಿಂಗ್ ಆಲ್-ರೌಂಡರ್ ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ ಮತ್ತು ಡ್ವೈನ್ ಪ್ರಿಟೋರಿಯಸ್ ಅವರನ್ನು ಸತತ ಮೂರು ಎಸೆತಗಳಲ್ಲಿ ಔಟ್ ಮಾಡಿದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ಪಂದ್ಯವನ್ನು ಗೆದ್ದುಕೊಂಡಿತು.

ಆಂಗ್ಲರ ವಿರುದ್ಧ ರಬಾಡ ಮಿಂಚು

ಆಂಗ್ಲರ ವಿರುದ್ಧ ರಬಾಡ ಮಿಂಚು

ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರು ಟಿ 20 ವಿಶ್ವಕಪ್ 2021 ರಲ್ಲಿ ಮೂರನೇ ಮತ್ತು ಅಂತಿಮ ಹ್ಯಾಟ್ರಿಕ್ ದಾಖಲಿಸಿದರು, 39 ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದರು.

ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದಾಗ್ಯೂ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅಜೇಯ 94 ಮತ್ತು ಐಡೆನ್ ಮಾರ್ಕ್ರಾಮ್ ಅಜೇಯ 52 ನಡುವಿನ 103 ರನ್ ಜೊತೆಯಾಟದಿಂದಾಗಿ ದಕ್ಷಿಣ ಆಫ್ರಿಕಾ ಒಟ್ಟು 2 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಇಂಗ್ಲೆಂಡ್ ಈ ಮೊತ್ತವನ್ನು ಬೆನ್ನಟ್ಟಿತು. 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿದ್ದ ಇಂಗ್ಲೆಂಡ್‌ ಗೆಲುವಿಗೆ ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಅಂತಿಮ ಓವರ್ ಬೌಲಿಂಗ್ ಮಾಡಿದ ರಬಾಡ ಮೊದಲ ಮೂರು ಎಸೆತಗಳಲ್ಲಿ ವಿಕೆಟ್‌ಗಳನ್ನು ಪಡೆದರು. ರಬಾಡ ಅವರ ಅದ್ಭುತ ಬೌಲಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ 10 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

Story first published: Wednesday, October 19, 2022, 5:15 [IST]
Other articles published on Oct 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X