ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಹಿರಿಯ ವೇಗಿ ಮೊಹಮ್ಮದ್ ಶಮಿ ಐಪಿಎಲ್, ಟಿ20 ಕ್ರಿಕೆಟ್‌ನಲ್ಲಿ ದಾಖಲೆಗಳು

T20 World Cup: Team India Pacer Mohammad Shami T20I, IPL Bowling Stats, Records

ನಿರೀಕ್ಷೆಯಂತೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಹಿರಿಯ ವೇಗಿ ಮೊಹಮ್ಮದ್ ಶಮಿ ಆಯ್ಕೆಯಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿರುವ ಮೊಹಮ್ಮದ್ ಶಮಿ ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಅಕ್ಟೋಬರ್ 17 ಮತ್ತು 19 ರಂದು ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

ಮೊಹಮ್ಮದ್ ಶಮಿ ಈ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅಕ್ಟೋಬರ್ 23ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ, ಅಭ್ಯಾಸ ಪಂದ್ಯಗಳಲ್ಲಿ ಶಮಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.

T20 World Cup: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಈ ಮೂವರ ನಡುವೆ ಭಾರಿ ಪೈಪೋಟಿT20 World Cup: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಈ ಮೂವರ ನಡುವೆ ಭಾರಿ ಪೈಪೋಟಿ

ಗಾಯಗೊಂಡು ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ಮೊಹಮ್ಮದ್ ಶಮಿ ಸಮರ್ಥವಾಗಿ ತುಂಬಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ವಿಶ್ವಕಪ್ ತಂಡದ ಸ್ಟಾಂಡ್‌ ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಶಮಿ, 15 ಸದಸ್ಯರ ಬಳಗಕ್ಕೆ ಬಂದಿದ್ದಾರೆ.

ಭಾರತದ ಪರವಾಗಿ ಹೆಚ್ಚಿನ ಟಿ20 ಪಂದ್ಯಗಳನ್ನು ಆಡದಿದ್ದರು, ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಐಪಿಎಲ್‌ನಲ್ಲಿ ನೀಡದ ಪ್ರದರ್ಶನದ ಆಧಾರದ ಮೇಲೆಯೇ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು.

ಆಸ್ಟ್ರೇಲಿಯಾ ಪಿಚ್‌ಗಳ ಬಗ್ಗೆ ಶಮಿಗೆ ಇದೆ ಅನುಭವ

ಆಸ್ಟ್ರೇಲಿಯಾ ಪಿಚ್‌ಗಳ ಬಗ್ಗೆ ಶಮಿಗೆ ಇದೆ ಅನುಭವ

ಮೊಹಮ್ಮದ್ ಶಮಿ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಶಮಿ ಆಡಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು.

2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಟೂರ್ನಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದರು. ಅವರ ಅನುಭವ ಭಾರತಕ್ಕೆ ಈ ಬಾರಿ ವಿಶ್ವಕಪ್‌ನಲ್ಲಿ ಲಾಭವಾಗಲಿದೆ.

ಟಿ20 ವಿಶ್ವಕಪ್ 2022: ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಧಿಕೃತ ಆಯ್ಕೆ, ಅಂತಿಮ 15 ಆಟಗಾರರ ಸ್ಕ್ವಾಡ್‌ ಇಲ್ಲಿದೆ

ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಮೊಹಮ್ಮದ್ ಶಮಿ

ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಮೊಹಮ್ಮದ್ ಶಮಿ

ಏಷ್ಯಾಕಪ್‌ನಲ್ಲಿ ಭಾರತದ ಬೌಲರ್ ಗಳ ಕಳಪೆ ಪ್ರದರ್ಶನದ ನಂತರ. ಟಿ20 ವಿಶ್ವಕಪ್‌ನಲ್ಲಿ ಶಮಿ ಆಯ್ಕೆ ಮಾಡುವಂತೆ ಸಾಕಷ್ಟು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದರು. ಟಿ20 ವಿಶ್ವಕಪ್ ತಂಡದ ಸ್ಟಾಂಡ್ ಬೈ ಆಟಗಾರರಲ್ಲಿ ಶಮಿಯನ್ನು ಹೆಸರಿಸಲಾಗಿತ್ತು.

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಿದ್ದರು. ಕೋವಿಡ್ ಸೋಂಕಿಗೆ ತುತ್ತಾದ ಕಾರಣ ಎರಡೂ ಸರಣಿಗಳಿಂದ ಹೊರಗುಳಿದಿದ್ದರು. ಕೋವಿಡ್‌ನಿಂದ ಚೇತರಿಸಿಕೊಂಡ ನಂತರ, ಎನ್‌ಸಿಎಯಲ್ಲಿ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

2021 ರ ವಿಶ್ವಕಪ್‌ನಲ್ಲಿ ಆಡಿದ್ದ ಶಮಿ

2021 ರ ವಿಶ್ವಕಪ್‌ನಲ್ಲಿ ಆಡಿದ್ದ ಶಮಿ

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ 2021 ರ ವಿಶ್ವಕಪ್‌ನಲ್ಲಿ ಶಮಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾಗವಹಿಸಿದ್ದರು. ವಿಶ್ವಕಪ್‌ನಲ್ಲಿ ಐದು ಪಂದ್ಯಗಳನ್ನಾಡಿದ್ದ ಶಮಿ, 8.84 ರ ಎಕಾನಮಿಯಲ್ಲಿ ಆರು ವಿಕೆಟ್ ಪಡೆದಿದ್ದರು.

ಅದಾದ ನಂತರ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಆದರೆ, ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಅವರು ಅತ್ಯದ್ಭುತ ಪ್ರದರ್ಶನ ನೀಡಿದರು.

ಗುಜರಾತ್ ಟೈಟಾನ್ಸ್ ಪ್ರಮುಖ ಬೌಲರ್ ಆಗಿದ್ದ ಶಮಿ

ಗುಜರಾತ್ ಟೈಟಾನ್ಸ್ ಪ್ರಮುಖ ಬೌಲರ್ ಆಗಿದ್ದ ಶಮಿ

2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ ಪರವಾಗಿ ಆಡಿದ್ದ ಶಮಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಚೊಚ್ಚಲ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗುವಲ್ಲಿ ಶಮಿ ಪಾತ್ರ ಮುಖ್ಯವಾಗಿತ್ತು. 2022ರ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಮಿಂಚಿದ್ದರು. ಇದರಲ್ಲಿ ಪವರ್‌ಪ್ಲೇಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಒಟ್ಟಾರೆ 93 ಪಂದ್ಯಗಳನ್ನಾಡಿರುವ ಶಮಿ 99 ವಿಕೆಟ್ ಪಡೆದಿದ್ದಾರೆ.

ಮೊಹಮ್ಮದ್ ಶಮಿ ಭಾರತದ ಪರವಾಗಿ 17 ಟಿ20 ಪಂದ್ಯಗಳನ್ನು ಆಡಿದ್ದಾರೆ. 17 ಪಂದ್ಯಗಳಿಂದ ಅವರು 18 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ 9.54 ಆಗಿರುವುದು ಕಳವಳಕಾರಿಯಾದರೂ, ಅವರ ಐಪಿಎಲ್ ಅಂಕಿ ಅಂಶ ಸದ್ಯ ಆಶಾದಾಯಕವಾಗಿವೆ.

Story first published: Friday, October 14, 2022, 21:10 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X